ಮಂಗಳವಾರ, ನವೆಂಬರ್ 12, 2019
20 °C

ಜನರಿಗೆ ಸತ್ಯ ಗೋಚರಿಸುತ್ತಿದೆ!

Published:
Updated:

ಕೆಲವು ರಾಜಕೀಯ ನಾಯಕರ ಮನೆ, ಆಸ್ತಿಪಾಸ್ತಿ ಮೇಲೆ ಐ.ಟಿ, ಇ.ಡಿ.ಯಂತಹ ಸಂಸ್ಥೆಗಳು ಇತ್ತೀಚೆಗೆ ದಾಳಿ ನಡೆಸುತ್ತಿರುವುದು ರಾಜಕೀಯ ಸಮರಕ್ಕೆ ಕಾರಣವಾಗಿದೆ. ಆದರೆ, ಪ್ರಜೆಗಳಾದ ನಮಗೆ ಇದರಿಂದ ಒಂದು ಸತ್ಯವಂತೂ ಗೋಚರಿಸುತ್ತದೆ. ಅದೇನೆಂದರೆ, ದಾಳಿಯಾದ ಮುಖಂಡರ ಕೋಟ್ಯಂತರ ರೂಪಾಯಿ ಮೌಲ್ಯದ ಆಸ್ತಿಪಾಸ್ತಿ. ಇಷ್ಟೊಂದು ಮೌಲ್ಯದ ಒಡೆಯರಾದ ನಮ್ಮ ಜನಪ್ರತಿನಿಧಿಗಳು ಜನರ ಕಷ್ಟಕಾರ್ಪಣ್ಯ ತಿಳಿಯುವುದಾದರೂ ಹೇಗೆ?

ಹಲವರಿಗೆ ಇಷ್ಟು ಆಸ್ತಿ ಇದ್ದರೂ ಇನ್ನೂ ಹಣದ ದಾಹ ತೀರಿರುವುದಿಲ್ಲ. ಜನರ ಸೇವೆ ಮಾಡಲು ಇವರಿಗೆ ಸಚಿವ ಸ್ಥಾನವೇ ಬೇಕು. ಅದರಲ್ಲೂ ಸಂಪನ್ಮೂಲ ಹೆಚ್ಚಾಗಿರುವ ಖಾತೆಗಳೇ ಬೇಕು. ‘ಭಾರತವು ಶ್ರೀಮಂತ ರಾಜಕಾರಣಿಗಳಿರುವ ಬಡ ದೇಶ’ ಎಂಬ ದಾರ್ಶನಿಕರೊಬ್ಬರ ಮಾತು, ಸತ್ಯ ಹರಿಶ್ಚಂದ್ರನ ಮಾತಿನಷ್ಟೇ ಸತ್ಯ ಎನಿಸುತ್ತದೆ.

-ರಾಜು ಬಿ. ಲಕ್ಕಂಪುರ, ಜಗಳೂರು

ಪ್ರತಿಕ್ರಿಯಿಸಿ (+)