ಬುಧವಾರ, ಅಕ್ಟೋಬರ್ 28, 2020
21 °C

‍ರೈಲ್ವೆ ಪ್ಲಾಟ್‌ಫಾರ್ಮ್ ದುಬಾರಿ ಶುಲ್ಕ ತಗ್ಗಲಿ

ವಾಚಕರವಾಣಿ Updated:

ಅಕ್ಷರ ಗಾತ್ರ : | |

ರೈಲು ನಿಲ್ದಾಣಗಳಲ್ಲಿ ಪ್ಲಾಟ್‌ಫಾರಂನೊಳಗೆ ಹೋಗಿ ಬರುವವರಿಗೆ ಕನಿಷ್ಠ 50 ರೂಪಾಯಿ ಶುಲ್ಕ ವಿಧಿಸುತ್ತಿರುವುದು ದುರದೃಷ್ಟಕರ. ಪ್ರತೀ ಎರಡು ಗಂಟೆಯ ನಂತರ ಮತ್ತೊಮ್ಮೆ 50 ರೂಪಾಯಿ ಕೊಟ್ಟು ಪ್ಲಾಟ್‌ಫಾರ್ಮ್‌ ಟಿಕೆಟ್ ತೆಗೆದುಕೊಳ್ಳಬೇಕು. ಈ ಹಿಂದೆ ಇದ್ದ 5 ರೂಪಾಯಿ ಶುಲ್ಕವನ್ನು ಹತ್ತು ಪಟ್ಟು ಹೆಚ್ಚಿಸಿದ್ದಕ್ಕೆ ಯಾವ ಕಾರಣವಿದೆಯೋ ತಿಳಿಯದು.

ಲಾಕ್‍ಡೌನ್ ಸಮಯದಲ್ಲಿ ರೈಲು ನಿಲ್ದಾಣಗಳಲ್ಲಿ ಜನಸಂದಣಿ ನಿಯಂತ್ರಿಸಲು ಈ ಕ್ರಮ ಕೈಗೊಳ್ಳಲಾಯಿತು ಎಂದು ಅಧಿಕಾರಿಗಳು ಸಮರ್ಥಿಸಿಕೊಳ್ಳುತ್ತಾರೆ. ಆ ಸಮಯದಲ್ಲಿ ಕೆಲವೇ ನಿರ್ದಿಷ್ಟ ವಿಶೇಷ ರೈಲುಗಳನ್ನು ವಲಸಿಗರ ಅನುಕೂಲಕ್ಕಾಗಿ ಬಿಡಲಾಗಿತ್ತು. ಅಂದರೆ, ಇನ್ನುಳಿದ ಸಮಯದಲ್ಲಿ ನಿಲ್ದಾಣದೊಳಗೆ ಯಾರೂ ಬರುತ್ತಲೇ ಇರಲಿಲ್ಲ. ಅಲ್ಲದೆ, ಲಾಕ್‍ಡೌನ್‍ ನಿಯಮಗಳನ್ನು ಸಡಿಲಿಸಿದ ನಂತರವೂ ಸಂಪೂರ್ಣ ಸಾಮರ್ಥ್ಯದಲ್ಲಿ ಯಾವ ಮಾರ್ಗವೂ ಇಂದಿನವರೆಗೆ ಕಾರ್ಯನಿರ್ವಹಿಸಿಲ್ಲ. ಸೌಜನ್ಯಕ್ಕಾಗಿ ಎರಡು ನಿಮಿಷ ತಮ್ಮ ಕುಟುಂಬದವರನ್ನು ಅಥವಾ ಸ್ನೇಹಿತರನ್ನು ರೈಲಿನ ಬೋಗಿಯವರೆಗೂ ಬೀಳ್ಕೊಡಲು ಹೋಗುವವರಿಗೆ ದುಬಾರಿ ಶುಲ್ಕ ವಿಧಿಸುವುದು ಸಮಂಜಸವಲ್ಲ.

ಡಾ. ಶಾಂತರಾಜು ಎಸ್., ಬೆಂಗಳೂರು

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.