ಸಕಾರಾತ್ಮಕ ನಡೆ

7

ಸಕಾರಾತ್ಮಕ ನಡೆ

Published:
Updated:

ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಬಜೆಟ್‍ ಭಾಷಣದಲ್ಲಿ, ಆರ್ಯವೈಶ್ಯ ಹಾಗೂ ಬ್ರಾಹ್ಮಣ ಅಭಿವೃದ್ಧಿ ಮಂಡಳಿಗಳನ್ನು ಸ್ಥಾಪಿಸುವುದಾಗಿ ಹೇಳಿದ್ದಾರೆ. ಈ ನಿರ್ಧಾರ ಆ ಸಮುದಾಯದವರಲ್ಲಿ ಸಂತಸ ಮೂಡಿಸಿದೆ. ಆ ಸಮುದಾಯಗಳಲ್ಲಿನ ಆರ್ಥಿಕವಾಗಿ ಹಿಂದುಳಿದ ಜನರನ್ನು ಮೇಲೆತ್ತಲು ಇದರಿಂದ ಸಾಧ್ಯವಾಗಬಹುದು, ಅಂಥವರಿಗೆ ಮೀಸಲಾತಿಯನ್ನೂ ವಿಸ್ತರಿಸುವ ಅಗತ್ಯವಿದೆ.

ಮೀಸಲಾತಿಗೆ ಜಾತಿಯೊಂದನ್ನೇ ಮಾನದಂಡವನ್ನಾಗಿಟ್ಟುಕೊಳ್ಳುವ ರೂಢಿಗೆ ತೆರೆ ಎಳೆಯಬೇಕು. ಎಲ್ಲಾ ಜಾತಿಗಳಲ್ಲಿರುವ ಬಡವರಿಗೂ ಮೀಸಲಾತಿ ಕಲ್ಪಿಸುವ ನಿಟ್ಟಿನಲ್ಲಿ ಚಿಂತನೆ ನಡೆಸಬೇಕಾಗಿದೆ. 2015ರಲ್ಲಿ ಹಿಂದುಳಿದ ವರ್ಗಗಳ ಆಯೋಗದ ಮೂಲಕ ನಡೆಸಿದ್ದ ಸಾಮಾಜಿಕ, ಆರ್ಥಿಕ, ಶೈಕ್ಷಣಿಕ ಸಮೀಕ್ಷೆಯ ವರದಿಯ ಆಧಾರದಲ್ಲಿ ವಿವಿಧ ಸಮುದಾಯಗಳ ಜನಸಂಖ್ಯೆಗೆ ಅನುಗುಣವಾಗಿ ಉದ್ಯೋಗ, ಶಿಕ್ಷಣದಲ್ಲಿ ಮೀಸಲಾತಿ ಕಲ್ಪಿಸಬೇಕು. ಸ್ಥಳೀಯ ಸಂಸ್ಥೆಗಳಲ್ಲಿನ ರಾಜಕೀಯ ಮೀಸಲಾತಿಗೂ ಅದು ಅನ್ವಯ ಆಗಬೇಕು.

–ವೈ. ಯಮುನೇಶ್, ಹೊಸಪೇಟೆ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !