ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಾಚಕರವಾಣಿ: ಸಾಹಿತ್ಯ ಸಮ್ಮೇಳನವೂ ಭೋಜನ ವ್ಯವಸ್ಥೆಯೂ

Last Updated 7 ಆಗಸ್ಟ್ 2022, 22:15 IST
ಅಕ್ಷರ ಗಾತ್ರ

ನವೆಂಬರ್ 11ರಿಂದ 13ರವರೆಗೆ ಹಾವೇರಿಯಲ್ಲಿ 86ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ನೆರವೇರಲಿ
ರುವುದು ಸಂತೋಷ. ಮೂರು ದಿನ ನಡೆಯುವ ಸಮ್ಮೇಳನದಲ್ಲಿ ಭಾಗವಹಿಸುವವರಿಗೆ ಉಪಾಹಾರ, ಬೋಜನ ವಿತರಿಸುವುದೇ ಆಯೋಜಕರ ಪಾಲಿಗೆ ದೊಡ್ಡ ಸವಾಲು. ಭೋಜನ ವ್ಯವಸ್ಥೆಯ ಸುತ್ತಲೇ ದೂರು ದುಮ್ಮಾನಗಳು ಗಿರಕಿ ಹೊಡೆಯುವುದನ್ನು ಹಿಂದೆ ಕಂಡಿದ್ದೇವೆ. ಗೌಜು, ಗದ್ದಲವೂ ಆಗಿವೆ. ಊಟದ ಏರ್ಪಾಡು, ಸಮ್ಮೇಳನದ ಯಶಸ್ಸಿನ ಮಾನಕ ಎನ್ನುವಂತಾಗಿದೆ. ಸಂವಾದ, ಗೋಷ್ಠಿ, ನಿರ್ಣಯಗಳಿಗಿಂತಲೂ ಭೋಜನಕ್ಕೆ ಏನೇನು ತಯಾರಿ? ಹೇಗೆ ಪರಿಚಾರಿಕೆ? ಸೇವಿಸಿದವರೆಷ್ಟು?... ಈ ಕುರಿತ ವರದಿಗಳೇ ಮಾಧ್ಯಮಗಳಲ್ಲಿ ಹೆಚ್ಚು ವಿಜೃಂಭಿಸುತ್ತವೆ.

ಆಯೋಜಕರು ಸಮ್ಮೇಳನ ನಡೆಯುವ ಸ್ಥಳದ ಸಮೀಪವೇ ವಿಶಾಲ ಆವರಣದಲ್ಲಿ ಆಹಾರ ಮಳಿಗೆಗಳನ್ನು ಸೂಕ್ತ ಷರತ್ತುಗಳೊಂದಿಗೆ ತೆರೆಯಲು ವ್ಯಾಪಾರಿಗಳಿಗೆ ಅವಕಾಶ ನೀಡುವುದೇ ಉತ್ತಮ. ಇದರಿಂದ ಮೂರು ಪ್ರಯೋಜನಗಳು. ಆಯೋಜಕರು ಸಮ್ಮೇಳನದ ವೇದಿಕೆ ಕಾರ್ಯಕ್ರಮಗಳತ್ತ ಇನ್ನಷ್ಟು ಗಮನ ಹರಿಸಬಹುದು. ಪ್ರತಿನಿಧಿಗಳಿಗೆ ಆಯ್ಕೆಯ ಆಹಾರ ದೊರೆಯುವುದು. ಕೋವಿಡ್ ಹೆಮ್ಮಾರಿಯಿಂದ ಈಗಷ್ಟೇ ಸುಧಾರಿಸಿಕೊಳ್ಳುತ್ತಿರುವ ಹೋಟೆಲ್ ಉದ್ಯಮ ತುಸುವಾದರೂ ಬೀಗೀತು.

ಟಿ. ಶ್ರೀಹರ್ಷ,ಬೆಂಗಳೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT