ಗುರುವಾರ , ಜೂಲೈ 9, 2020
28 °C

ಭೂ ಸುಧಾರಣೆ: ತಿದ್ದುಪಡಿ ಸ್ವಾಗತಾರ್ಹ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನಾನೊಬ್ಬ ಶ್ರೀಸಾಮಾನ್ಯ. ನಿವೃತ್ತ ಸರ್ಕಾರಿ ನೌಕರ‌. ನನಗೆ ಸ್ವಂತ ಜಮೀನು, ತೋಟ, ಗದ್ದೆ ಮಾಡಬೇಕೆಂಬ ಆಸೆ. ನನ್ನ ಪೂರ್ವಜರಾರೂ ರೈತಾಪಿಗಳಲ್ಲ. ಸದ್ಯದ ಭೂ ಕಾಯ್ದೆಯ ಪ್ರಕಾರ, ಒಬ್ಬ ವ್ಯಕ್ತಿ ಹೊಸದಾಗಿ ಕೃಷಿ ಜಮೀನು ಕೊಳ್ಳಬೇಕಾದರೆ ಆತ ಅಥವಾ ಅವನ ಕುಟುಂಬದವರೊಬ್ಬರು ಕೃಷಿಕರಾಗಿರಬೇಕೆಂಬುದು ಕಡ್ಡಾಯ. ಹಾಗಿಲ್ಲದ ಪಕ್ಷದಲ್ಲಿ ಅಂತಹ ವ್ಯಕ್ತಿ ವ್ಯವಸಾಯ ಮಾಡಲು ಅಥವಾ ಕೃಷಿಕರಿಂದ ಜಮೀನು ಖರೀದಿಸಲು ಕಾನೂನಿನಲ್ಲಿ ಅವಕಾಶ ಇಲ್ಲ.

ಹಾಲಿ ಕಾನೂನಿನ ಯಾವುದೇ ಅರಿವಿಲ್ಲದ ನನ್ನ ಸ್ನೇಹಿತನೊಬ್ಬ ಹೊಸದಾಗಿ ಕೃಷಿ ಮಾಡಲು ಹೋಗಿ, ಎಲ್ಲಾ ಇಲಾಖೆಗಳಲ್ಲಿ ಲಂಚ ಕೊಟ್ಟರೂ ಜಮೀನು, ತೋಟ ಆತನ ಹೆಸರಿಗೆ ಆಗದೆ ಮಾನಸಿಕ ತೊಳಲಾಟ, ಒತ್ತಡಕ್ಕೆ ಸಿಲುಕಿ ಹೃದಯಾಘಾತಕ್ಕೊಳಗಾದ. ವಸ್ತುಸ್ಥಿತಿ ಹೀಗಿರುವಾಗ, ಕರ್ನಾಟಕ ಭೂ ಸುಧಾರಣೆ ಕಾಯ್ದೆಗೆ ತಿದ್ದುಪಡಿ ತರುತ್ತಿರುವುದು ಸ್ವಾಗತಾರ್ಹ.

-ಸಿಹಿಮೊಗೆ ರಮೇಶ್, ಮೈಸೂರು

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು