ಶುಕ್ರವಾರ, ನವೆಂಬರ್ 22, 2019
19 °C

ನಿಸರ್ಗಕ್ಕೆ ಪೆಟ್ಟು ಕೊಡುವ ಕ್ರಿಯೆ ಬೇಕೇ?

Published:
Updated:

ಕೇಂದ್ರ ಸರ್ಕಾರವು ಖನಿಜ ಸಂಪನ್ಮೂಲಕ್ಕಾಗಿ ಸಮುದ್ರ ಮಥನಕ್ಕೆ ಕೈ ಹಾಕಿರುವ ಕುರಿತ ಟಿ.ಆರ್.ಅನಂತರಾಮು ಅವರ ಲೇಖನ (ಪ್ರ.ವಾ., ಸೆ. 4) ಓದಿ ದಿಗ್ಭ್ರಮೆಯಾಯಿತು. ಸಾಗರದ ತಳದಲ್ಲಿ ಗಣಿಗಾರಿಕೆ ಮಾಡಿ ಅತ್ಯಮೂಲ್ಯ ಲೋಹದುಂಡೆಗಳನ್ನು ಪಡೆದು, ಆ ಲೋಹಗಳ ಆಮದಿನ ಖರ್ಚನ್ನೇನೋ ಉಳಿಸಿಕೊಳ್ಳಬಹುದು. ಆದರೆ ಅಂಕಣದಲ್ಲಿ ವಿವರಿಸಿರುವಂತೆ, ಗಣಿಗಾರಿಕೆಯಿಂದಾಗುವ ಮಾಲಿನ್ಯದಿಂದ ಸಾಗರದಾಳದಲ್ಲಿನ ಜೀವ ಸಂಪತ್ತನ್ನು ಉಳಿಸಿಕೊಳ್ಳಲು ಸಾಧ್ಯವೇ? ಅದು ಅಸಾಧ್ಯವೆಂದಾದ ಮೇಲೆ ನಿಸರ್ಗಕ್ಕೆ ಪೆಟ್ಟು ಕೊಡುವ ಇಂತಹ ಕ್ರಿಯೆಗಳನ್ನು ಮುಂದುವರಿಸುವುದರಲ್ಲಿ ಅರ್ಥವಿಲ್ಲ.

ಪ್ಲಾಸ್ಟಿಕ್ ಕಂಡುಹಿಡಿದಾಗ ಹಿಗ್ಗಿ, ಈಗ ಅದು ಇಡೀ ಪ್ರಪಂಚವನ್ನೇ ವ್ಯಾಪಿಸಿ ಉಸಿರುಗಟ್ಟಿಸುತ್ತಿರುವಾಗ ಎಚ್ಚೆತ್ತಂತೆ, ಸಾಗರದಾಳದ ಗಣಿಗಾರಿಕೆಯಿಂದ ಅಲ್ಲಿನ ಖನಿಜ ಸಂಪತ್ತೆಲ್ಲಾ ಖಾಲಿಯಾಗಿ ಆನಂತರ ಅದರಿಂದಾದ ಸಾಗರ ಮಾಲಿನ್ಯವನ್ನು ನಿಯಂತ್ರಿಸಲು ಪ್ರಯತ್ನಿಸಿದರೆ ಏನು ಪ್ರಯೋಜನ? ಜಗತ್ತಿನ ಹಲವು ರಾಷ್ಟ್ರಗಳು ಈ ರೀತಿಯ ಸಾಗರ ಗಣಿಗಾರಿಕೆ ಮಾಡಲು ಹೊರಟಿರುವುದು ಪರಿಸರ ಸಂರಕ್ಷಣೆಯ ದೃಷ್ಟಿಯಿಂದ ಸಾಧುವಲ್ಲ. ಪರಿಸರವನ್ನು ರಕ್ಷಿಸಬೇಕಾದ ವಿಶ್ವಸಂಸ್ಥೆಯೇ ಸಾಗರದಾಳದ ಗಣಿಗಾರಿಕೆಗೆ ಹಲವು ರಾಷ್ಟ್ರಗಳಿಗೆ ಅನುಮತಿ ನೀಡಿರುವುದಂತೂ ಬೇಲಿಯೇ ಎದ್ದು ಹೊಲ ಮೇಯ್ದಂತೆ.

ಸ್ನೇಹಾ ಕೃಷ್ಣನ್, ಕೊರಟಗೆರೆ

ಪ್ರತಿಕ್ರಿಯಿಸಿ (+)