ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಾಚಕರವಾಣಿ: ಸಹಾಯವಾಣಿಗೆ ಬೇಕಾಗಿದೆ ಸಹಾಯ

Last Updated 18 ಅಕ್ಟೋಬರ್ 2022, 23:00 IST
ಅಕ್ಷರ ಗಾತ್ರ

ಅಗತ್ಯ ಸೇವೆ ಹಾಗೂ ತುರ್ತು ಕರೆಗಳಿಗಾಗಿ ರಾಜ್ಯ ಸರ್ಕಾರವು ವಿವಿಧ ಇಲಾಖೆಗಳಿಗೆ ಸಹಾಯವಾಣಿ ವ್ಯವಸ್ಥೆ ರೂಪಿಸಿದ ನಡೆ ಶ್ಲಾಘನೀಯ. ಆದರೆ ಕೆಲ ಇಲಾಖೆಗಳ ಸಹಾಯವಾಣಿಗಳಿಗೆ ಸಾರ್ವಜನಿಕರು ತಮ್ಮ ಸಂಕಷ್ಟ, ಅಭಿಪ್ರಾಯ, ಅಹವಾಲುಗಳನ್ನು ತಿಳಿಸಲು ಕರೆ ಮಾಡಿದಾಗ, ಅವು ನಿಷ್ಕ್ರಿಯಗೊಂಡಿರುವುದು ಕಂಡುಬರುತ್ತಿದೆ. ‘ನೀವು ಪ್ರಯತ್ನಿಸುತ್ತಿರುವ ಲೈನ್ ಅಸ್ತಿತ್ವದಲ್ಲಿಲ್ಲ’, ‘ವ್ಯಾಪ್ತಿ ಪ್ರದೇಶದ ಹೊರಗಿದ್ದಾರೆ’, ‘ನೀವು ಡಯಲ್‌ ಮಾಡಿದ ಸಂಖ್ಯೆಯನ್ನು ದಯವಿಟ್ಟು ಪರಿಶೀಲಿಸಿ’... ಹೀಗೆ ಸಲ್ಲದ ಧ್ವನಿಮುದ್ರಿತ ಹೇಳಿಕೆಗಳು ಕೇಳಿಬರುತ್ತವೆ. ಕೆಲವೊಮ್ಮೆ ರಿಂಗ್ ಆದರೂ ಪೋನ್ ಎತ್ತುವಲ್ಲಿ ಉದಾಸೀನ ಎದ್ದು ಕಾಣುತ್ತಿದೆ. ಇದರಿಂದ ಜನರು ರೋಸಿ
ಹೋಗುವಂತಾಗಿದೆ.

ಈ ಸಹಾಯವಾಣಿಗಳು ಅಬ್ಬರದ ಪ್ರಚಾರಕ್ಕಷ್ಟೇ ಸೀಮೀತವಾಗದೆ ನಾಗರಿಕರ ಕಷ್ಟಕ್ಕೆ, ಸಂದಿಗ್ಧತೆಗೆ ಸ್ಪಂದಿಸಲು ಅನುವಾಗುವಂತೆ ಪ್ರತೀ ಇಲಾಖೆಯ ಮುಖ್ಯಸ್ಥರು ನೋಡಿಕೊಳ್ಳಬೇಕು.

ಮಹಾಂತೇಶ ರಾಜಗೋಳಿ,ಬೈಲಹೊಂಗಲ, ಬೆಳಗಾವಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT