ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಿಕ್ಷಣದ ರಾಷ್ಟ್ರೀಕರಣ ಅಗತ್ಯ

Last Updated 17 ಜನವರಿ 2019, 19:45 IST
ಅಕ್ಷರ ಗಾತ್ರ

‘ಶಿಕ್ಷಣದ ರಾಷ್ಟ್ರೀಕರಣ ಸುಲಭದ ಮಾತೇ?’ ಎಂದಿದ್ದಾರೆ ವೆಂಕಟೇಶ ಮಾಚಕನೂರ (ವಾ.ವಾ., ಜ.9). ನಿಜ, ಇದು ಸುಲಭದ ಮಾತಲ್ಲ. ಆದರೆ, ಅದಕ್ಕೆ ತಯಾರಿರುವುದಾಗಿ ಸ್ವತಃ ಮುಖ್ಯಮಂತ್ರಿಯೇ ಸಾಹಿತ್ಯ ಸಮ್ಮೇಳನದಲ್ಲಿ ಹೇಳಿದ್ದಾರೆ. ಶಿಕ್ಷಣದ ರಾಷ್ಟ್ರೀಕರಣ ನಾವು ತಲುಪಬೇಕಿರುವ ಗುರಿ ಆಗಿರುವುದರಿಂದ ಮುಖ್ಯಮಂತ್ರಿ ಆಶಯ ಸ್ವಾಗತಾರ್ಹವಾಗಿದೆ. ಏಕೆಂದರೆ, ಶಿಕ್ಷಣದ ರಾಷ್ಟ್ರೀಕರಣದಿಂದ ಮಾತ್ರ ನಮಗೆ ಸಮಾನ ಶಿಕ್ಷಣ ಲಭಿಸಬಹುದು. ಇದು ಆಗದ ಹೊರತು ಅಸಮಾನ ಶಿಕ್ಷಣ ಮುಂದುವರಿದು ಬಡವ, ಶ್ರೀಮಂತ ಎಂಬ ತರತಮಕ್ಕೆ ಕಾರಣವಾಗಬಹುದು.

ಈ ಥರದ ದೂರಗಾಮಿ ನೋಟವಿಟ್ಟುಕೊಂಡೇ ಸರ್ಕಾರ ಕ್ರಿಯಾಶೀಲವಾಗಬೇಕು. ಶಿಕ್ಷಣ, ಅದರಲ್ಲೂ ಪ್ರಾಥಮಿಕ ಶಾಲಾ ಶಿಕ್ಷಣ ವ್ಯಾವಹಾರಿಕ ದಂಧೆ ಆಗಬಾರದು. ಶಿಕ್ಷಣದ ರಾಷ್ಟ್ರೀಕರಣ ಶೀಘ್ರ ಅನುಷ್ಠಾನವಾಗಬೇಕು.

–ಹುರುಕಡ್ಲಿ ಶಿವಕುಮಾರ,ಬಾಚಿಗೊಂಡನಹಳ್ಳಿ, ಹಗರಿಬೊಮ್ಮನಹಳ್ಳಿ ತಾಲ್ಲೂಕು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT