ಸಂಚಾರ ನಿಯಮ: ಶಿಸ್ತಿನ ಶಿಕ್ಷಣ ಅತ್ಯಗತ್ಯ

ಗ್ರಾಮೀಣ ಮತ್ತು ನಗರ ಪ್ರದೇಶಗಳಲ್ಲಿ ಇತ್ತೀಚೆಗೆ ರಸ್ತೆ ಅಪಘಾತಗಳ ಸಂಖ್ಯೆ ಹೆಚ್ಚು
ತ್ತಿರುವುದು ಕಳವಳಕಾರಿ. ಸಂಚಾರ ನಿಯಮಗಳ ಬಗ್ಗೆ ಅರಿವಿದ್ದರೂ ಕೆಲವರು
ಹೆಲ್ಮೆಟ್ ಧರಿಸದೆ ಅತಿವೇಗವಾಗಿ ದ್ವಿಚಕ್ರ ವಾಹನ ಚಲಾಯಿಸಿ ಪ್ರಾಣಾಪಾಯಕ್ಕೆ
ಸಿಲುಕುತ್ತಿದ್ದಾರೆ. ರಸ್ತೆ ಸುರಕ್ಷತೆಯು ದಂಡ ಪಾವತಿಸುವುದಕ್ಕೆ ಸೀಮಿತವಾಗ ಬಾರದು. ಪ್ರತಿಯೊಬ್ಬ ಸವಾರನೂ ತನ್ನ ಕುಟುಂಬದ ಜವಾಬ್ದಾರಿಯನ್ನು ನೆನಪಿನಲ್ಲಿ ಇಟ್ಟುಕೊಂಡು ಸಂಚಾರ ನಿಯಮಗಳನ್ನು ಪಾಲಿಸಬೇಕು. ಶಾಲಾ ಹಂತದಲ್ಲೇ ಮಕ್ಕಳಿಗೆ ಈ ಬಗ್ಗೆ ಪ್ರಾಯೋಗಿಕ ಶಿಕ್ಷಣ ನೀಡುವುದು ಅತ್ಯಗತ್ಯ.

⇒ಮೊಹಮ್ಮದ್ ಅಜರುದ್ದೀನ್, ಅಕ್ಕಿಹೆಬ್ಬಾಳು

ಸಿಲಿಂಡರ್ ಮರುಭರ್ತಿ: ವಿಳಂಬ ಲೋಪ

ಎಲ್ಪಿಜಿ ಸಿಲಿಂಡರ್ ಮರುಪೂರಣಕ್ಕಾಗಿ ಮಾರ್ಚ್ 7ರಂದು ಕೋರಿಕೆ ಸಲ್ಲಿಸಿದ್ದೆ. ಅದಕ್ಕೆ ಮಾರ್ಚ್ 12ರಂದು ಬಿಲ್ ಮಾಡಲಾಗಿದ್ದು, 29ರಂದು ಸಿಲಿಂಡರ್ ವಿತರಿಸಲಾಗಿದೆ. ಬುಕ್ಕಿಂಗ್ ಮಾಡಿದ 22 ದಿನಗಳ ಬಳಿಕ ಸಿಲಿಂಡರ್ ಸಿಕ್ಕಿದೆ. ಮತ್ತೆ ಬುಕ್ಕಿಂಗ್ಗೆ ಪ್ರಯತ್ನಿಸಿದಾಗ ಮೇ 13ರ ನಂತರವಷ್ಟೆ ಬುಕ್ಕಿಂಗ್ ಮಾಡಲು ನಿಮಗೆ ಅವಕಾಶವಿದೆಯೆಂಬ ಸಂದೇಶ ಬರುತ್ತಿದೆ. ಅಂದರೆ, ಹಿಂದಿನ ಬಿಲ್ಲಿಂಗ್ ದಿನಾಂಕದಿಂದ ಸುಮಾರು ಎರಡು ತಿಂಗಳ ಬಳಿಕ ಬುಕ್ಕಿಂಗ್ಗೆ ಅವಕಾಶ ನೀಡ ಲಾಗುತ್ತಿದೆ. ಮರುಪೂರಣ ಬುಕ್ಕಿಂಗ್ಗೆ ನಗರಗಳಲ್ಲಿ 25 ದಿನ ಮತ್ತು ಗ್ರಾಮೀಣ ಪ್ರದೇಶದಲ್ಲಿ 45 ದಿನ ನಿಗದಿಪಡಿಸಲಾಗಿದೆ ಎಂದು ಇಂಡಿಯನ್ ಆಯಿಲ್ ಕಾರ್ಪೊರೇಷನ್ ಸ್ಪಷ್ಟಪಡಿಸಿತ್ತು. ಆದರೆ, ಬುಕ್ಕಿಂಗ್, ಬಿಲ್ಲಿಂಗ್, ಸಿಲಿಂಡರ್ ವಿತರಣಾ ದಿನಾಂಕದ ನಡುವೆ ಅತಾರ್ಕಿಕ ವ್ಯತ್ಯಾಸವಿದೆ. ಅಧಿಕಾರಿಗಳು ಈ ಲೋಪ ಸರಿಪಡಿಸಬೇಕಿದೆ.

⇒ಜಿ. ನಾಗೇಂದ್ರ ಕಾವೂರು, ಸಂಡೂರು

ಕಾನ್ಸ್ಟೆಬಲ್ಗಳ ವರ್ಗ: ಸರ್ಕಾರದ ಮೌನ

ಸಾಮಾನ್ಯ ಪ್ರಕರಣದಡಿ ಅಂತರ ಜಿಲ್ಲಾ ವರ್ಗಾವಣೆ ಕೋರಿದ್ದ ಸಿವಿಲ್ ಪೊಲೀಸ್ ಕಾನ್ಸ್ಟೆಬಲ್ಗಳಿಗೆ ಅವಕಾಶ ಸಿಗುತ್ತಿಲ್ಲ (ಪ್ರ.ವಾ., ಮಾರ್ಚ್ 28). ಬೆಂಗಳೂರಿನಲ್ಲಿ ಉತ್ತರ ಕರ್ನಾಟಕ ಭಾಗದ ಸಾಕಷ್ಟು ಸಿಬ್ಬಂದಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಎರಡು ಅಥವಾ ಮೂರು ಸಾರಿ ಬಡ್ತಿಗೆ ಅವಕಾಶ ಬಂದರೂ ಅದನ್ನು ತ್ಯಾಗ ಮಾಡಿ ವರ್ಗಾವಣೆಗಾಗಿ ದಶಕದಿಂದಲೂ ಕಾಯುತ್ತಿದ್ದಾರೆ. ವೈದ್ಯಕೀಯ ಸಮಸ್ಯೆಗಳು ಕೆಲವರ ಕುಟುಂಬಗಳನ್ನು ಮೆತ್ತಗಾಗಿಸಿವೆ. ಆದರೆ ಸಿಬ್ಬಂದಿ ಕೊರತೆ, ಬಂದೋ ಬಸ್ತ್ ಕಾರಣವನ್ನು ಮುಂದಿಟ್ಟುಕೊಂಡು ಹಿರಿಯ ಅಧಿಕಾರಿಗಳು ವರ್ಗಾವಣೆಗೆ ಅಡ್ಡಗೋಡೆಯಾಗಿದ್ದಾರೆ. ಸರ್ಕಾರವು ಈ ಸಮಸ್ಯೆಗೆ ಶಾಶ್ವತ ಪರಿಹಾರ ರೂಪಿಸಲಿ.

⇒ಮಲ್ಲಿಕಾರ್ಜುನ್ ಟಿ., ಜಮಖಂಡಿ

ತೃತೀಯ ಭಾಷೆ ಕಲಿಕೆಗೆ ಶಿಕ್ಷಕರು ಬೇಡವೆ?

ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ಹಿಂದಿ ಭಾಷೆಗೆ ಗ್ರೇಡ್ ನಿಗದಿಪಡಿಸಿರುವ ಬಗ್ಗೆ ಬಿಜೆಪಿ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಮತ್ತು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಅವರು ಟೀಕಿಸಿದ್ದಾರೆ. ರಾಜ್ಯದ ಶೇ 60ಕ್ಕೂ ಹೆಚ್ಚು ಶಾಲೆಗಳಲ್ಲಿ ಹಿಂದಿ ಶಿಕ್ಷಕರೇ ಇಲ್ಲ. ಕಾಗೇರಿ ಅವರು ಶಿಕ್ಷಣ ಸಚಿವರಾಗಿದ್ದಾಗ ಹಿಂದಿ ಶಿಕ್ಷಕರನ್ನು ನೇಮಕ ಮಾಡಲಿಲ್ಲ. ಬಹುತೇಕ ಗ್ರಾಮೀಣ ವಿದ್ಯಾರ್ಥಿಗಳಿಗೆ ಕನ್ನಡವೇ ಕಷ್ಟ ಆಗಿರುವಾಗ ಹಿಂದಿ ಅಕ್ಷರಾಭ್ಯಾಸ ಮಾಡಿಸುವವರು ಯಾರು?

⇒ಎಂ.ಜಿ. ರಂಗಸ್ವಾಮಿ, ಹಿರಿಯೂರು

ನೇಮಕಾತಿ ನಿರ್ಲಕ್ಷ್ಯ: ಯುವಜನ ಆತಂಕ

ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಹೋರಾಟಕ್ಕೆ ಸಕಾರಾತ್ಮಕ ಸ್ಪಂದನ ಅತ್ಯಗತ್ಯ. ಮೀಸ ಲಾತಿಯು ಸಮಸಮಾಜದ ನಿರ್ಮಾಣಕ್ಕೆ ಶಕ್ತಿ ತುಂಬುವ ಆಶಯ ಹೊಂದಿರುವ ಅಂಶ. ಇದರ ಜಾರಿಯಲ್ಲಿ ವಿಳಂಬ ಧೋರಣೆ ಸರಿಯಲ್ಲ. ಒಳಮೀಸಲಾತಿಯ ಬಿಕ್ಕಟ್ಟಿನಿಂದಾಗಿ ಯುವ ಸ್ಪರ್ಧಾಕಾಂಕ್ಷಿಗಳು ಸಂಕಷ್ಟಕ್ಕೆ ಸಿಲುಕುತ್ತಿರುವುದು ಬೇಸರದ ಸಂಗತಿ. ಯಾವುದೇ ನೇಮಕಾತಿ ನಡೆಯದೆ ಯುವ ಮನಸ್ಸುಗಳ ಕನಸು ಕಮರಿಹೋಗುತ್ತಿದೆ. ಕಾಲಕ್ಕೆ ಸರಿಯಾಗಿ ಚುನಾವಣೆ ನಡೆದು ಪ್ರಜಾಪ್ರಭುತ್ವವನ್ನು ಭದ್ರಗೊಳಿಸಿಕೊಳ್ಳುವ ಆಡಳಿತ ವ್ಯವಸ್ಥೆಯು, ನೇಮಕಾತಿ ವಿಷಯದಲ್ಲಿ ನಿರ್ಲಕ್ಷ್ಯ ಧೋರಣೆ ತಳೆದು ರಾಜಪ್ರಭುತ್ವದಂತೆ ಆಗದಿರಲಿ.

⇒ಅಶೋಕ ಗೌಡ, ಶಿರಸಿ

ಶಾಸಕರ ಬೀದಿಮಾತು; ಜನಕ್ಕೆ ವಾಕರಿಕೆ

ರಾಜ್ಯದಲ್ಲಿ ವಿಧಾನಸಭೆ ಉಪಚುನಾವಣೆಯ ಕಾವು ಜೋರಾಗಿದೆ. ಇದ ರೊಂದಿಗೆ ಜುಗಲಬಂದಿ ನಡೆಸುವಂತೆ ಕೆಲವು ಶಾಸಕರು ಕೀಳುಮಟ್ಟದ ಭಾಷೆ ಬಳಸುವುದು ಅತಿಯಾಗಿದೆ. ಅರಸೀಕೆರೆ ಶಾಸಕ ಶಿವಲಿಂಗೇಗೌಡ ಅವರು ಸದನದಲ್ಲಿ ಅಸಂವಿಧಾನಿಕ ಶಬ್ದ ಬಳಸಿದ್ದುಂಟು. ಚಿಕ್ಕಬಳ್ಳಾಪುರದ ಶಾಸಕ ಪ್ರದೀಪ್ ಈಶ್ವರ್ ಅವರು ಉಪಚುನಾವಣೆಯ ಪ್ರಚಾರದ ವೇಳೆ ಕೆಟ್ಟ

ಶಬ್ದ ಬಳಸಿರುವುದು ವರದಿಯಾಗಿದೆ. ಶಾಸಕ ಬಸನಗೌಡ ಪಾಟೀಲ ಯತ್ನಾಳ

ಅವರು ಸಮಯ ಸಿಕ್ಕಿದಾಗಲೆಲ್ಲ ಅಸಂಬದ್ಧ ಹೇಳಿಕೆ ನೀಡುತ್ತಾರೆ. ಶಾಸಕರ

ಈ ವರ್ತನೆಯಿಂದ ಪ್ರಜ್ಞಾವಂತ ಮತದಾರರು ಮುಜುಗರ ಅನುಭವಿಸು ವಂತಾಗಿದೆ. ಜನಪ್ರತಿನಿಧಿಗಳು ಬಳಸುವ ಭಾಷೆಯಲ್ಲಿ ಸಭ್ಯತೆ ಇರಬೇಕು. ಇಲ್ಲವಾದರೆ ಅವರ ಮಾತುಗಳು ಕ್ಷೇತ್ರದ ಮತದಾರರ ಮೇಲೂ ಪರಿಣಾಮ ಬೀರುತ್ತವೆ. ಶಾಸಕರ ಮಾತು ಮತ್ತು ನಡವಳಿಕೆಯಿಂದ ಉತ್ತೇಜನಗೊಂಡು ಕಾರ್ಯಕರ್ತರು ಮತ್ತು ಅಭಿಮಾನಿಗಳು ಸಂಘರ್ಷಕ್ಕಿಳಿಯುತ್ತಾರೆ.

ಡಿ.ವಿ. ಸಂಜಯ್, ಚಿಕ್ಕಮಗಳೂರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.