ಗುರುವಾರ , ಮೇ 13, 2021
22 °C

ಇಡೀ ಮನುಕುಲದ ಸಾಧನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮಂಗಳನ ಅಂಗಳದಲ್ಲಿ ನಾಸಾ ಸಂಸ್ಥೆಯು ಹೆಲಿಕಾಪ್ಟರ್ ಅನ್ನು ಹಾರಿಸಿದೆ (ಪ್ರ.ವಾ., ಏ. 20). ಕಳೆದ ಆರು ವರ್ಷಗಳ ಸತತ ಪ್ರಯತ್ನದಿಂದಾಗಿ ನಾಸಾ ಈ ಮಹತ್ವದ ಸಾಧನೆಯನ್ನು ಮಾಡಿದೆ. ಇದನ್ನು ಕೇವಲ ಅಮೆರಿಕದ ಬಾಹ್ಯಾಕಾಶ ಸಂಸ್ಥೆಯ ಸಾಧನೆಯನ್ನಾಗಿ ನೋಡದೆ ಇಡೀ ಮನುಕುಲದ ಸಾಧನೆಯನ್ನಾಗಿ ನೋಡಬೇಕಿದೆ.

ಈ ಪ್ರಯೋಗದ ಇನ್ನೊಂದು ಮಹತ್ವದ ಅಂಶವೆಂದರೆ, ಹೆಲಿಕಾಪ್ಟರಿನ ಯಶಸ್ವಿ ಹಾರಾಟಕ್ಕೆ ಬೇಕಾದ ಬಲ ಪ್ರಮಾಣವನ್ನು ನಿರ್ಧರಿಸಲು ನಾಸಾದ ವಿಜ್ಞಾನಿಗಳು ಬಳಸಿದ್ದು ನ್ಯೂಟನ್‌ನ ನಿಯಮಗಳನ್ನೇ. ಅಂದರೆ, ಶತಮಾನದಿಂದ ಭೂಮಿಯ ಮೇಲೆ ವಿಮಾನಗಳನ್ನು ಹಾರಿಸಲು ವಿಜ್ಞಾನಿಗಳು ಬಳಸುತ್ತಿದ್ದ ನ್ಯೂಟನ್‌ನ ನಿಯಮಗಳು ಮಂಗಳದಲ್ಲೂ (ಗುರುತ್ವಶಕ್ತಿ ಮತ್ತು ವಾತಾವರಣದ ಒತ್ತಡದ ಪ್ರಮಾಣಗಳು ಮಾತ್ರ ಬೇರೆ) ಅನ್ವಯವಾಗುತ್ತವೆ ಎಂಬುದು ಈ ಪ್ರಯೋಗದಿಂದ ಸಾಬೀತಾಗಿದೆ.

- ಡಾ. ಸುದರ್ಶನ ಪಾಟೀಲ ಕುಲಕರ್ಣಿ, ಮೈಸೂರು

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು