ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಯಂಗೊಳಿಸಲು ಆದ್ಯತೆ ಇರಲಿ

Last Updated 26 ಜೂನ್ 2020, 18:30 IST
ಅಕ್ಷರ ಗಾತ್ರ

ಲೋಕೋಪಯೋಗಿ ಇಲಾಖೆಯಲ್ಲಿ 1,000 ಟ್ರೈನಿ ಎಂಜಿನಿಯರ್‌ಗಳನ್ನು ಒಂದು ವರ್ಷದ ಗುತ್ತಿಗೆ ಆಧಾರದ ಮೇಲೆ ನೇಮಿಸಿಕೊಳ್ಳುವುದಾಗಿ ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ ಹೇಳಿದ್ದಾರೆ. ಈ ನಿರ್ಧಾರ ಸೂಕ್ತವಾದುದು. ದೇವರಾಜ ಅರಸು ಅವರು ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ‘ಹಾಫ್‌ ಮಿಲಿಯನ್ ಜಾಬ್’ ಸ್ಕೀಮ್‍ನಡಿ 5 ಲಕ್ಷ ಜನರನ್ನು ವಾಲೆಂಟಿಯರ್‌ಗಳೆಂದು ಒಂದು ವರ್ಷಕ್ಕೆ ನೇಮಿಸಿಕೊಂಡು, ನಂತರ ಸ್ಟೈಫಂಡರಿ ಪದವೀಧರರೆಂದು ಮುಂದುವರಿಸಲಾಗಿತ್ತು. ಬಳಿಕ ಅಧಿಕಾರಕ್ಕೆ ಬಂದ ಸರ್ಕಾರ ಅವರನ್ನು ಬೇರೆ ಬೇರೆ ಇಲಾಖೆಗಳಲ್ಲಿ ವಿಲೀನಗೊಳಿಸಿ ಅವರ ಸೇವೆಯನ್ನು ಕಾಯಂಗೊಳಿಸಿತ್ತು.

ಇತ್ತೀಚಿನ ದಿನಗಳಲ್ಲಿ ಕೆಲವು ನಿಗಮ, ಶಾಲೆ, ಕಾಲೇಜುಗಳು ಗುತ್ತಿಗೆ ಆಧಾರದ ಮೇಲಿನ ನೌಕರಿಯೆಂದು 10-16 ವರ್ಷ ದುಡಿಸಿಕೊಂಡು, ಅವರಿಗೆ ಯಾವ ದಾರಿಯನ್ನೂ ತೋರಿಸದೆ ಅತಂತ್ರ ಸ್ಥಿತಿಯಲ್ಲಿ ಇಡುತ್ತಿವೆ. ಅಂತಹ ಸ್ಥಿತಿ ಇವರಿಗೂ ಒದಗಬಾರದು. ಮುಂದೆ ನೇಮಕಾತಿಗಳ ವೇಳೆ ಟ್ರೈನಿಗಳಿಗೆ ಮೊದಲ ಆದ್ಯತೆ (ವಯೋಮಾನದ ಮೇಲೆ) ನೀಡಬೇಕು. ಇಲ್ಲವೇ ಅರಸು ಅವರ ಅವಧಿಯಲ್ಲಿ ಮಾಡಿದಂತೆ ಮುಂದೆ ಇವರ ಸೇವೆಯನ್ನು ಕಾಯಂಗೊಳಿಸಬೇಕು. ಇದರಿಂದ ಯುವಶಕ್ತಿಯ ಸದ್ಬಳಕೆ ಆಗುವುದರ ಜೊತೆಗೆ ನಿರುದ್ಯೋಗದ ಸಮಸ್ಯೆಗೂ ಪರಿಹಾರ ಸಿಗುತ್ತದೆ.

-ಎ.ಪಂಪಣ್ಣ, ಚಪ್ಪರದಹಳ್ಳಿ, ಹೊಸಪೇಟೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT