ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಸ್ತೂರಿರಂಗನ್‌ ವರದಿ: ರಾಜಕೀಯ ಬೇಡ

Last Updated 7 ಡಿಸೆಂಬರ್ 2021, 21:04 IST
ಅಕ್ಷರ ಗಾತ್ರ

ಕಸ್ತೂರಿರಂಗನ್ ವರದಿಯನ್ನು ತಿರಸ್ಕರಿಸುವಂತೆ ರಾಜ್ಯ ಸರ್ಕಾರವು ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಿರುವುದನ್ನು ನೋಡಿದರೆ, ‘ಕಾಡು ಬೆಳೆಸಿ ನಾಡು ಉಳಿಸಿ’ ಎಂಬ ಹೇಳಿಕೆಗೆ ಅರ್ಥವೇನಿದೆ ಎಂಬ ಪ್ರಶ್ನೆ ಮೂಡುತ್ತದೆ. ಈ ವರದಿಯಲ್ಲಿ ಗಣನೆಗೆ ತೆಗೆದುಕೊಂಡ ಗ್ರಾಮಗಳಲ್ಲಿ ಹೆಚ್ಚಿನವನ್ನು ಪರಿಸರಸೂಕ್ಷ್ಮ ವ್ಯಾಪ್ತಿಯಿಂದ ಹೊರಗಿಡಲಾಗಿದ್ದು, ಇದರಲ್ಲಿ ಜನರಿಗೆ ಮಾರಕವಾಗುವ ಅಥವಾ ಒಕ್ಕಲೆಬ್ಬಿಸುವ ಅಂಶಗಳಿಲ್ಲ. ವರದಿಯಲ್ಲಿರುವ ಅಂಶಗಳ ಬಗ್ಗೆ ಸ್ಥಳೀಯರಲ್ಲಿ ಅರಿವು ಮೂಡಿಸಿ ಅವರ ತಳಮಳ, ಆತಂಕವನ್ನು ದೂರ ಮಾಡಬೇಕಾದುದು ಸರ್ಕಾರ ಮತ್ತು ಜನನಾಯಕರ ಕರ್ತವ್ಯ. ಆದರೆ ಇದನ್ನು ಚುನಾವಣಾ ರಾಜಕೀಯಕ್ಕಾಗಿ ಬಳಸಿಕೊಳ್ಳುತ್ತಿರುವುದು ವಿಷಾದನೀಯ. ಈ ವರದಿಯನ್ನು ತಿರಸ್ಕರಿಸುವುದು ದೇಶದ ನೈಸರ್ಗಿಕ ಸಂಪನ್ಮೂಲದ ಮೇಲೆ ಪರಿಣಾಮ ಬೀರುತ್ತದೆ.

ಪಶ್ಚಿಮಘಟ್ಟವು ವೈವಿಧ್ಯಮಯ ಪ್ರಾಣಿ, ಪಕ್ಷಿ, ಸಸ್ಯ ವರ್ಗವನ್ನು ಹೊಂದಿದ್ದು, ಕೆಲವು ಪ್ರಭೇದಗಳು ಅಳಿವಿನಂಚಿನಲ್ಲಿವೆ. ಇವುಗಳ ರಕ್ಷಣೆ ಪ್ರತಿಯೊಬ್ಬ ಪ್ರಜೆಯ ಕರ್ತವ್ಯ. ಇಂತಹ ವಿಷಯಗಳು ರಾಜಕೀಯ ಲಾಭಕ್ಕೆ ಬಳಕೆಯಾಗುವುದು ಬೇಡ.

- ಬಿ.ಎಸ್.ಚೈತ್ರ, ಜಾಲಿಕಟ್ಟೆ, ಚಿತ್ರದುರ್ಗ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT