ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಾಚಕರ ವಾಣಿ | ಅಕ್ರಮ ಪ್ರಶ್ನಿಸುವವರಿಗೆ ಬೇಕು ರಕ್ಷಣೆ

Last Updated 25 ಡಿಸೆಂಬರ್ 2022, 20:23 IST
ಅಕ್ಷರ ಗಾತ್ರ

ನರೇಗಾ ಅಕ್ರಮ ಪ್ರಶ್ನಿಸಿದ್ದಕ್ಕೆ ಕನಕಪುರ ತಾಲ್ಲೂಕು ಸಾತನೂರು ಹೋಬಳಿಯ ಹಲಸಿನಮರದ ದೊಡ್ಡಿ ಗ್ರಾಮದಲ್ಲಿ ಮೂರ್ತಿ ಎಂಬ ಯುವಕನ ಮೇಲೆ ಕಲ್ಲು ಎತ್ತಿ ಹಾಕಿ ಕೊಲೆ ಮಾಡಲಾಗಿದೆ ಎಂದು ವರದಿಯಾಗಿದೆ (ಪ್ರ.ವಾ., ಡಿ. 24). ಇಲ್ಲಿ ಯುವಕ ಮಾಡಿದ ತಪ್ಪಾದರೂ ಏನು? ಅಕ್ರಮವನ್ನು ಪ್ರಶ್ನಿಸುವುದು ತಪ್ಪೇ? ಹಾಗಿದ್ದರೆ ಅಕ್ರಮವನ್ನು ನೋಡಿಕೊಂಡು ಆತ ಸುಮ್ಮನೆ ಕುಳಿತಿರಬೇಕಿತ್ತೇ? ಅನ್ಯಾಯದ ವಿರುದ್ಧ ಪ್ರಶ್ನೆ ಮಾಡುವುದು ಎಲ್ಲಾ ನಾಗರಿಕರ ಹಕ್ಕು. ಆದರೆ ಹೀಗೆ ಪ್ರಶ್ನಿಸಿದ ಯುವಕ ಹೆಣವಾದದ್ದು ತೀವ್ರ ಖಂಡನೀಯ.

ಕೃತ್ಯಕ್ಕೆ ಕಾರಣರಾದವರ ವಿರುದ್ಧ ಸರ್ಕಾರ ಕಠಿಣ ಕ್ರಮ ಕೈಗೊಳ್ಳಬೇಕು. ಮುಂದೆ ಇಂತಹ ಅಕ್ರಮಗಳು ನಡೆಯದಂತೆ ಎಚ್ಚರಿಕೆ ವಹಿಸಬೇಕು. ಅಕ್ರಮದ ವಿರುದ್ಧ ಧ್ವನಿ ಎತ್ತುವವರ ರಕ್ಷಣೆಗೆ ಮುಂದಾಗಬೇಕು. ಯುವಕನ ಕುಟುಂಬಕ್ಕೆ ರಕ್ಷಣೆ ಒದಗಿಸುವ ಕೆಲಸವನ್ನು ಸರ್ಕಾರ ಮಾಡಬೇಕು.

ತಿಮ್ಮೇಶ್ ಎಚ್. ಗೌರೀಪುರ,ಜಗಳೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT