ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಾಚಕರ ವಾಣಿ | ಎಣ್ಣೆಕಾಳು ಬೆಳೆಗೆ ಬೇಕು ಪ್ರೋತ್ಸಾಹ

ಅಕ್ಷರ ಗಾತ್ರ

ರಷ್ಯಾ-ಉಕ್ರೇನ್ ಯುದ್ಧ ಮತ್ತು ಇಂಡೊನೇಷ್ಯಾ ರಫ್ತು ನಿಷೇಧವು ಭಾರತದ ಮಾರುಕಟ್ಟೆ ಮೇಲೆ ನೇರವಾದ ಪರಿಣಾಮ ಬೀರಿವೆ. ಇದರಿಂದ ಬೆಲೆ ಏರಿಕೆಯಾಗಿ, ಹಣದುಬ್ಬರ ಹೆಚ್ಚಾಗಿ ಜನಸಾಮಾನ್ಯರ ಹೊಟ್ಟೆಯ ಮೇಲೆ ಬರೆ ಹಾಕಿದಂತಾಗಿದೆ. ತಾಳೆ ಮತ್ತು ಶೇಂಗಾ ಎಣ್ಣೆಯ ಬೆಲೆ ಏರಿಕೆಯಿಂದ ಜನಸಾಮಾನ್ಯರ ಮೇಲೆ ಹೊರೆ ಬಿದ್ದಿದೆ.

ನೀರಾವರಿ ಭೂಮಿ ಹೊಂದಿರುವ ರೈತರಿಗೆ ಹೆಚ್ಚಿನ ಪ್ರಮಾಣದಲ್ಲಿ ಎಣ್ಣೆಕಾಳು ಬೆಳೆಯಲು ಸರ್ಕಾರವು ಸೂರ್ಯಕಾಂತಿ, ಸೋಯಾಬೀನ್, ಶೇಂಗಾ ಬೆಳೆಗಳಿಗೆ ಬೆಂಬಲ ಬೆಲೆ ಘೋಷಿಸಬೇಕು ಹಾಗೂ ಸಹಾಯಧನ ನೀಡ ಬೇಕು. ಜೊತೆಗೆ ಈ ಬೆಳೆಗಳ ಉತ್ಪನ್ನಕ್ಕೆ ಸೂಕ್ತವಾದ ಮಾರುಕಟ್ಟೆ ಒದಗಿಸಿ ರೈತರನ್ನು ಪ್ರೋತ್ಸಾಹಿಸುವ ಕೆಲಸವನ್ನು ಜರೂರಾಗಿ ಮಾಡಬೇಕು.

–ಸಂತೋಷಕುಮಾರ ಎಸ್.ಪಿ., ಕಲಬುರಗಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT