ಮಹಾತ್ಮ ಗಾಂಧಿ ತತ್ವಗಳು; ಆದ್ಯತೆಗಳೇನು?

7

ಮಹಾತ್ಮ ಗಾಂಧಿ ತತ್ವಗಳು; ಆದ್ಯತೆಗಳೇನು?

Published:
Updated:

ಗಾಂಧೀಜಿ 150ನೇ ಜನ್ಮದಿನಾಚರಣೆ ಸಂದರ್ಭದಲ್ಲಿ ಅಕ್ಟೋಬರ್ 3ರ ‘ಪ್ರಜಾವಾಣಿ’ಯಲ್ಲಿ ಎರಡು ಪ್ರಮುಖ ಸಂದೇಶಗಳು ಪ್ರಕಟವಾಗಿವೆ. ರಾಜ್ಯಸಭಾ ಸದಸ್ಯರೊಬ್ಬರು ‘ನಕ್ಸಲ್ ಆದರೆ ತಪ್ಪೇನೂ ಇಲ್ಲ’ ಎನ್ನುತ್ತಾರೆ. ಹಿಂದೂ ಸಂಘಟನೆಯೊಂದು ‘ಗಾಂಧೀಜಿ ಅಪ್ಪಟ ಹಿಂದೂ’ ಎನ್ನುತ್ತದೆ.

1893ರಲ್ಲಿ ಗಾಂಧಿ ಅವರು ದಕ್ಷಿಣ ಆಫ್ರಿಕಾಕ್ಕೆ ಮೊದಲ ಭೇಟಿ ನೀಡಿದಂದಿನಿಂದ ಅವರ ಬದುಕಿನ ಕೊನೆಯ ಕ್ಷಣದವರೆಗೆ ಅಹಿಂಸೆಯನ್ನು ವ್ರತವಾಗಿ ಸ್ವೀಕರಿಸಿದ್ದವರು. ಇಂದು ದಕ್ಷಿಣ ಆಫ್ರಿಕಾದಿಂದ ಹಿಡಿದು ವಿಶ್ವದ ಎಲ್ಲಾ ರಾಷ್ಟ್ರಗಳಲ್ಲೂ ಅಹಿಂಸೆಯನ್ನು ಪ್ರಜ್ಞಾಪೂರ್ವಕವಾಗಿ ಒಪ್ಪಿಕೊಳ್ಳಲಾಗಿದೆ. ರಷ್ಯಾ ಮತ್ತು ಚೀನಾ ದೇಶಗಳ ಚಿಂತನೆಯಲ್ಲಿ ಮಹತ್ವದ ಬದಲಾವಣೆಯನ್ನು ಗುರುತಿಸಬಹುದು. ಸ್ವತಃ ಡಾ.ಬಿ.ಆರ್.ಅಂಬೇಡ್ಕರ್ ಅವರು ಅಹಿಂಸೆಯನ್ನು ಪ್ರತಿಪಾದಿಸಿದ ಬುದ್ಧನನ್ನು ಆರಾಧಿಸಿದರು. ಅವರು ಮನಸ್ಸು ಮಾಡಿದ್ದರೆ ಕತ್ತಿ ಹಿಡಿದು ಧರ್ಮಪ್ರಸಾರ ಮಾಡುವ ಅನೇಕ ಸಿದ್ಧಾಂತಗಳ ಕಡೆ ಹೋಗಬಹುದಾಗಿತ್ತು.

ಇನ್ನು ಗಾಂಧೀಜಿ ಒಪ್ಪಿಕೊಂಡ ಹಿಂದೂ ಧರ್ಮ ಯಾವುದು? ಪುರಿಯ ಜಗನ್ನಾಥ ದೇವಾಲಯಕ್ಕೆ ತಮ್ಮ ಮಡದಿ ಕಸ್ತೂರಿಬಾ ಹೋಗಿದ್ದಕ್ಕೆ ಗಾಂಧೀಜಿ ಕೋಪಗೊಂಡು ಅವರೊಡನೆ ಮಾತು ಬಿಟ್ಟಿದ್ದರು ಎಂದು ಮಹಾದೇವ ದೇಸಾಯಿ ಬರೆಯುತ್ತಾರೆ. ಪರಿಶಿಷ್ಟರಿಗೆ ಪ್ರವೇಶವಿಲ್ಲದ ದೇವಾಲಯಗಳಿಗೆ ಹೋಗುವುದೇ ತಪ್ಪು ಎಂದು ಗಾಂಧೀಜಿ ಭಾವಿಸಿದ್ದರು. ಗಾಂಧೀಜಿಯ ತತ್ವಾದರ್ಶಗಳಿಂದ ಇಂದಿನ ದೇವಾಲಯಗಳು ಎಷ್ಟು ದೂರ ಸರಿದಿವೆ ಎಂಬುದನ್ನು ಯಾರೂ ಹೇಳಬೇಕಾಗಿಲ್ಲ. ಅದು ಕಣ್ಣಿಗೆ ಕಾಣುತ್ತಿರುವ ದೃಶ್ಯ.

ನಕ್ಸಲ್‍ ಸಿದ್ಧಾಂತವನ್ನು ಗಾಂಧೀಜಿ  ಒಪ್ಪಿದವರಲ್ಲ. ಅದೇ ರೀತಿ ಇಂದಿನ ಹಿಂದೂ ಧರ್ಮದ ಕಟ್ಟಳೆಗಳನ್ನು ಒಪ್ಪಿಕೊಂಡವರಲ್ಲ. ಹಾಗಾದರೆ ಗಾಂಧೀಜಿ ಏನು? ಇದನ್ನು ಪರಿಶೋಧಿಸುವುದೇ ‘ಗಾಂಧಿ@150’ ವರ್ಷಾಚರಣೆಯ ಗುರಿಯಾಗಬೇಕು.

– ಕೆ.ಆರ್. ಕಮಲೇಶ, ಬೆಂಗಳೂರು

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !