ಗುರುವಾರ , ನವೆಂಬರ್ 14, 2019
26 °C

ಕಾಶ್ಮೀರ ಆಗದಿರಲಿ!

Published:
Updated:

ಆಸ್ಸಾಂನ ಎನ್‌ಆರ್‌ಸಿ ವರದಿಯು ದೇಶವನ್ನೇ ಬೆಚ್ಚಿ ಬಿಳಿಸಿದೆ. ಬೇರೆ ದೇಶಗಳಿಂದ ಬಂದ ಸುಮಾರು 40 ಲಕ್ಷ ಜನರು ಅಲ್ಲಿ ನೆಲೆಸಿರುವುದು ನಮ್ಮ ದೇಶದ ಭದ್ರತೆಯನ್ನೇ ಪ್ರಶ್ನಿಸುವಂತಿದೆ. ಅಕ್ರಮವಾಗಿ ದೇಶದೊಳಗೆ ನುಸುಳಿ, ನಮ್ಮ ದೇಶದ ನಾಗರಿಕರ ಸವಲತ್ತುಗಳನ್ನು ಇವರು ಕಬಳಿಸುವುದರಿಂದ ದೇಶಕ್ಕೆ ಅಪಾಯ ಇದೆ.

ಕಾಶ್ಮೀರದ ಉದಾಹರಣೆ ನಮ್ಮ ಕಣ್ಣಮುಂದಿದೆ. ವಲಸಿಗರ ಸಂಖ್ಯೆಯೇ ಅಲ್ಲಿ ಹೆಚ್ಚಾಗಿ, ಮೂಲ ನಿವಾಸಿಗಳಾದ ಕಾಶ್ಮೀರಿ ಪಂಡಿತರು ಜೀವ ಭಯದಿಂದ ದೇಶದ ಬೇರೆ ರಾಜ್ಯಗಳಿಗೆ ವಲಸೆ ಹೋಗಬೇಕಾಯಿತು. ಅಸ್ಸಾಂನ ಜನರಿಗೂ ಅದೇ ಸ್ಥಿತಿ ಬಾರದಿರಲಿ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಎಚ್ಚೆತ್ತುಕೊಂಡು ವಲಸಿಗರ ಸಮಸ್ಯೆಗೆ ಶೀಘ್ರ ಪರಿಹಾರ ಕಂಡುಕೊಳ್ಳಬೇಕು.

–ಅಮಿತಕುಮಾರ ಬಿರಾದಾರ, ವಿಜಯಪುರ

ಪ್ರತಿಕ್ರಿಯಿಸಿ (+)