ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಕ್ಕು ಕೊಟ್ಟವರಾರು?

Last Updated 30 ಆಗಸ್ಟ್ 2018, 19:30 IST
ಅಕ್ಷರ ಗಾತ್ರ

‘ನಕ್ಸಲರಿಗೆ ಸಂಬಂಧಪಟ್ಟ ಕಾಗದಗಳನ್ನು ಇಟ್ಟುಕೊಂಡ ಮಾತ್ರಕ್ಕೆ ಯಾರೂ ನಕ್ಸಲರಾಗುವುದಿಲ್ಲ’ ಎಂದುಸುಪ್ರೀಂ ಕೋರ್ಟ್ ಹೇಳಿದ ನಂತರವೂ ಕೇಂದ್ರ ಸರ್ಕಾರ ಇದೇ ನೀತಿ ಅನುಸರಿಸುತ್ತಿರುವುದು ಸಂವಿಧಾನ ವಿರೋಧಿ.
ವಿವಿಧೆಡೆ ದಾಳಿ ನಡೆಸಿ, ವಿಚಾರಣೆಗೆ ಒಳಪಡಿಸಲಾಗಿರುವ ಹೋರಾಟಗಾರರಿಗೆ ನಕ್ಸಲರ ನಂಟಿತ್ತು, ಎಲ್ಗಾರ್ ಪರಿಷತ್ ನಂಟಿತ್ತು, ಎಂದು ಹೇಳುವವರಿಗೆ, ನಂಟಿದ್ದರೆ ದೇಶ ದ್ರೋಹಿಗಳಾಗುವುದಿಲ್ಲ ಎಂಬ ಪರಿಜ್ಞಾನ ಇರಬೇಡವೇ?

‘ಮೋದಿಯವರನ್ನು ಕೊಲ್ಲಲು ಸಂಚು ನಡೆಸುತ್ತಿದ್ದಾರೆ’ ಎನ್ನುವವರು, ಬಿಜೆಪಿಯ ವಿರೋಧಿಗಳನ್ನು ಕೊಲ್ಲಲು ಜನರಿಗೆ ತರಬೇತಿ ನೀಡುವ ಸಂಸ್ಥೆಗಳು ಇರುವುದನ್ನು ಕಾಣದಷ್ಟು ಕುರುಡರಾಗಿದ್ದಾರೆಯೇ? ಅಲ್ಪಸಂಖ್ಯಾತರ ಮೇಲೆ ದಬ್ಬಾಳಿಕೆ ಮಾಡಲು ಅಥವಾ ದಲಿತರನ್ನು ಬೆಂಬಲಿಸುವವರನ್ನು ದಮನ ಮಾಡುವ ಹಕ್ಕನ್ನು ಇವರಿಗೆ ಕೊಟ್ಟವರಾರು? ಈ ಪ್ರಶ್ನೆ ಕೇಳಿದರೆ ದೇಶದ್ರೋಹವಾಗುವುದೇ? ರಾಜಕೀಯ ವಿರೋಧಿಗಳ ವಿರುದ್ಧ, ಮಾನವ ಹಕ್ಕಿಗಾಗಿ ಹೋರಾಡುವವರ ಮೇಲೆ ಆಡಳಿತ ಯಂತ್ರವನ್ನು ದುರುಪಯೋಗ ಮಾಡುವ ಹಕ್ಕನ್ನು ಸಂವಿಧಾನ ಕೊಡುತ್ತದೆಯೇ?

ಕೆ.ಎನ್. ಭಗವಾನ್, ಬೆಂಗಳೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT