ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮರಳಿ ಯತ್ನವ ಮಾಡು

Last Updated 29 ಮಾರ್ಚ್ 2019, 20:00 IST
ಅಕ್ಷರ ಗಾತ್ರ

ಹಿಂದೂ– ಮುಸ್ಲಿಮರ ಭಾವೈಕ್ಯ ಸಾರುವ, ಡಿಟರ್ಜಂಟ್ ಪುಡಿಯೊಂದರ ಟಿ.ವಿ. ಜಾಹೀರಾತು ವಿವಾದಕ್ಕೆ ಈಡಾಗಿರುವುದನ್ನು ಒಳಗೊಂಡಿರುವ ದೀಪಾ ಹಿರೇಗುತ್ತಿ ಅವರ ಲೇಖನ(ಸಂಗತ, ಮಾರ್ಚ್‌ 21) ಓದಿ ಒಂದು ಕ್ಷಣ ವಿಚಲಿತಳಾದೆ. ವಿವಿಧತೆಯಲ್ಲಿ ಏಕತೆಯನ್ನು ಸಾರುವ ಭಾರತದಲ್ಲಿ ಇಂತಹ ವಿದ್ಯಮಾನಗಳು ನಡೆಯುತ್ತಿರುವುದು ವಿಷಾದಕರ.

ಪ್ರತಿ ಸನ್ನಿವೇಶವನ್ನೂ, ಸಂದರ್ಭವನ್ನೂ, ಮನರಂಜನಾ ಮಾಧ್ಯಮವನ್ನೂ ತಮ್ಮ ಪಾಲಿನ ಅಸ್ತ್ರವಾಗಿಸಿ, ಅದಕ್ಕೆ ಕೋಮುದ್ವೇಷದ ಕಿಡಿ ಹಚ್ಚಿ ಸಂಭ್ರಮಿಸುವ ಮನಃಸ್ಥಿತಿಗೆ ಏನೆನ್ನಬೇಕು?

ಪ್ರತಿ ವಸ್ತುವನ್ನೂ ಶುಭ್ರವಾಗಿಸಿ ಫಳಫಳನೆ ಹೊಳೆಯುವಂತೆ ಮಾಡುವ ಬಗೆಬಗೆಯ ‘ಪೌಡರ್‌’ಗಳು ಮಾರುಕಟ್ಟೆಯಲ್ಲಿ ದೊರೆಯುತ್ತವೆ. ಆದರೆ, ಕೋಪ, ತಾಪ, ದ್ವೇಷದಿಂದ ಆವೃತವಾದ ಮಲಿನ ಮನಸ್ಸನ್ನು ತೊಳೆಯುವ ಪುಡಿ ಇದೆಯೇ? ದೇಹಕ್ಕಾದ ಗಾಯಕ್ಕೆ ಮುಲಾಮು ಹಚ್ಚಿ ಗುಣಪಡಿಸಬಹುದು. ಸಮಾಜದಲ್ಲಿನ ಇಂತಹ ವಿಕೃತ ಮನಸ್ಸುಗಳನ್ನು ಗುಣಪಡಿಸುವ ಔಷಧಿ ಇದೆಯೇ? ಇಲ್ಲ. ಆದರೆ ಮರಳಿ ಯತ್ನವ ಮಾಡು ಎಂಬಂತೆ, ಸಮಾಜದಲ್ಲಿ ಸಾಮರಸ್ಯ ಹರಡುವ ಪ್ರಯತ್ನಗಳನ್ನು ನಾವು ಮಾಡುತ್ತಲೇ ಇರಬೇಕು.

ವೀಣಾ ಸುಬ್ರಹ್ಮಣ್ಯ,ಅರೆಕೆರೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT