ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಾಚಕರ ವಾಣಿ | ರೈಲಿನಲ್ಲಿ ಇರಲಿ ಸ್ಥಳ ಸೂಚನಾ ಫಲಕ

Last Updated 23 ಮಾರ್ಚ್ 2022, 19:30 IST
ಅಕ್ಷರ ಗಾತ್ರ

ದೇಶದಲ್ಲಿ ಪ್ರತಿದಿನ ಸಾವಿರಾರು ಸಂಖ್ಯೆಯಲ್ಲಿ ರೈಲುಗಳು ಪ್ರಯಾಣಿಕರನ್ನು ಹೊತ್ತು ಸಂಚರಿಸುತ್ತವೆ. ಇದೊಂದು ರೀತಿ ಜನಸ್ನೇಹಿ ಸಾರಿಗೆ ವ್ಯವಸ್ಥೆ. ಆದರೆ ನಮ್ಮ ರೈಲ್ವೆಗೆ ಆಧುನಿಕ ಸ್ಪರ್ಶ ಬೇಕಾಗಿದೆ. ರಾತ್ರಿ ಹೊತ್ತು ಪ್ರಯಾಣಿಕರು ತಾವು ಎಲ್ಲಿ ಇದ್ದೇವೆ ಎಂದು ತಿಳಿದುಕೊಳ್ಳಲು ಸಾಧ್ಯವಾಗದೆ, ಇಳಿಯಬೇಕಾದ ನಿಲ್ದಾಣಕ್ಕೆ ಬದಲಾಗಿ ಹಿಂದಿನ ಅಥವಾ ಮುಂದಿನ ನಿಲ್ದಾಣಗಳಲ್ಲಿ ಇಳಿದ ಉದಾಹರಣೆಗಳು ಬಹಳಷ್ಟಿವೆ.

ರೈಲ್ವೆ ಇಲಾಖೆ ಇದನ್ನು ಗಂಭೀರವಾಗಿ ಪರಿಗಣಿಸಬೇಕು. ರೈಲಿನ ಒಳಗೆ ನಿಲ್ದಾಣಗಳ ಹೆಸರು ತೋರಿಸುವ ಎಲ್ಇಡಿ ಫಲಕಗಳನ್ನು ಅಳವಡಿಸುವ ಅಥವಾ ನಿಲ್ದಾಣದ ಹೆಸರಿನ ಮುದ್ರಿತ ಧ್ವನಿ ಕೇಳಿಸುವ ವ್ಯವಸ್ಥೆ ಮಾಡಬೇಕು. ಇದರಿಂದ, ನಿದ್ರೆಗೆ ಜಾರಿದ ಪ್ರಯಾಣಿಕರಿಗೆ ಹಾಗೂ ತಾವು ಯಾವ ನಿಲ್ದಾಣದಲ್ಲಿ ಇದ್ದೇವೆ ಎಂದು ತಿಳಿದುಕೊಳ್ಳಲು ಬಯಸುವವರಿಗೆ ಅನುಕೂಲವಾಗುತ್ತದೆ.

–ಚನ್ನಕೇಶವ ಜಿ.ಕೆ., ತರೀಕೆರೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT