ಶುಕ್ರವಾರ, ಡಿಸೆಂಬರ್ 2, 2022
20 °C

ಪ್ರಜಾವಾಣಿ@75 | ವಿಶಾಲ ದೃಷ್ಟಿಕೋನದ ಜನಪರ ಧ್ವನಿ: ಕೆ.ಪಿ.ಮಹಾಲಿಂಗು ಕಲ್ಕುಂದ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ವಿಶ್ವ ಮತ್ತು, ದೇಶ ವ್ಯಾಪ್ತಿ ಪ್ರತಿ ವಿಷಯದಲ್ಲೂ ತನ್ನ ವಿಶಾಲತೆಯನ್ನು ಕಟ್ಟಿಕೊಡುವ ದಿನಪತ್ರಿಕೆ ಎಂದರೆ ಅದು ನಮ್ಮ ಪ್ರಜಾವಾಣಿ ದಿನಪತ್ರಿಕೆ. ಸಮುದಾಯ ಮತ್ತು ಸರ್ಕಾರದ ಸಾಧಕ-ಬಾಧಕಗಳನ್ನು ತೆರೆದಿಡುವ ದಿಟ್ಟ ಪತ್ರಿಕೆಯಾಗಿ ಜನಮನದಲ್ಲಿ ಬೇರೂರಿರುವ ಪ್ರಜಾವಾಣಿಯನ್ನು ಬೆಳಗಿನ ಕಾಫಿ ಬಿಟ್ಟರೂ ಪ್ರಜಾವಾಣಿ ಓದುವುದನ್ನು ಬಿಡಲಾರೆ.

ಸಾಮಾಜಿಕ, ಸಾಹಿತ್ಯ, ವ್ಯೆಜ್ಞಾನಿಕ, ವೈಚಾರಿಕ, ರಾಜಕೀಯ, ದೇಶ, ವಿದೇಶ, ಗ್ರಾಮೀಣ, ಕ್ರೀಡೆ, ಕೃಷಿ, ವಿದ್ಯಾರ್ಥಿಗಳ
ಸುದ್ದಿಗಳನ್ನು ಮತ್ತು ಬಲಾಢ್ಯರಿಂದ, ಸಮಾಜ ಘಾತುಕರಿಂದ, ಆಳುವ ವರ್ಗಗಳಿಂದ ಆದ ತಪ್ಪುನೆಪ್ಪಗಳನ್ನು ನಿರ್ಭೀತಿಯಿಂದ ಜನರ ಮುಂದಿಡುವ ಜನಪರ ಧ್ವನಿ ಪ್ರಜಾವಾಣಿ. ನಾನು 8ನೇ ತರಗತಿ ಓದುವಾಗಲೇ ಪ್ರಜಾವಾಣಿ ಪತ್ರಿಕೆ ಓದುವುದೆಂದರೆ ಪಂಚಪ್ರಾಣ. ಕಲೆ, ಸಾಹಿತ್ಯ ರಾಜಕೀಯ ಸೇರಿ ಭಾನುವಾರ, ಸಪ್ತಾಹಿಕ ಪುರವಾಣಿ ಹೀಗೆ ಇಡೀ ವಾರ ಪ್ರಜಾವಾಣಿ ಓದುವುದೆಂದರೆ, ಒಂದು ಪುಸ್ತಕ ಓದಿದಂತೆ ನನಗೂ ಪ್ರಜಾವಾಣಿಗೂ ಇರುವ ಅಪ್ತತೆ.

–ಡಾ: ಕೆ.ಪಿ.ಮಹಾಲಿಂಗು ಕಲ್ಕುಂದ, ಸಾಹಿತಿ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು