ಇಡ್ಲಿ ಬೇಯಿಸಲು ಪ್ಲಾಸ್ಟಿಕ್‌ ಹಾಳೆ ಬಳಕೆ!

7

ಇಡ್ಲಿ ಬೇಯಿಸಲು ಪ್ಲಾಸ್ಟಿಕ್‌ ಹಾಳೆ ಬಳಕೆ!

Published:
Updated:

‘ತಟ್ಟೆ ಇಡ್ಲಿಗೆ ಪ್ಲಾಸ್ಟಿಕ್ ವಿಷದ ಮಿಶ್ರಣ!’ ಲೇಖನದಲ್ಲಿ (ಪ್ರ.ವಾ., ಡಿ. 4) ತಟ್ಟೆ ಇಡ್ಲಿ ಬೇಯಿಸಲು ಪ್ಲಾಸ್ಟಿಕ್‌ ಹಾಳೆ ಬಳಸುತ್ತಿರುವುದರಿಂದ ಆಗುವ ದುಷ್ಪರಿಣಾಮಗಳ ಬಗ್ಗೆ ತಿಳಿಸಲಾಗಿದೆ. ಆದರೆ, ಈ ರೀತಿಯ ಪ್ಲಾಸ್ಟಿಕ್ ಹಾಳೆಗಳ ಬಳಕೆಯು ಬಿಡದಿಯ ತಟ್ಟೆ ಇಡ್ಲಿಯ ಹೋಟೆಲ್‌ಗಳಲ್ಲಿ ಮಾತ್ರ ನಡೆಯುತ್ತದೆ ಎಂದು ಲೇಖಕರು ಭಾವಿಸಿರುವಂತಿದೆ. ಈ ರೀತಿಯ ಪ್ಲಾಸ್ಟಿಕ್ ಹಾಳೆಗಳನ್ನು ಬೆಂಗಳೂರಿನ ಅನೇಕ ತಟ್ಟೆ ಇಡ್ಲಿ ಹೋಟೆಲ್‌ಗಳಲ್ಲಿ ಉಪಯೋಗಿಸುವುದನ್ನು ನಾನು ನೋಡಿದ್ದೇನೆ. 

ಹೋಟೆಲ್‌ವೊಂದರಲ್ಲಿ ಇಡ್ಲಿ ಬೇಯಿಸಲು ಪ್ಲಾಸ್ಟಿಕ್ ಹಾಳೆ ಉಪಯೋಗಿಸುವ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಕ್ಕೆ ಅವರ ಬಳಿ ಉತ್ತರವಿರಲಿಲ್ಲ. ಅದನ್ನು ಸರಿಪಡಿಸಿಕೊಳ್ಳುವ ಆಸಕ್ತಿಯೂ ತೋರಲಿಲ್ಲ. ನಮ್ಮ ಕಣ್ಣ ಮುಂದೆಯೇ ಅವರು ಪ್ಲಾಸ್ಟಿಕ್ ಹಾಳೆಯಿಂದ ತಟ್ಟೆ ಇಡ್ಲಿ ತೆಗೆಯುತ್ತಿದ್ದರೂ, ವಿದ್ಯಾವಂತ ಮಂದಿ ತಲೆ ಕೆಡಿಸಿಕೊಳ್ಳದೆ ಹಾತೊರೆದು ತಿನ್ನುವುದು ನೋಡಿ ಆಶ್ಚರ್ಯಪಟ್ಟಿದ್ದೇನೆ. ತಮ್ಮ ಅನುಕೂಲಕ್ಕೆ, ಲಾಭಕ್ಕೆ ಈ ಪ್ಲಾಸ್ಟಿಕ್ ಮಾರಿಯನ್ನು ಉಪಯೋಗಿಸುವ ಹೋಟೆಲ್ ಉದ್ಯಮ ಒಂದೆಡೆಯಾದರೆ, ಅದನ್ನು ವಿರೋಧಿಸುವ ಮನಸ್ಥಿತಿಯಿಲ್ಲದಿರುವ ಜನರು ಇನ್ನೊಂದೆಡೆ. ಹೀಗಿರುವಾಗ, ಆಹಾರ ತಯಾರಿಕೆಯಲ್ಲಿ ಹಾಗೂ ರವಾನೆಯಲ್ಲಿ ಪ್ಲಾಸ್ಟಿಕ್ ಬಳಕೆ ತಡೆಯುವುದಾದರೂ ಹೇಗೆ?

ಬರಹ ಇಷ್ಟವಾಯಿತೆ?

 • 30

  Happy
 • 0

  Amused
 • 1

  Sad
 • 0

  Frustrated
 • 0

  Angry

Comments:

0 comments

Write the first review for this !