ಬುಧವಾರ, ನವೆಂಬರ್ 20, 2019
22 °C

ಪ್ರಧಾನಿ ಗಮನಕ್ಕೆ ಬಂದಿದೆಯೇ?

Published:
Updated:

ಪುಣೆಯಲ್ಲಿ ಇತ್ತೀಚೆಗೆ ನಡೆದ ಪ್ರಧಾನಿ ನರೇಂದ್ರ ಮೋದಿಯವರ ಕಾರ್ಯಕ್ರಮದ ವೇದಿಕೆಯ ಸಿದ್ಧತೆಗಾಗಿ ಕಾಲೇಜು ಮೈದಾನವೊಂದರ ಸುತ್ತಮುತ್ತಲಿನ ಹತ್ತಾರು ಮರಗಳಿಗೆ ಕುತ್ತು ಒದಗಿತು. ಅಲ್ಲದೆ, ವೇದಿಕೆಯವರೆಗೂ ಪ್ರಧಾನಿಯ ಕಾರು ಸಲೀಸಾಗಿ ಹೋಗುವಂತಾಗಲು ಟಾರ್ ರಸ್ತೆಯನ್ನೂ ನಿರ್ಮಿಸಲಾಗಿತ್ತು! ಕಾರ್ಯಕ್ರಮದ ಉಸ್ತುವಾರಿ ಹೊತ್ತಿದ್ದ ಉಜ್ವಲ್ ಕೇಸ್ಕರ್ ಎಂಬುವರು ‘ಮೋದಿಯವರ ಕಾರ್ಯಕ್ರಮಕ್ಕೆಂದು ಈ ಎಲ್ಲ ಏರ್ಪಾಡು. ಕಾರ್ಯಕ್ರಮ ಮುಗಿದ ಮೇಲೆ ರಸ್ತೆ ಉಳಿಸಿಕೊಳ್ಳುವುದು ಅಥವಾ ಅಗೆದು ಹಾಕುವುದು ಕಾಲೇಜಿನ ಆಡಳಿತಕ್ಕೆ ಸೇರಿದ್ದು’ ಎಂದು ಹೇಳಿದರು! ಒಂದೆರಡು ಗಂಟೆಗಳ ಕಾರ್ಯಕ್ರಮಕ್ಕಾಗಿ ಮರಗಿಡಗಳ ಮಾರಣಹೋಮ ಮತ್ತು ರಸ್ತೆ ನಿರ್ಮಾಣದ ಅಗತ್ಯವಿತ್ತೇ? ಈ ತೆರನಾದ ದುಂದುಗಾರಿಕೆಯನ್ನು, ಪರಿಸರ ನಾಶವನ್ನು ಪ್ರಧಾನಿ ಒಪ್ಪುವರೇ? ಇದು ಅವರ ಗಮನಕ್ಕೆ ಬಂದಿದೆಯೇ ಅಥವಾ ಯಾರಾದರೂ ಇದನ್ನು ಅವರ ಗಮನಕ್ಕೆ ತರುವರೇ? ಏಕೆಂದರೆ, ಮುಂದೆ ಇಂಥ ಅವಾಂತರಗಳು ಆಗಬಾರದಲ್ಲ!

– ಸಾಮಗ ದತ್ತಾತ್ರಿ, ಬೆಂಗಳೂರು

ಪ್ರತಿಕ್ರಿಯಿಸಿ (+)