ಪ್ಲಾಸ್ಟಿಕ್ ವಸ್ತು ತಯಾರಿಕೆ ಸ್ಥಗಿತಗೊಳ್ಳಲಿ

ಗುರುವಾರ , ಜೂನ್ 27, 2019
29 °C

ಪ್ಲಾಸ್ಟಿಕ್ ವಸ್ತು ತಯಾರಿಕೆ ಸ್ಥಗಿತಗೊಳ್ಳಲಿ

Published:
Updated:

ನಿರುಪಯುಕ್ತ ಪ್ಲಾಸ್ಟಿಕ್ ಅನ್ನು ಸಿಕ್ಕಸಿಕ್ಕಲ್ಲಿ ಬಿಸಾಕುವುದರಿಂದ ಎಲ್ಲೆಡೆ ವಿಲೇವಾರಿಯ ವ್ಯವಸ್ಥೆ ಹದಗೆಟ್ಟಿದೆ. ಇದು ಅನೇಕ ದುಷ್ಪರಿಣಾಮಗಳಿಗೆ ಕಾರಣವಾಗಿದೆ. ಮಿತಿಮೀರಿ ಬೆಳೆಯುತ್ತಿರುವ ಜನಸಂಖ್ಯೆ, ಗಗನಚುಂಬಿ ಕಟ್ಟಡಗಳು ಘನತ್ಯಾಜ್ಯ ವಸ್ತುಗಳ ಹೆಚ್ಚಳಕ್ಕೆ ಮುಖ್ಯ ಕಾರಣಗಳಾಗಿದ್ದು, ಇವುಗಳ ವಿಲೇವಾರಿ ಅತಿ ದೊಡ್ಡ ಸವಾಲಾಗಿದೆ.

ನಾಗರಿಕರು ಎನಿಸಿಕೊಂಡಿರುವ ನಾವು ದಶಕಗಳಿಂದಲೂ ಭೂಮಿಯನ್ನು ಅಪವಿತ್ರಗೊಳಿಸುತ್ತಲೇ ಬಂದಿದ್ದೇವೆ. ಇದರ ಪರಿಣಾಮವಾಗಿ ಪರಿಸರ ಮಾಲಿನ್ಯದ ಸುಳಿಗೆ ಸಿಲುಕಿದ್ದೇವೆ. ಇಂದಿನ ಆಧುನಿಕ ಯುಗದಲ್ಲಿ ಪ್ಲಾಸ್ಟಿಕ್‌ ಪಿಡುಗನ್ನು ಸಂಪೂರ್ಣವಾಗಿ ತೊಡೆದುಹಾಕಲು ಕಷ್ಟ. ಆದರೂ ಈ ನಿಟ್ಟಿನಲ್ಲಿ ಮೊದಲ ಪ್ರಯತ್ನವೆಂಬಂತೆ ಪ್ಲಾಸ್ಟಿಕ್ ವಸ್ತು ತಯಾರಿಕಾ ಕಾರ್ಖಾನೆಗಳನ್ನು ಸ್ಥಗಿತಗೊಳಿಸಬೇಕು. ಪ್ಲಾಸ್ಟಿಕ್‌ ನಿಷೇಧದ  ಕಾನೂನನ್ನು ಸಮರ್ಪಕವಾಗಿ ಜಾರಿಗೆ ತರಬೇಕು.

ಕೆ.ಜಿ.ಸರೋಜಾ ನಾಗರಾಜ್, ಪಾಂಡೋಮಟ್ಟಿ

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 2

  Happy
 • 0

  Amused
 • 0

  Sad
 • 0

  Frustrated
 • 1

  Angry

Comments:

0 comments

Write the first review for this !