ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಷ್ಟ್ರೀಯ ಹೆದ್ದಾರಿ: ಆತಂಕ ನಿವಾರಿಸಿ

Last Updated 23 ಜುಲೈ 2019, 19:40 IST
ಅಕ್ಷರ ಗಾತ್ರ

ರಾಷ್ಟ್ರೀಯ ಹೆದ್ದಾರಿಯಲ್ಲಿ ಸಾಮಾನ್ಯವೆಂಬಂತೆ ಕಂಡುಬರುವ ಸಮಸ್ಯೆ ಎಂದರೆ, ಅಲ್ಲಲ್ಲಿ ವಾಹನದಡಿ ಬಿದ್ದು ಮೃತಪಟ್ಟ ನಾಯಿಗಳ ಶವಗಳು. ನಾಯಿ ಸತ್ತು ಗಂಟೆಗಟ್ಟಲೆ ಕಳೆದಿದ್ದರೂ ಯಾರೂ ಅದರ ಕಳೇಬರವನ್ನು ತೆಗೆಯಲು ಹೋಗುವುದಿಲ್ಲ. ಒಂದು ದಿನ ಕಳೆದರೆ, ಅದರ ದೇಹವು ಉಬ್ಬಿ ನಂತರ ವಾಸನೆ ಹರಡಲು ಶುರುವಾಗುತ್ತದೆ.

ಇನ್ನೊಂದು ಸಮಸ್ಯೆ, ಹೆದ್ದಾರಿಯಲ್ಲಿ ಓಡಾಡುವ ದನಗಳದ್ದು. ಹೆದ್ದಾರಿಯಲ್ಲಿ ತಿರುಗುವ ಜಾನುವಾರುಗಳು ಒಮ್ಮೊಮ್ಮೆ ತಮ್ಮೊಳಗೇ ಜಗಳವಾಡಿಕೊಳ್ಳುತ್ತಾ, ಕೆಲವೊಮ್ಮೆ ವಾಹನಗಳ ಶಬ್ದಕ್ಕೆ ಹೆದರಿ ಓಡುತ್ತಾ ಚಾಲಕರಿಗೆ ಆತಂಕ ಉಂಟು ಮಾಡುತ್ತವೆ. ರಾಷ್ಟ್ರೀಯ ಹೆದ್ದಾರಿಯಲ್ಲಿ ನಾಯಿಗಳು ಹಾಗೂ ಜಾನುವಾರುಗಳ ಓಡಾಟ ಸಣ್ಣ ಸಮಸ್ಯೆಯಲ್ಲ. ಇಂದು ಹಲವಾರು ಅಪಘಾತಗಳು ಇವುಗಳ ಕಾರಣದಿಂದಲೇ ಸಂಭವಿಸುತ್ತಿವೆ. ಸಾವು-ನೋವು, ವಾಹನಗಳ ಜಖಂ, ಲಕ್ಷಾಂತರ ರೂಪಾಯಿ ನಷ್ಟವಾಗುತ್ತಿದೆ. ಈ ಸಮಸ್ಯೆಗೆ ಶೀಘ್ರದಲ್ಲಿ ಪರಿಹಾರ ಕಂಡುಕೊಳ್ಳಬೇಕಿದೆ.

– ಪಿ. ಜಯವಂತ ಪೈ,ಕುಂದಾಪುರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT