ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಾಚಕರ ವಾಣಿ: ರಾಜಕೀಯ ತಂತ್ರಗಾರಿಕೆ ಏನೇ ಇದ್ದರೂ...

Last Updated 20 ಅಕ್ಟೋಬರ್ 2022, 23:15 IST
ಅಕ್ಷರ ಗಾತ್ರ

ಅಖಿಲ ಭಾರತ ಕಾಂಗ್ರೆಸ್ ಸಮಿತಿಯ (ಎಐಸಿಸಿ) ಅಧ್ಯಕ್ಷರಾಗಿ ಮಲ್ಲಿಕಾರ್ಜುನ ಖರ್ಗೆ ನಿರೀಕ್ಷಿಸಿದಂತೆಯೇ ಆಯ್ಕೆಯಾಗಿದ್ದಾರೆ. ಪಕ್ಷನಿಷ್ಠೆಗೆ ಹೆಸರಾದವರು. ರಾಜ್ಯದಲ್ಲಿ ಮತ್ತು ಕೇಂದ್ರದಲ್ಲಿ ಸಚಿವರಾಗಿ ಬೇರೆ ಬೇರೆ ಖಾತೆಗಳನ್ನು ದಕ್ಷತೆಯಿಂದ ನಿಭಾಯಿಸಿದ್ದಾರೆ. ನೆಹರೂ–ಗಾಂಧಿ ಕುಟುಂಬಕ್ಕೆ ನಿಷ್ಠರಾಗಿದ್ದರೂ ಮುಖ್ಯಮಂತ್ರಿ ಸ್ಥಾನ ಮಾತ್ರ ಹಲವು ಸಲ ಕೈಬಿಟ್ಟು ಹೋದದ್ದು ವಿಪರ್ಯಾಸ.

ಪರಿಶಿಷ್ಟ ಜಾತಿಯ ವೋಟುಗಳ ಮೇಲೆ ಕಣ್ಣಿಟ್ಟು ಖರ್ಗೆ ಅವರನ್ನು ಪಕ್ಷದ ಅಧ್ಯಕ್ಷ ಗಾದಿಗೆ ತರಲಾಗಿದೆ ಎಂಬ ಟೀಕೆಗಳಿವೆ. ರಾಜಕೀಯ ತಂತ್ರಗಾರಿಕೆ ಏನೇ ಇರಬಹುದು. ಖರ್ಗೆ ಅವರ ಆಯ್ಕೆಯು ಪಕ್ಷದ ಬಲವರ್ಧನೆಗೆ ನೆರವಾಗಲಿ. ದೇಶಕ್ಕೆ ಸದೃಢ ವಿರೋಧ ಪಕ್ಷದ ಅಗತ್ಯ ಇದೆ.

ಡಿ. ಪ್ರಸನ್ನಕುಮಾರ್,ಬೆಂಗಳೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT