ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೋಮವಾರ, 28–2–1994

25 ವರ್ಷಗಳ ಹಿಂದೆ
Last Updated 27 ಫೆಬ್ರುವರಿ 2019, 20:15 IST
ಅಕ್ಷರ ಗಾತ್ರ

ತುಮಕೂರು ಎಚ್‌ಎಂಟಿ ‘ಅವ್ಯವಹಾರ’ ತನಿಖೆಗೆ ಸಮಿತಿ

ನವದೆಹಲಿ, ಫೆ. 27– ತುಮಕೂರು ಎಚ್ಎಂಟಿ ಕೈಗಡಿಯಾರ ಕಾರ್ಖಾನೆಯ ಕಾರ್ಯನಿರ್ವಹಣೆ, ಅದರ ಉತ್ಪಾದನೆ, ವಹಿವಾಟು ಮತ್ತು ಲಾಭ ಮತ್ತಿತರ ವಿಷಯಗಳ ಬಗೆಗೆ ಅಧ್ಯಯನ ಮಾಡಲು ಕೇಂದ್ರ ಸರ್ಕಾರವು ಮೂವರು ಸದಸ್ಯರ ಸತ್ಯಶೋಧನಾ ಸಮಿತಿಯನ್ನು ರಚಿಸಿ ಆಜ್ಞೆ ಹೊರಡಿಸಿದೆ.

ನಿವೃತ್ತ ಐಎಎಸ್ ಅಧಿಕಾರಿ ಪಿ.ಕೆ.ಜಿ. ಮೆನನ್ ಅಧ್ಯಕ್ಷರಾಗಿರುವ ಈ ಸಮಿತಿಯಲ್ಲಿ ನಿವೃತ್ತ ಲೆಫ್ಟಿನೆಂಟ್ ಜನರಲ್ ಸುಶೀಲ್ ಕುಮಾರ್ ಮತ್ತು ಎಚ್ಎಂಟಿ ಸಂಸ್ಥೆಯ ಜಗನ್ನಾಥನ್ ಸದಸ್ಯ ಕಾರ್ಯದರ್ಶಿ ಆಗಿ ನೇಮಕಗೊಂಡಿದ್ದಾರೆ.

ರಥಯಾತ್ರೆ

‌ರಾಜಕೋಟೆ, ಫೆ. 27 (ಯುಎನ್‌ಐ)– ದೇಶದ ಪ್ರಮುಖ ಸಾಧುಸಂತರ ಅಭಿಲಾಷೆಯಂತೆ ಅಯೋಧ್ಯೆಯಲ್ಲಿ ಶ್ರೀರಾಮ ದೇವಾಲಯವನ್ನು ನಿರ್ಮಿಸುವ ಸಲುವಾಗಿ ಜನರ ಅಭಿಪ್ರಾಯ ಸಂಗ್ರಹಿಸಲು ದ್ವಾರಕ ಪೀಠದ ಶಂಕರಾಚಾರ್ಯರಾದ ಸ್ವಾಮಿ ಸ್ವರೂಪಾನಂದ ಸರಸ್ವತಿ ಅವರು ರಥಯಾತ್ರೆ ನಡೆಸಲು ನಿರ್ಧರಿಸಿದ್ದಾರೆ.

‘ದಶರಥ ಕೌಸಲ್ಯ’ ಎಂಬ ಈ ರಥಯಾತ್ರೆ ಶಿವರಾತ್ರಿ ದಿನದಂದು (ಮಾ. 10) ಜುನಾಗಡದಿಂದ ಪ್ರಾರಂಭವಾಗಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT