ಸೋಮವಾರ, ಆಗಸ್ಟ್ 8, 2022
23 °C

ವಿನಯದಿಂದ ನಡೆದುಕೊಳ್ಳುವುದು ಕಲಿಯಲಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನಟ ಹರ್ಷ ಮತ್ತು ಆತನ ಸ್ನೇಹಿತ ಬೆಂಗಳೂರಿನಲ್ಲಿ ಇತ್ತೀಚೆಗೆ ನಡುರಸ್ತೆಯಲ್ಲಿ ಮದ್ಯದ ಪಾರ್ಟಿ ಮಾಡಿದ್ದಾರೆ. ಅದನ್ನು ಪ್ರಶ್ನಿಸಿದ ಪೊಲೀಸರಿಗೆ ಬೆದರಿಕೆ ಒಡ್ಡಿದ್ದಾರೆ. ಉದ್ಯಾನವನದಲ್ಲಿ ನಟಿಯೊಬ್ಬರು ಜೋರಾಗಿ ಸಂಗೀತ ಹಾಕಿಕೊಂಡು ಸಾರ್ವಜನಿಕರಿಗೆ ತೊಂದರೆ ನೀಡಿದ್ದು, ಪ್ರಶ್ನಿಸಿದವರೊಂದಿಗೆ ಒರಟಾಗಿ ನಡೆದುಕೊಂಡರು ಎಂಬ ಆರೋಪ ಕೇಳಿಬಂದಿದೆ.

ಚಲನಚಿತ್ರಗಳಲ್ಲಿ ನಟಿಸಿ ಕೊಂಚ ಪ್ರಸಿದ್ಧಿ ಪಡೆದುಬಿಟ್ಟವರು ಹೇಗೆ ಬೇಕಾದರೂ ವರ್ತಿಸಿದರೆ ಅದನ್ನು ಒಪ್ಪಲಾಗದು. ಇವರ ಉಪಟಳ ಕೆಲವೊಮ್ಮೆ ಅತಿಯಾಗಿಯೂ ಇರುತ್ತದೆ. ಇವರೇನು ಮೇಲಿನಿಂದ ಇಳಿದುಬಂದವರೇ? ಇತರ ವೃತ್ತಿಗಳಂತೆ ನಟನೆಯೂ ಒಂದು ವೃತ್ತಿ ಅಷ್ಟೆ. ನಾಗರಿಕರಿಗೆ ಇರುವ ಎಲ್ಲ ಜವಾಬ್ದಾರಿಗಳು ಇವರಿಗೂ ಇರಬೇಕು.

- ಪತ್ತಂಗಿ ಎಸ್. ಮುರಳಿ, ಬೆಂಗಳೂರು

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು