ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಣದ ರಾಜಕೀಯ ಇಚ್ಛಾಶಕ್ತಿ

Last Updated 24 ಡಿಸೆಂಬರ್ 2019, 19:46 IST
ಅಕ್ಷರ ಗಾತ್ರ

ಗಡಿ ವಿವಾದವನ್ನು ಪದೇ ಪದೇ ಕೆದಕುವುದು ಸರಿಯಲ್ಲ. ಮಹಾರಾಷ್ಟ್ರದ ನೂತನ ಮುಖ್ಯಮಂತ್ರಿ ಉದ್ಧವ್‌ ಠಾಕ್ರೆ ಅವರ ಇತ್ತೀಚಿನ ಉದ್ಧಟತನದ ಮಾತು, ಕನ್ನಡಿಗರು ಮತ್ತು ಮರಾಠಿಗರ ನಡುವಿನ ಬಾಂಧವ್ಯಕ್ಕೆ ಹುಳಿ ಹಿಂಡುವಂತಿದೆ. ಬೆಳಗಾವಿಯು ಕರ್ನಾಟಕಕ್ಕೆ ಸೇರಿದ್ದು ಎಂದು ಎಲ್ಲ ಆಯೋಗಗಳ ವರದಿಗಳು ಸ್ಪಷ್ಟವಾಗಿ ದಾಖಲೆ ಸಮೇತ ಹೇಳಿವೆ. ಇಷ್ಟಾದ ಮೇಲೂ ಮಹಾರಾಷ್ಟ್ರದ ನಾಯಕರು ಇದನ್ನು ಒಪ್ಪಿಕೊಳ್ಳಲು ಸುತರಾಂ ತಯಾರಿಲ್ಲ.

ಮತ ಗಳಿಕೆಯ ಕಾರಣಕ್ಕಾಗಿ ಮರಾಠಾ ನಾಯಕರಿಗೆ ಬೆಳಗಾವಿಯ ವಿಷಯ ಜೀವಂತವಾಗಿರಬೇಕು. ಇಂತಹ ವಿವಾದಗಳಿಗೆ ಪೂರ್ಣ ವಿರಾಮ ಹಾಕುವಂತಹ ಕೆಲಸವನ್ನು ಕೇಂದ್ರ ಸರ್ಕಾರ ಮಾಡುತ್ತಿಲ್ಲ. ಇನ್ನೂ ಎಷ್ಟು ದಿನ ಅದನ್ನು ‘ವಿವಾದ’ವಾಗಿ ಉಳಿಸುತ್ತೀರಿ?

ಬಾಬು ಶಿರಮೋಜಿ,ಬೆಳಗಾವಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT