ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅವೈಜ್ಞಾನಿಕ ವಿಷಯಕ್ಕೆ ಮಹತ್ವ ಬೇಡ

Last Updated 18 ಫೆಬ್ರುವರಿ 2021, 22:20 IST
ಅಕ್ಷರ ಗಾತ್ರ

ಕೆಲವು ಟಿ.ವಿ ಚಾನೆಲ್‌ಗಳಲ್ಲಿ ಪೌರಾಣಿಕ ಧಾರಾವಾಹಿಗಳು ಪ್ರಸಾರವಾಗುತ್ತಿವೆ. ಚಿಕ್ಕ ಮಕ್ಕಳಿಗೆ ಶಾಲೆಗಳಿಗೆ ರಜಾ ಇರುವ ಕಾರಣ, ಇಂತಹ ಧಾರಾವಾಹಿಗಳು ಅವರನ್ನು ಆಕರ್ಷಿಸುತ್ತಿವೆ. ಈ ಬಗೆಯ ಕೆಲವು ಧಾರಾವಾಹಿಗಳಲ್ಲಿ ವಶೀಕರಣ, ಮಾಟ, ಮಂತ್ರವಿದ್ಯೆಯಂತಹ ವಿಷಯಗಳನ್ನು ವೈಭವೀಕರಿಸಲಾಗಿರುತ್ತದೆ.

ಈ ದೃಶ್ಯಗಳು ಮಕ್ಕಳ ಮೇಲಷ್ಟೇ ಅಲ್ಲ ದೊಡ್ಡವರ ಮೇಲೂ ಕೆಟ್ಟ ಪರಿಣಾಮ ಬೀರುತ್ತವೆ.ಆಂಧ್ರಪ್ರದೇಶದ ಚಿತ್ತೂರು ಜಿಲ್ಲೆಯ ಮದನಪಲ್ಲಿಯಲ್ಲಿ ಇತ್ತೀಚೆಗೆ ಜ್ಯೋತಿಷಿಯ ಮಾತು ಕೇಳಿ, ತಮ್ಮ ಇಬ್ಬರು ಮಕ್ಕಳನ್ನೇ ಪೋಷಕರು ಆಯುಧದಿಂದ ಚುಚ್ಚಿ ಕೊಂದಿರುವುದು ಇದಕ್ಕೆ ನಿದರ್ಶನ.

ಇಂತಹ ಹಲವಾರು ಬಗೆಯ ಪ್ರಕರಣಗಳು ಸಮಾಜದಲ್ಲಿ ನಡೆಯುತ್ತಿರುವಾಗ, ಅದಕ್ಕೆ ಪೂರಕವಾಗುವಂತಹ ಸಂಗತಿಗಳೇ ಪ್ರಸಾರವಾದರೆ ಸಾಮಾಜಿಕ ಅವನತಿಗೆ ದಾರಿಯಾದಂತೆ ಆಗುತ್ತದೆ. ಕಪಟ ಜ್ಯೋತಿಷಿಗಳಿಗೆ ದಾರಿ ಮಾಡಿಕೊಟ್ಟಂತಾಗುತ್ತದೆ. ಈ ವಿಷಯವನ್ನು ಧಾರಾವಾಹಿಗಳ ನಿರ್ಮಾಪಕರು, ನಿರ್ದೇಶಕರು ಗಂಭೀರವಾಗಿ ಪರಿಗಣಿಸಬೇಕು.

-ಎಂ.ಎಸ್.ಉಷಾ ಪ್ರಕಾಶ್, ಮೈಸೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT