ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪೋಕ್ಸೊ ಕಾಯ್ದೆ: ಜಾಗೃತಿಗೆ ಸಿಗಲಿ ಆದ್ಯತೆ

Last Updated 13 ಸೆಪ್ಟೆಂಬರ್ 2022, 19:30 IST
ಅಕ್ಷರ ಗಾತ್ರ

ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯದ ಆರೋಪ ಪ್ರಕರಣದಿಂದ ಪೋಕ್ಸೊ ಕಾಯ್ದೆ ಬಗ್ಗೆ, ಅದರ ಮಹತ್ವದ ಬಗ್ಗೆ ಚರ್ಚೆಗಳು ಮತ್ತೆ ಶುರುವಾಗಿವೆ. ಈ ಕಾಯ್ದೆ ಜಾರಿಗೆ ಬಂದು ಈಗಾಗಲೇ ಹತ್ತು ವರ್ಷಗಳಾದರೂ ಅದರ ಬಗ್ಗೆ ಬಹುತೇಕ ಪೋಷಕರಿಗೆ, ಮಕ್ಕಳಿಗೆ ಮಾಹಿತಿಯ ಕೊರತೆ ಇರುವುದು ಶೋಚನೀಯ ಸಂಗತಿ. ಯಾವುದೇ ಕಾಯ್ದೆಯನ್ನುಜಾರಿಗೆ ತಂದಾಗ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಆ ಕಾಯ್ದೆಗಳ ಬಗ್ಗೆ ಜನಸಾಮಾನ್ಯರಲ್ಲಿ ಕಡ್ಡಾಯವಾಗಿ ಜಾಗೃತಿ ಮೂಡಿಸಬೇಕು. ಈ ದಿಸೆಯಲ್ಲಿ ಸರ್ಕಾರಗಳು ಗಮನಹರಿಸದೇ ಇರುವುದು ಸಂತ್ರಸ್ತರಿಗೆ ಮಾಡುವ ಅನ್ಯಾಯವಾಗಿದೆ. ಅದರಲ್ಲೂ ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯಗಳನ್ನು ತಡೆಯುವ, ದೌರ್ಜನ್ಯ ಎಸಗಿದ ಅಪರಾಧಿಗಳಿಗೆ ಶಿಕ್ಷೆ ವಿಧಿಸುವ ಪೋಕ್ಸೊ ಕಾಯ್ದೆಯ ಬಗ್ಗೆ ಜಾಗೃತಿಯನ್ನು ಕಡ್ಡಾಯವಾಗಿ ಜನಸಾಮಾನ್ಯರು ಮತ್ತು ಮಕ್ಕಳಲ್ಲಿ ಮೂಡಿಸಲೇಬೇಕಿದೆ. ಸರ್ಕಾರಗಳು ಈಗಲಾದರೂ ಈ ದಿಸೆಯಲ್ಲಿ ಶೀಘ್ರವಾಗಿ ಕಾರ್ಯಪ್ರವೃತ್ತವಾಗಲಿ.

– ಲಕ್ಷ್ಮಿಕಾಂತ ಮಿರಜಕರ,ಶಿಗ್ಗಾವಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT