ಶನಿವಾರ, ಮಾರ್ಚ್ 6, 2021
32 °C

ಹೊಸ ವರ್ಷ, ಹೊಸ ಭರವಸೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

2020ರಲ್ಲಿ ಕೊರೊನಾ ವೈರಸ್‌ನ ಪರಿಣಾಮದಿಂದ ಜನರೆಲ್ಲರೂ ಅನುಭವಿಸಿದ ಕಷ್ಟನಷ್ಟಗಳನ್ನು ಮರೆಯುವುದು ಅಸಾಧ್ಯ. ಇದೀಗ ಹೊಸ ವರ್ಷ, ಹೊಸ ಭರವಸೆ, ಹೊಸ ಸಾಧನೆಗಳತ್ತ ನೋಡುವ ಸಮಯ ಬಂದಿದೆ. ಹಿಂದಿನ ವರ್ಷಗಳಂತೆ ಹೊಸ ವರ್ಷವನ್ನು ಬರಮಾಡಿಕೊಳ್ಳುವಾಗ ಭವಿಷ್ಯದ ಬಗ್ಗೆ ಹೊಸ ನಿರ್ಣಯವನ್ನು ಮಾಡಿ, ಅದನ್ನು ಈಡೇರಿಸಲು ದೃಢಸಂಕಲ್ಪ ಮಾಡುವುದರ ಜೊತೆಗೆ ಬಂಧು-ಮಿತ್ರರ ಒಡಗೂಡಿ ವಿವಿಧ ಮನರಂಜನಾ ಕಾರ್ಯಕ್ರಮಗಳನ್ನು ಆಯೋಜಿಸಿ, ಸಂಭ್ರಮಪಡಲು ಕೊರೊನಾ ಅಡ್ಡಿಯಾಗಿದೆ.

ನೆಮ್ಮದಿಯ ನಾಳೆಗಳಿಗಾಗಿ ನಾವೆಲ್ಲರೂ ಕೋವಿಡ್- 19 ನಿಯಮಗಳನ್ನು ಚಾಚೂ ತಪ್ಪದೆ ಪಾಲಿಸೋಣ. ಈ ಮಹಾಸಾಂಕ್ರಾಮಿಕವನ್ನು ತೊಲಗಿಸುವ ಸಂಕಲ್ಪ ಮಾಡೋಣ. ಹೊಸ ವರ್ಷದಲ್ಲಿ ಎಲ್ಲರಿಗೂ ಉತ್ತಮ ಆರೋಗ್ಯ ಮತ್ತು ಸಂತೋಷ ಲಭಿಸುವಂತಾಗಲಿ. ಬದುಕಿನಲ್ಲಿ ಭರವಸೆಯ ಬೆಳಕು ಬರಲಿ.

–ಉದಯ ಮ. ಯಂಡಿಗೇರಿ, ಧಾರವಾಡ

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು