ಬುಧವಾರ, ಸೆಪ್ಟೆಂಬರ್ 30, 2020
22 °C

ವಾಚಕರ ವಾಣಿ: ಹೆಣ್ಣೆಂಬ ಕನಿಕರ ಬೇಕಿಲ್ಲ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕೆಲವರು ರೋಲ್ ಮಾಡೆಲ್‌ಗಳೆಂದು ಪರಿಗಣಿಸುವ ಸಿನಿಮಾ ನಟ–ನಟಿಯರು ಸಾರ್ವಜನಿಕ ಜೀವನದಲ್ಲಿ ಒಂದಷ್ಟು ಸಾಮಾಜಿಕ ಜವಾಬ್ದಾರಿಯಿಂದ ವರ್ತಿಸಬೇಕಾಗುತ್ತದೆ. ಡ್ರಗ್ಸ್‌ ಪ್ರಕರಣದಲ್ಲಿ ಪೊಲೀಸರು ವಶಕ್ಕೆ ಪಡೆದ ಚಿತ್ರನಟಿಯೊಬ್ಬರ ವಿಚಾರ ಪ್ರಸ್ತಾಪಿಸಿ, ‘ನಾನು ಸೆಲೆಬ್ರಿಟಿ ಆಗಿದ್ದು ತಪ್ಪೇ ಎಂದು ನಿಸ್ಸಹಾಯಕತೆಯಿಂದ ಅಳುವ ಹೆಣ್ಣುಮಗಳ ಪ್ರಶ್ನೆಗೆ ಯಾರೂ ಉತ್ತರ ಕೊಡುವ ಗೋಜಿಗೆ ಹೋಗಿಲ್ಲ’ ಎಂದು ಜಿ.ಎಸ್.ಜಯದೇವ ಅವರು ಹೇಳಿದ್ದಾರೆ (ವಾ.ವಾ., ಸೆ. 12). ಅಂತಃಕರಣದಿಂದ ಹೇಳಿರುವ ಈ ಮಾತು ಒಪ್ಪುವಂತಹುದೆ.

ಆದರೆ, ಇಂತಹ ಪ್ರಕರಣಗಳಲ್ಲಿ ಹೆಣ್ಣು ಎಂಬ ಕಾರಣಕ್ಕೆ ವಿನಾಯಿತಿ ಬೇಕಿಲ್ಲ. ಈ ಬಗ್ಗೆ ಕೂಲಂಕಷ ತನಿಖೆ ನಡೆಯಬೇಕಾಗಿದೆ. ತಪ್ಪಿತಸ್ಥರ ವಿರುದ್ಧ ಕ್ರಮ ಜರುಗಿಸಬೇಕಾಗಿದೆ. ಯುವಪೀಳಿಗೆಯು ಮಾದಕ ದ್ರವ್ಯದಂಥ ದುಶ್ಚಟಗಳಿಗೆ ಈಡಾಗುತ್ತಿರುವುದು ದುರ್ದೈವದ ಸಂಗತಿ. ಅದಕ್ಕೆ ಕಡಿವಾಣ ಹಾಕಲೇಬೇಕು. 

ಟಿ.ಎಸ್.ಪ್ರತಿಭಾ, ಚಿತ್ರದುರ್ಗ

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು