ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಂಗಳವಾರ, 8–4–1969

Last Updated 7 ಏಪ್ರಿಲ್ 2019, 20:23 IST
ಅಕ್ಷರ ಗಾತ್ರ

ಕ್ಯಾನ್ಸರ್ ನಿರೋಧಕ ನಾಯಿಕೊಡೆ

ಟೋಕಿಯೊ, ಏ. 7– ನಿಷ್ಪ್ರಯೋಜಕವೆಂದು ಭಾವಿಸಲಾದ ನಾಯಿಕೊಡೆಗಳು ಈಗ ತುಂಬಾ ಪ್ರಯೋಜನಕಾರಿ. ಈ ನಾಯಿಕೊಡೆಗಳಲ್ಲಿರುವ ಕ್ಯಾನ್ಸರ್ ನಿರೋಧಕ ಸತ್ವವನ್ನು ಹೊರತೆಗೆಯುವುದರಲ್ಲಿ ಯಶಸ್ವಿಯಾಗಿದೆ ಜಪಾನಿ ವೈದ್ಯರ ತಂಡ.

80 ಡಿಗ್ರಿ ಸೆಂಟಿಗ್ರೇಡ್ ಶಾಖದಲ್ಲಿ ಸುಮಾರು 10–15 ನಿಮಿಷಗಳ ಕಾಲ ನಾಯಿಕೊಡೆಗಳನ್ನು ಬೇಯಿಸಿ, ಅದಕ್ಕೆ ಮದ್ಯಸಾರವನ್ನು ಸೇರಿಸಿದ ನಂತರ ಹೆಚ್ಚು ಕಡಿಮೆ ‘ಪೊಲಿಸ್ಟಾಕರಿಬ್’ನಂತಹ ವಸ್ತು ದೊರೆಯುತ್ತದೆ. ಇದನ್ನು ಚುಚ್ಚುಮದ್ದಿನ ರೂಪದಲ್ಲಿ ದೇಹಕ್ಕೆ ಸೇರಿಸಿದರೆ, ಕ್ಯಾನ್ಸರ್ ರೋಗಾಣುಗಳು ಸಂಪೂರ್ಣವಾಗಿ ನಾಶವಾಗುತ್ತವೆ. ಈ ಬಗ್ಗೆ ಇಲಿಗಳ ಮೇಲೆ ನಡೆಸಿದ ಪ್ರಯೋಗ ಯಶಸ್ವಿಯಾಗಿದೆ ಎನ್ನುತ್ತಾರೆ ಡಾ. ಗೊರೊಚಿಹರ ಮತ್ತು ಅವರ ಸಹೋದ್ಯೋಗಿಗಳು. ‘ಯೋಮುರಿ’ ಪತ್ರಿಕೆ ಈ ವಿಷಯ ತಿಳಿಸಿದೆ.

ಕೋಲಾರ ಗಣಿ: ತೆಗೆದ ಚಿನ್ನಕ್ಕಿಂತ ಉತ್ಪಾದನೆಯ ವೆಚ್ಚವೇ ಹೆಚ್ಚು

ನವದೆಹಲಿ, ಏ. 7– 1965ರಿಂದ 1968ರ ನಡುವಣ ಅವಧಿಯಲ್ಲಿ ಕೋಲಾರ ಚಿನ್ನದ ಗಣಿಯಲ್ಲಿ 570.78 ಲಕ್ಷ ರೂ. ಬೆಲೆಯ 79.87 ಗ್ರಾಂ. ಚಿನ್ನವನ್ನು ಉತ್ಪಾದಿಸಲಾಯಿತೆಂದು ಉಪ ಪ್ರಧಾನಿ ಮುರಾರಜಿ ದೇಸಾಯಿಯವರು ಇಂದು ಲೋಕಸಭೆಯಲ್ಲಿ ಬಾಬೂರಾವ್ ಪಟೇಲ್‌ರವರಿಗೆ ತಿಳಿಸಿದರು. ಉತ್ಪಾದಿಸಿದ ಚಿನ್ನದ ಬೆಲೆಗಿಂತ ಉತ್ಪಾದನಾ ವೆಚ್ಚ ಹೆಚ್ಚೆಂದು ಸಚಿವರು ನುಡಿದು, 778.79 ಲಕ್ಷ ರೂ. ಹೆಚ್ಚು ವೆಚ್ಚವಾಗಿದೆಯೆಂದರು.

ನೇಪಾಳದ ಪ್ರಧಾನಿ ಕೀರ್ತಿನಿಧಿ ಬಿಷ್ಠಾ

ಕಠಮಂಡು, ಏ. 7– ಶ್ರೀ ಕೀರ್ತಿನಿಧಿ ಬಿಷ್ಠಾ ಅವರು ನೇಪಾಳದ ನೂತನ ಪ್ರಧಾನಿ ಎಂದು ಇಂದು ಮಧ್ಯಾಹ್ನ ಇಲ್ಲಿ ಪ್ರಕಟಿಸಲಾಯಿತು.

ಶ್ರೀ ಸೂರ್ಯ ಬಹದ್ದೂರ್ ಥಾಪ ಅವರ ಮಂತ್ರಿಮಂಡಲದಲ್ಲಿ ಇವರು ಉಪಪ್ರಧಾನಿಯಾಗಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT