ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಾಚಕರ ವಾಣಿ: ಗಮನಸೆಳೆದ ಪ್ರತಿಭಟನೆ

Last Updated 16 ಅಕ್ಟೋಬರ್ 2022, 22:15 IST
ಅಕ್ಷರ ಗಾತ್ರ

ಹಿಂದಿ ಹೇರಿಕೆಯ ವಿರುದ್ಧಪಶ್ಚಿಮ ಬಂಗಾಳದಲ್ಲಿ ನಡೆದ ಪ್ರತಿಭಟನೆಯಲ್ಲಿ ಕುವೆಂಪು ಅವರ ಭಾವಚಿತ್ರ ಹಾಗೂ ಅವರ ಘೋಷಣೆಗಳನ್ನು ಬಳಸಿಕೊಂಡಿರುವ ಸುದ್ದಿ (ಪ್ರ.ವಾ., ಅ. 15) ಗಮನ ಸೆಳೆಯಿತು. ಇದು ಕನ್ನಡಿಗರಿಗೆ ಹೆಮ್ಮೆಯ ವಿಷಯ. ಕೇಂದ್ರ ಸರ್ಕಾರದ ಹಿಂದಿ ಹೇರಿಕೆಯ ಹುನ್ನಾರಗಳ ವಿರುದ್ಧ ಸಿಡಿದೇಳಲುಕನ್ನಡಿಗರಾದ ನಮಗೂ ಪಕ್ಷಾತೀತವಾಗಿ ಪ್ರೇರಣೆ ನೀಡುವ ಸುದ್ದಿ.

ತಮ್ಮ ರಾಜ್ಯದ ಆಡಳಿತ ಭಾಷೆಯ ಪರವಾಗಿ ನಿಲ್ಲುವುದು ಜನಪ್ರತಿನಿಧಿಗಳ ಕರ್ತವ್ಯ. ಇದರಲ್ಲಿ ರಾಜಕೀಯ ನುಸುಳಬಾರದು. ಆದರೆ, ಕೆಲವೊಂದು ಸಂದರ್ಭಗಳಲ್ಲಿ ಪಕ್ಷ ರಾಜಕಾರಣವು ಮುಖಂಡರ ಬಾಯಿ ಬಂದ್‌ ಮಾಡಿಸುತ್ತದೆ. ಭಾಷೆಯ ವಿಚಾರದಲ್ಲಿ ಯಾವುದೇ ಕಾರಣಕ್ಕೆ ರಾಜಿ ಮಾಡಿಕೊಳ್ಳಬಾರದು. ನಿಷ್ಠುರ ನಿಲುವು ತಳೆಯುವುದು ಅಗತ್ಯ. ಅಂತಹ ದೃಢ ನಿಲುವು ತಳೆಯುವಂತೆ ಜನರು ಒತ್ತಡ ಹೇರಬೇಕು. ಪ್ರಾದೇಶಿಕ ಭಾಷೆಗಳ ಹಿತಕ್ಕೆ ಧಕ್ಕೆ ಆಗುವ ಎಂತಹುದೇ ನಡೆಯನ್ನು ಗಟ್ಟಿಯಾಗಿ ವಿರೋಧಿಸಬೇಕು.

ತಾ.ಸಿ.ತಿಮ್ಮಯ್ಯ,ಬೆಂಗಳೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT