ಸೋಮವಾರ, 7–2–1994

7

ಸೋಮವಾರ, 7–2–1994

Published:
Updated:

ಕೇರಳ ಬಸ್ ದುರಂತ 40 ಮಂದಿ ಸಜೀವ ದಹನ

ಆಲಪ್ಪುಳ, ಫೆ. 6 (ಪಿಟಿಐ, ಯುಎನ್‌ಐ)– ಚೇರ್ತಲಕ್ಕೆ ಸಮೀಪದ ಚಮ್ಮನಾಡು ಎಂಬಲ್ಲಿ ನಿನ್ನೆ ಮಧ್ಯರಾತ್ರಿ ವೇಳೆಗೆ ಕೇರಳ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಬಸ್ಸು ಮತ್ತು ಲಾರಿಯೊಂದು ಡಿಕ್ಕಿಯಾಗಿ ಸಂಭವಿಸಿದ ಭೀಕರ ಅಪ‍ಘಾತದಲ್ಲಿ ಮಹಿಳೆಯರೂ ಮಕ್ಕಳೂ ಸೇರಿದಂತೆ 40 ಮಂದಿ ಸಜೀವ ದಹನಗೊಂಡರು. 69 ಮಂದಿ ಗಾಯಗೊಂಡಿದ್ದಾರೆ.

ತ್ರಿಚೂರಿನಿಂದ ತಿರುವನಂತಪುರ ಜಿಲ್ಲೆಯ ಆಟ್ಟಿಂಗಲ್‌ಗೆ ಕಿಕ್ಕಿರಿದು ತುಂಬಿದ್ದ ಪ್ರಯಾಣಿಕರನ್ನು ಸಾಗಿಸುತ್ತಿದ್ದ ವೇಗದೂತ ಬಸ್ಸು ಹಾಗೂ ತೆಂಗಿನ ನಾರು ತುಂಬಿಕೊಂಡು ಸಾಗುತ್ತಿದ್ದ ಲಾರಿ ಪರಸ್ಪರ ಡಿಕ್ಕಿ ಹೊಡೆದ ರಭಸಕ್ಕೆ ವಾಹನಗಳ ಡೀಸೆಲ್ ಟ್ಯಾಂಕುಗಳು ಸ್ಫೋಟಿಸಿ ಬೆಂಕಿ ಹತ್ತಿಕೊಂಡು ಈ ದುರ್ಘಟನೆ ಸಂಭವಿಸಿತ್ತು.

ಮುಸ್ಲಿಂಲೀಗ್: ಸೇಠ್ ಸ್ಥಾನಕ್ಕೆ ಬನಾತ್ವಾಲಾ

ನವದೆಹಲಿ, ಫೆ. 6 (ಯುಎನ್‌ಐ)– ಇಂಡಿಯನ್ ಯೂನಿಯನ್ ಮುಸ್ಲಿಂ ಲೀಗ್ (ಐಯುಎಂಎಲ್) ರಾಷ್ಟ್ರೀಯ ಕಾರ್ಯಕಾರಿ ಸಮಿತಿಯ ಬಹುತೇಕ ಸದಸ್ಯರು ಇಂದು ಇಬ್ರಾಹಿಂ ಸುಲೇಮಾನ್ ಸೇಠ್ ಅವರ ಬದಲಿಗೆ ಜಿ.ಎಂ. ಬನಾತ್ವಾಲಾ ಅವರನ್ನು ಅಧ್ಯಕ್ಷರನ್ನಾಗಿ ಆಯ್ಕೆ ಮಾಡಿದುದರಿಂದ ಪಕ್ಷ ಇಬ್ಭಾಗ
ಗೊಂಡಂತಾಯಿತು.

ಕಳೆದ 21 ವರ್ಷಗಳಿಂದ ಮುಸ್ಲಿಂ ಲೀಗ್ ಅಧ್ಯಕ್ಷರಾಗಿದ್ದ ಸೇಠ್ ಅವರನ್ನು ಇಂದಿನ ರಾಷ್ಟ್ರೀಯ ಕಾರ್ಯಕಾರಿ
ಸಮಿತಿ ಸಭೆಯಲ್ಲಿ ಪಕ್ಷದ ಮುಖ್ಯ ಪೋಷಕರನ್ನಾಗಿ ಆರಿಸಲಾಯಿತು.

ನಾಣ್ಯ ಬಿಡುಗಡೆ

ನವದೆಹಲಿ, ಫೆ. 6 (ಯುಎನ್‌ಐ)– ಕ್ವಿಟ್ ಇಂಡಿಯಾ ಚಳವಳಿಯ ಸ್ವರ್ಣ ಮಹೋತ್ಸವದ ಸಂದರ್ಭದಲ್ಲಿ ಸರ್ಕಾರವು ವಿಶೇಷ ಸ್ಮಾರಕ ನಾಣ್ಯಗಳನ್ನು ಹೊರ ತಂದಿದೆ.

ಮುಂಬೈ ಹಾಗೂ ಉತ್ತರಪ್ರದೇಶದ ನೊಯಿಡಾದಲ್ಲಿ ಈ ನಾಣ್ಯಗಳನ್ನು ಮಾರಾಟ ಮಾಡಲಾಗುವುದು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !