ರಾಹುಲ್ ಸಭೆಯಲ್ಲಿ ಮೋದಿ ಪರ ಘೋಷಣೆ: ಇದು ಸಭ್ಯತೆಯ ಲಕ್ಷಣವಲ್ಲ

ಶನಿವಾರ, ಏಪ್ರಿಲ್ 20, 2019
32 °C

ರಾಹುಲ್ ಸಭೆಯಲ್ಲಿ ಮೋದಿ ಪರ ಘೋಷಣೆ: ಇದು ಸಭ್ಯತೆಯ ಲಕ್ಷಣವಲ್ಲ

Published:
Updated:

ರಾಹುಲ್ ಗಾಂಧಿಯವರ ಬೆಂಗಳೂರಿನ ಸಭೆಯಲ್ಲಿ ಕೆಲವರು ಭಿತ್ತಿಪತ್ರಗಳನ್ನು ಹಿಡಿದು ಮೋದಿ ಪರ ಘೋಷಣೆಗಳನ್ನು ಕೂಗಿ ಸಭೆಯಲ್ಲಿ ಗೊಂದಲ ಉಂಟು ಮಾಡಲು ಯತ್ನಿಸಿದ್ದು ತೀವ್ರ ಖಂಡನೀಯ. ಇದು ಸಭ್ಯ ನಾಗರಿಕರ ಲಕ್ಷಣವಲ್ಲ. ಇದರ ಹಿಂದಿನ ವ್ಯಕ್ತಿಗಳನ್ನು ಮತ್ತು ಶಕ್ತಿಯನ್ನು ಗುರುತಿಸುವುದು  ಕಷ್ಟವೇನಲ್ಲ. 

ಯಾರೋ ಪುಂಡು ಪೋಕರಿಗಳು ಮಾಡಿದರೆ ಆ ಮಾತು ಬೇರೆ. ಕೆಲವು ಟೆಕಿಗಳು ಇದರ ಹಿಂದೆ ಇರುವುದು ಪ್ರಜ್ಞಾವಂತರನ್ನು ವಿಚಲಿತರನ್ನಾಗಿಸಿದೆ. ರಾಹುಲ್ ಕಾರ್ಯವೈಖರಿ, ಅವರ ಪಕ್ಷದ ತತ್ವ, ಆದರ್ಶಗಳಲ್ಲಿ ವಿಶ್ವಾಸ ಇಲ್ಲದಿದ್ದರೆ ಅವರ ಸಭೆಯನ್ನು ಬಹಿಷ್ಕರಿಸಲಿ. ವಿರೋಧ ರಚನಾತ್ಮಕವಾಗಿ ಇರಬೇಕೇ ವಿನಾ ತೀರಾ ಕೆಳಮಟ್ಟಕ್ಕೆ ಇಳಿಯಬಾರದು. ಇದು ಎಲ್ಲಾ ಪಕ್ಷಗಳಿಗೂ ಅನ್ವಯಿಸುತ್ತದೆ.

–ರಮಾನಂದ ಶರ್ಮಾ, ಬೆಂಗಳೂರು

 

ಬರಹ ಇಷ್ಟವಾಯಿತೆ?

 • 15

  Happy
 • 1

  Amused
 • 0

  Sad
 • 0

  Frustrated
 • 4

  Angry

Comments:

0 comments

Write the first review for this !