ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಾಚಕರ ವಾಣಿ| ಮಾಸ್ಕ್‌ಗಳ ಗುಣಮಟ್ಟಕ್ಕೆ ಇಲ್ಲ ಗ್ಯಾರಂಟಿ

Last Updated 10 ಮೇ 2020, 15:13 IST
ಅಕ್ಷರ ಗಾತ್ರ

ಕೊರೊನಾ ರೋಗಾಣುವಿನಿಂದ ಸ್ವಯಂ ಸಂರಕ್ಷಿಸಿಕೊಳ್ಳಲು ಹೆಚ್ಚಿನ ಜನ ಮಾಸ್ಕ್ ಧರಿಸುತ್ತಿರುವುದರಿಂದ ಸಹಜವಾಗಿಯೇ ಅವುಗಳಿಗೆ ಬೇಡಿಕೆ ಹೆಚ್ಚಾಗಿದೆ. ಇದನ್ನೇ ಬಂಡವಾಳ ಮಾಡಿಕೊಂಡ ಹಲವಾರು ಕಂಪನಿಗಳು ವಿವಿಧ ನಮೂನೆಯ ತರಹೇವಾರಿ ಮಾಸ್ಕ್‌ಗಳನ್ನು ಮಾರುಕಟ್ಟೆಗೆ ಬಿಡುತ್ತಿವೆ. ಈ ರೀತಿ ಬರುವ ಮಾಸ್ಕ್‌ಗಳ ಗುಣಮಟ್ಟದ ಬಗ್ಗೆ ಸೂಕ್ತ ಖಾತರಿ ಇಲ್ಲವಾಗಿದೆ.

ಪ್ರತಿಷ್ಠಿತ ಔಷಧಿ ಅಂಗಡಿಯೊಂದರಲ್ಲಿ ಇತ್ತೀಚೆಗೆ ಖರೀದಿಸಿದ ಎನ್-95 ಮಾಸ್ಕ್ ಮೇಲೆ ಐಎಸ್‌ಐ ಗುಣಮಟ್ಟದ ಬಗ್ಗೆ ಯಾವುದೇ ಮಾಹಿತಿ ಇರಲಿಲ್ಲ. ಈ ಬಗ್ಗೆ ವಿಚಾರಿಸಿದಾಗ, ಮಾಸ್ಕ್ ತಯಾರಿಕಾ ಕಂಪನಿಯು ಈ ಮಾಸ್ಕ್‌ ಅನ್ನು ಕೇಂದ್ರ ಸರ್ಕಾರದ ಮಾರ್ಗಸೂಚಿಯನ್ವಯ ತಯಾರಿಸಿದೆ ಎಂದು ಪ್ಯಾಕೆಟ್ ಮೇಲೆ ಮುದ್ರಿಸಿದ್ದುದನ್ನಷ್ಟೇ ತೋರಿಸಿದರು. ಈ ರೀತಿ ಮುದ್ರಿಸಿರುವುದನ್ನೇ ಮಾಸ್ಕ್‌ನ ಗುಣಮಟ್ಟದ ಮಾನದಂಡವನ್ನಾಗಿ ಪರಿಗಣಿಸಿರುವುದನ್ನು ನೋಡಿ ಆಶ್ಚರ್ಯವಾಯಿತು.

ಇದೇ ರೀತಿ ವಿವಿಧ ಬಗೆಯ ಎನ್-95 ಮಾಸ್ಕ್‌ಗಳನ್ನು ಪರಿಶೀಲಿಸಿದಾಗ, ಯಾವುದರ ಮೇಲೂ ಐಎಸ್‌ಐ ಗುರುತು ಇಲ್ಲದೇ ಇರುವುದು ಕಂಡುಬಂದಿತು. ದುಬಾರಿ ಬೆಲೆ, ಗುಣಮಟ್ಟಕ್ಕೆ ಯಾವುದೇ ಖಾತರಿ ಇಲ್ಲದ ಮಾಸ್ಕ್‌ಗಳು ಕಾನೂನಿನ ಭಯವಿಲ್ಲದೆ ಮಾರುಕಟ್ಟೆಯಲ್ಲಿ ಬಿಕರಿಯಾಗುತ್ತಿವೆ. ಅಧಿಕಾರಿಗಳು ಈ ಬಗ್ಗೆ ಪರಿಶೀಲಿಸಿ, ಇಂತಹ ಹಗಲು ದರೋಡೆಯನ್ನು ತಪ್ಪಿಸಬೇಕು. ಸಾರ್ವಜನಿಕರಿಗೆ ಗುಣಮಟ್ಟದ ಮಾಸ್ಕ್‌ಗಳು ದೊರೆಯಲು ಅಗತ್ಯ ಕ್ರಮ ಕೈಗೊಳ್ಳಬೇಕು.

– ಗಣೇಶ ಆರ್.,ಮಂಗಳೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT