ತಾಳ್ಮೆ ಇರಲಿ

7

ತಾಳ್ಮೆ ಇರಲಿ

Published:
Updated:

ಸಮ್ಮಿಶ್ರ ಸರ್ಕಾರದ ಬಗ್ಗೆ ವಿರೋಧ ಪಕ್ಷದ ನಾಯಕ ಬಿ.ಎಸ್‌. ಯಡಿಯೂರಪ್ಪ ಅವರು ದಿನಂಪ್ರತಿ ಟೀಕೆ ಟಿಪ್ಪಣಿಗಳನ್ನು ಮಾಡುವುದು ಸರಿಯಲ್ಲ. ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಗೆ ಹೆಚ್ಚು ಸ್ಥಾನಗಳು ಸಿಕ್ಕಿದ್ದರೂ ಸದನದಲ್ಲಿ ಬಹುಮತ ಸಾಬೀತುಪಡಿಸಲು ಆಗಲಿಲ್ಲ ಎಂಬುದು ಇತಿಹಾಸ. ಪರಿಣಾಮವಾಗಿ ಕಾಂಗ್ರೆಸ್- ಜೆಡಿಎಸ್ ಸಮ್ಮಿಶ್ರ ಸರ್ಕಾರ ಅಸ್ತಿತ್ವಕ್ಕೆ ಬಂದಿದೆ.

ಕಾಂಗ್ರೆಸ್‌ ಹೈಕಮಾಂಡ್‌, ಪಕ್ಷದ ಕರ್ನಾಟಕ ಘಟಕವನ್ನು ದೇವೇಗೌಡರ ಪದತಲಕ್ಕೆ ಕೆಡವಿ ಬಿಜೆಪಿಯನ್ನು ಅಧಿಕಾರದಿಂದ ದೂರವಿಟ್ಟ ಖುಷಿಯಲ್ಲಿದೆ. ರಾಹುಲ್ ಗಾಂಧಿ ಬೆಂಬಲವಿದ್ದರೆ ಕಾಂಗ್ರೆಸ್‌ ನಾಯಕರನ್ನು ಬೆರಳ ತುದಿಯಲ್ಲಿ ಕುಣಿಸಬಹುದು ಎಂದುಕೊಂಡಿದ್ದಾರೆ ಮುಖ್ಯಮಂತ್ರಿ. ಅದರಂತೆಯೇ ರಾಜ್ಯಭಾರ ನಡೆದಿದೆ. ಸಚಿವರು ಯಾರೇ ಇರಲಿ, ಎಲ್ಲ ಖಾತೆಗಳಲ್ಲೂ ಕೈ ಆಡಿಸುವ ಸರ್ವ ಸ್ವಾತಂತ್ರ್ಯ ಮುಖ್ಯಮಂತ್ರಿಯವರ ಸೋದರ ಹೊಂದಿದ್ದಾರೆ ಎಂಬುದು ವಿಧಾನಸೌಧದ ಕಂಬಗಳಿಗೂ ತಿಳಿದ ವಿಷಯ.

ಅನೇಕ ವೈರುಧ್ಯಗಳ ಸಂಘರ್ಷದಲ್ಲಿ ಅದೆಷ್ಟು ಕಾಲ ಎರಡೂ ಪಕ್ಷಗಳು ಕೂಡಿ ಆಡಳಿತ ನಡೆಸುತ್ತವೆ ಎಂಬುದು ದೊಡ್ಡ ಪ್ರಶ್ನೆ? ಯಡಿಯೂರಪ್ಪ ಸ್ವಲ್ಪ ತಾಳ್ಮೆ ವಹಿಸುವುದು ಸೂಕ್ತ.

ಬೆಂಗಳೂರು

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !