ಗುರುವಾರ , ಡಿಸೆಂಬರ್ 5, 2019
19 °C

ಮತದಾರರ ಪಟ್ಟಿಯಲ್ಲಿ ಹೆಸರು ಸೇರ್ಪಡೆಯಾಗದೆ ಹಕ್ಕು ಕಸಿಯುವ ಈ ಪರಿ

Published:
Updated:

ಅರ್ಹತೆ ಇದ್ದೂ ಹಕ್ಕು ಚಲಾಯಿಸಲಾಗದವರು ಲೇಖನ (ಪ್ರ.ವಾ., ಮಾ. 12, ಚೇತನಾ ತೀರ್ಥಹಳ್ಳಿ) ಸಕಾಲಿಕವಾಗಿದೆ. ಲೋಕಸಭಾ ಚುನಾವಣೆಯ ಈ ಹೊತ್ತಿನಲ್ಲಿ ಪ್ರಜೆಗಳು ಇದನ್ನು ಗಂಭೀರವಾಗಿ ಪರಿಗಣಿಸಬೇಕಾಗಿದೆ. ದೇಶದ ಸುಮಾರು 2.10 ಕೋಟಿ ಮಹಿಳೆಯರು ಈ ಬಾರಿ ಮತದಾನದ ಹಕ್ಕಿನಿಂದ ವಂಚಿತರಾಗಿದ್ದಾರೆ ಎಂಬ ವರದಿಯನ್ನು ಓದಿ ಆಘಾತವಾಯಿತು.

ಮತದಾನದ ಪಟ್ಟಿಯಲ್ಲಿ ಅವರ ಹೆಸರು ಸೇರ್ಪಡೆ ಆಗದಿರುವುದರಿಂದ ಅವರ ಹಕ್ಕನ್ನು ಕಸಿದುಕೊಂಡಂತಲ್ಲವೇ? ನಮ್ಮ ಪ್ರಜಾಪ್ರಭುತ್ವದಲ್ಲಿ ವ್ಯವಸ್ಥೆ ಎಷ್ಟೊಂದು ಜಡ್ಡು ಗಟ್ಟಿದೆ ಎನ್ನುವುದಕ್ಕೆ ಇದಕ್ಕಿಂತ ಬೇರೆ ಉದಾಹರಣೆ ಬೇಕೆ? ಚುನಾವಣೆಯಲ್ಲಿ ಮತದಾನದ ಪ್ರಮಾಣ ಕಡಿಮೆಯಾಗಲು ಇದು ಬಹಳ ಮುಖ್ಯ ಕಾರಣ. ನಮ್ಮ ಸರ್ಕಾರವು ಹೆಸರು ಸೇರ್ಪಡೆ ಹಾಗೂ ದೇಶದೊಳಗಿನ ವಲಸಿಗರಿಗೆ ಗುರುತಿನ ಚೀಟಿ ವರ್ಗಾವಣೆಗೆ ಅನುಕೂಲಕರ ವಾತಾವರಣ ಕಲ್ಪಿಸುವ ನಿಟ್ಟಿನಲ್ಲಿ ಗಂಭೀರ ಚಿಂತನೆ ನಡೆಸಬೇಕು.

ವೀಣಾ ಸುಬ್ರಹ್ಮಣ್ಯ, ಅರೆಕೆರೆ

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು