ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಗ್ನಿವೇಶ್‌ ಚಿಕಿತ್ಸೆಗೆ ಬೇಕು ದಾನಿಗಳ ನೆರವು

Last Updated 28 ಫೆಬ್ರುವರಿ 2020, 6:58 IST
ಅಕ್ಷರ ಗಾತ್ರ

ಬೆಂಗಳೂರು: ಡೌನ್ ಸಿಂಡ್ರೋಮ್, ಆಟಿಸಂ ಮತ್ತು ಕೆರೆಟೊಕೊನಸ್.. ಹೀಗೆ ಹುಟ್ಟಿದಾಗಿನಿಂದಲೂ ಆರೋಗ್ಯದ ಸಮಸ್ಯೆಯಿಂದ ಬಳಲುತ್ತಿದ್ದು, ಪ್ರತಿಯೊಂದಕ್ಕೂ ಪೋಷಕರನ್ನೇ ಆಶ್ರಯಿಸಬೇಕಾದ ಪರಿಸ್ಥಿತಿ ಈ ಹುಡುಗನದು.

ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರದ ನಿವೃತ್ತ ಉಪನ್ಯಾಸಕರಾದ ಜಿ.ಎಸ್. ಹೆಗಡೆ ಅವರ ಪುತ್ರ (26) ಅಗ್ನಿವೇಶ್ ಈವರೆಗೆ ತಂದೆಯ ಆರೈಕೆಯಲ್ಲಿ ಬೆಳೆದಿದ್ದಾರೆ. ಪುತ್ರನ ಚಿಕಿತ್ಸೆಗಾಗಿಯೇ ತಮ್ಮ ಸಂಪಾದನೆಯ ಹಣವೆಲ್ಲ ಇವರ ತಂದೆ ವ್ಯಯಿಸಿದ್ದಾರೆ.

ಈಗ ವಯಸ್ಸಾದ ಕಾರಣ ಆತನ ಆರೈಕೆಯೂ ಕಷ್ಟವಾಗಿದೆ. ಮಗನನ್ನು ನೋಡಿಕೊಳ್ಳುವುದಕ್ಕೆ ಇನ್ನೊಬ್ಬರ ಸಹಾಯದ ಅವಶ್ಯಕತೆ ಇದ್ದು, ಪುರುಷ ನರ್ಸ್‌ ನೇಮಿಸಿಕೊಳ್ಳಬೇಕಾಗಿದೆ. ಅವರಿಗೆ ನೀಡಬೇಕಾದ ಸಂಬಳ, ಇವನ ಔಷಧಿಯ ಖರ್ಚುವೆಚ್ಚಗಳನ್ನು ನಿಭಾಯಿಸುವಷ್ಟು ಆರ್ಥಿಕ ಈಗ ಬಲ ಅವರಿಗಿಲ್ಲ. ಇದೀಗ ಅವರ ತಂದೆ ಸಾರ್ವಜನಿಕರ ನೆರವಿನ ನಿರೀಕ್ಷೆಯಲ್ಲಿದ್ದಾರೆ.

ದಾನಿಗಳಿಂದ ಬರುವ ಹಣವನ್ನು ಅಗ್ನಿವೇಶ್‌ ಜೀವಿತಾವಧಿಗೆ ಬಳಸಿ, ಉಳಿದ ಹಣವನ್ನು ಅಗ್ನಿವೇಶ್ ಚಾರಿಟೇಬಲ್ ಟ್ರಸ್ಟ್ ಮೂಲಕ ಈ ರೀತಿಯ ಸಮಸ್ಯೆ ಇರುವ ಮಕ್ಕಳ ಪೋಷಕರಿಗೆ ಹಸ್ತಾಂತರಿಸುವ ಚಿಂತನೆಯನ್ನು ಜಿ.ಎಸ್. ಹೆಗಡೆ ಅವರು ಹೊಂದಿದ್ದಾರೆ.

ಅಕೌಂಟ್ ಡಿಟೇಲ್ಸ್
Canara Bank, KAVALAKKI, HONNAVAR
IFSC CODE : CNRB0008803
NAME : AGNIVESH GANESH HEGDE
ACCOUNT NUMBER : 8803101002517

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT