ಉತ್ತರ ಕರ್ನಾಟಕಕ್ಕೆ ಕ್ರೀಡಾಂಗಣ ಬೇಡವೆ?

ಬೆಂಗಳೂರಿನಲ್ಲಿ ಈಗಾಗಲೇ ಚಿನ್ನಸ್ವಾಮಿ ಕ್ರಿಕೆಟ್ ಕ್ರೀಡಾಂಗಣ ಇದೆ. ಈಗ ಮತ್ತೊಂದು ಕ್ರೀಡಾಂಗಣ ನಿರ್ಮಾಣಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮೇ 23ರಂದು ಶಂಕುಸ್ಥಾಪನೆ ನೆರವೇರಿಸಲಿದ್ದಾರೆ. ಆದರೆ, ಉತ್ತರ ಕರ್ನಾಟಕದಲ್ಲಿ ಒಂದೇ ಒಂದು ಅಂತರರಾಷ್ಟ್ರೀಯ ಮಟ್ಟದ ಕ್ರೀಡಾಂಗಣ ಇಲ್ಲ. ಇದರಿಂದಾಗಿ ಇಲ್ಲಿನ ಕ್ರೀಡಾ ಪ್ರತಿಭೆಗಳು ಬೆಂಗಳೂರು, ಪುಣೆ, ಹೈದರಾಬಾದ್ಗೆ ತೆರಳಿ ತರಬೇತಿ ಪಡೆಯಬೇಕು. ಕ್ರೀಡಾಂಗಣ ನಿರ್ಮಾಣದಿಂದ ಒಂದಿಷ್ಟು ಉದ್ಯೋಗಗಳು ಸೃಷ್ಟಿ
ಆಗುತ್ತವೆ. ಈ ಬಗ್ಗೆ ಉತ್ತರ ಕರ್ನಾಟಕದ ಶಾಸಕರು, ಸಚಿವರು, ಸಂಸದರು ಚಕಾರ
ಎತ್ತಿಲ್ಲ. ಮುಖ್ಯಮಂತ್ರಿಯವರು ಹೇಳಿದ್ದಕ್ಕೆ ತಲೆ ಅಲ್ಲಾಡಿಸುತ್ತ ಹೊಣೆಗೇಡಿತನ ಪ್ರದರ್ಶಿಸುತ್ತಿದ್ದಾರೆ. ವಿಶ್ವದರ್ಜೆಯ ಸೌಲಭ್ಯಗಳನ್ನು ಬೆಂಗಳೂರು, ಮೈಸೂರಿಗೆ ನೀಡುವುದಾದರೆ ಉಳಿದ ಜಿಲ್ಲೆಗಳ ಅಭಿವೃದ್ಧಿ ಯಾವಾಗ? ಉತ್ತರ ಕರ್ನಾಟಕದ ಜನರು ಅಂತರರಾಷ್ಟ್ರೀಯ ಕ್ರಿಕೆಟ್ ಪಂದ್ಯ ವೀಕ್ಷಿಸಲು ಬೆಂಗಳೂರಿಗೆ ಬರಬೇಕೆ? ನಮ್ಮಲ್ಲಿಯೇ ನಾವು ಪಂದ್ಯಗಳನ್ನು ವೀಕ್ಷಿಸುವುದು ಬೇಡವೇ?

⇒ಸುರೇಶ ಎಸ್.ಪಿ., ಖವಟಕೊಪ್ಪ

ಪೆಟ್ರೋಲ್ ನಿಯಮ: ಸವಾರರಿಗೆ ಸಂಕಟ

ರಾಜ್ಯ ಸರ್ಕಾರವು ಬಂಕ್ಗಳಲ್ಲಿ ಬಾಟಲಿ ಅಥವಾ ಕ್ಯಾನ್ಗಳಲ್ಲಿ ಪೆಟ್ರೋಲ್ ನೀಡು
ವುದನ್ನು ನಿಷೇಧಿಸಿದೆ. ದುಷ್ಕೃತ್ಯ ತಡೆಯುವ ನಿಟ್ಟಿನಲ್ಲಿ ಈ ನಿಯಮವನ್ನು ಜಾರಿ
ಗೊಳಿಸಿರುವುದು ಸರಿ. ಆದರೆ, ತುರ್ತು ಸಂದರ್ಭದಲ್ಲಿ ಸಾಮಾನ್ಯ ಸವಾರರ ಪಾಲಿಗೆ ಈ ನಿಯಮ ಶಾಪವಾಗಿದೆ. ರಸ್ತೆಯ ಮಧ್ಯೆ ಹಠಾತ್ತನೆ ಇಂಧನ ಖಾಲಿಯಾದಾಗ ಪೆಟ್ರೋಲ್ ಬಂಕ್ಗೆ ನಡೆದುಕೊಂಡು ಹೋಗಿ ಅಥವಾ ಬೇರೆಯವರ ವಾಹನದಲ್ಲಿ ತೆರಳಿ ಸಣ್ಣ ಬಾಟಲಿಯಲ್ಲಿ ಪೆಟ್ರೋಲ್ ತರುವುದು ಸಹಜ. ಹೊಸ ನಿಯಮದಿಂದಾಗಿ ಬಂಕ್ ಸಿಬ್ಬಂದಿಯು ಪೆಟ್ರೋಲ್ ನೀಡಲು ನಿರಾಕರಿಸುತ್ತಿದ್ದಾರೆ. ಬೇಸಿಗೆಯ ಕಡು ಬಿಸಿಲಿನಲ್ಲಿ ಸವಾರರು ಕಿಲೋಮೀಟರ್ಗಟ್ಟಲೆ ವಾಹನವನ್ನು ತಳ್ಳಿಕೊಂಡು ಹೋಗಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ತುರ್ತು ಸಂದರ್ಭದಲ್ಲಿ ಸಿಲುಕಿದ ಸವಾರರಿಗೆ ಅವರ ಗುರುತಿನಚೀಟಿ ಪಡೆದು ಪೆಟ್ರೋಲ್ ನೀಡಬೇಕಿದೆ.

⇒ಪ್ರಶಾಂತ ಕೋಳಿ, ಧಾರವಾಡ
ಟೀಕೆಯ ಗುಂಗಿನಲ್ಲಿ ಅಧಿಕಾರ ವಂಚಿತರು

ತಮಿಳುನಾಡಿನ ಮುಖ್ಯಮಂತ್ರಿಯಾಗಿ ಜೋಸೆಫ್ ವಿಜಯ್ ಅವರು ಅಧಿಕಾರ ಸ್ವೀಕರಿಸಿದ್ದಾರೆ. ಅವರಿಗೆ ಅನುಭವ ಕಡಿಮೆ ಎಂದು ಅಧಿಕಾರ ಸಿಗದವರು ಅಣಕ
ವಾಡುತ್ತಿದ್ದಾರೆ. ರಾಜೀವ್ ಗಾಂಧಿಯವರು ಪ್ರಧಾನಿ ಪಟ್ಟಕ್ಕೇರಿದಾಗ ಅವರಿಗೆ ರಾಜಕೀಯದ ಕನಿಷ್ಠ ಅನುಭವವೂ ಇರಲಿಲ್ಲ; ಅವರ ಜನಪರ ಕಾಳಜಿಯ ಆಡಳಿತವು ಜನರಿಗೆ ಇಷ್ಟವಾಯಿತಲ್ಲವೆ? ಹಿರಿಯ, ಅನುಭವಿ ರಾಜಕಾರಣಿಗಳು ಮಾಡುತ್ತಿರುವ ಜನಪರ ಸೇವೆಯ ಘನಕಾರ್ಯವಾದರೂ ಏನು? ಅವರೆಲ್ಲ ವಂಶಪಾರಂಪರ್ಯ ಆಳ್ವಿಕೆ, ಅಕ್ರಮ ಹಣ ಗಳಿಕೆ, ದುರಾಡಳಿತದಲ್ಲಿ ಮುಳುಗಿದ್ದಾ
ರಷ್ಟೆ. ಹೊಸದಾಗಿ ಅಧಿಕಾರಕ್ಕೇರುವವರಿಗೆ ಆಡಳಿತದ ಅನುಭವ ತಾನಾಗಿಯೇ ಬರುತ್ತದೆ. ಅನಗತ್ಯ ಟೀಕೆ ಸಲ್ಲದು. ದೇಶದ ಸುರಕ್ಷತೆ ಹಾಗೂ ಪಾರದರ್ಶಕ ಆಡಳಿತ ನೀಡುವುದಷ್ಟೇ ಅಧಿಕಾರಸ್ಥರ ಗುರಿಯಾಗಬೇಕು.

⇒ಎಸ್.ಎನ್. ರಮೇಶ್, ಸಾತನೂರು

‘ಉಡುಗೊರೆ’ ಎನ್ನುವ ಹಂಗಿನ ಸಂಕೋಲೆ

ನನಗೆ ಪರಿಚಿತವಿರುವ ಸರ್ಕಾರಿ ನೌಕರರೊಬ್ಬರಿದ್ದಾರೆ. ಅವರಿಗೆ ಬರುವ ಸಂಬಳದ ಮಿತಿಯಲ್ಲಿ ಸ್ವಾಭಿಮಾನದ ಬದುಕು ನಡೆಸುತ್ತಿದ್ದಾರೆ. ಮಡದಿಯ ತವರಿನಿಂದ ಸೂಜಿಯಷ್ಟು ಸಹಾಯವನ್ನೂ ಅವರು ನಿರೀಕ್ಷಿಸಿದವರಲ್ಲ. ಹೀಗಿದ್ದರೂ ಅವರ ಮಡದಿಯ ಮನೆಯವರು ಆತ ಬೇಡವೆಂದು ತಿರಸ್ಕರಿಸಿದರೂ ಉಡುಗೊರೆಯ ನೆಪದಲ್ಲಿ ತಮ್ಮ ಪ್ರತಿಷ್ಠೆ ತೋರಿಸಲು ಮುಂದಾಗುತ್ತಾರೆ. ಬಲವಂತವಾಗಿ ಉಡುಗೊರೆ ನೀಡುವುದು ಸಹ ಅಪರಾಧವಲ್ಲವೆ? ವರದಕ್ಷಿಣೆ ರೂಪದಲ್ಲಿ ಉಡುಗೊರೆ ತೆಗೆದುಕೊಳ್ಳುವುದಷ್ಟೇ ಅಪರಾಧವಲ್ಲ; ಕೊಡುವುದು ಕೂಡ ಅಪರಾಧ ಎಂಬುವುದನ್ನು ನಾಗರಿಕ ಸಮಾಜ ಅರಿಯಬೇಕಿದೆ.

⇒ಸುಜ್ಜಲೂರು ವಿ.ಜಿ., ತಿ. ನರಸೀಪುರ

ಬಿಎಂಟಿಸಿ ದರ: ಪ್ರಯಾಣಿಕರಿಗೆ ಹೊರೆ

ಬೆಂಗಳೂರಿನಿಂದ ಚಿಂತಾಮಣಿಗೆ ಸುಮಾರು 70 ಕಿ.ಮೀ. ದೂರವಿದೆ. ಈ ಮಾರ್ಗ
ದಲ್ಲಿ ಸಂಚರಿಸುವ ಕೆಎಸ್ಆರ್ಟಿಸಿ ಬಸ್ಗಳಲ್ಲಿ ಜನಜಂಗುಳಿ ಇರುತ್ತದೆ. ಚಿಂತಾಮಣಿಗೆ ಸಂಚರಿಸುವ ಬಿಎಂಟಿಸಿ ಬಸ್ಗಳಲ್ಲಿ ಟಿನ್ ಫ್ಯಾಕ್ಟರಿಯಿಂದ ಕೈವಾರ
ಕ್ರಾಸ್ಗೆ ₹90 ಟಿಕೆಟ್ ದರವಿದೆ. ನಿಗಮದ ಬಸ್ಗಳಲ್ಲಿ ₹77 ದರವಿದೆ. ದಾವಣ
ಗೆರೆಯಿಂದ ಬೆಂಗಳೂರಿಗೆ ಸಂಚರಿಸುವ ಬಿಎಂಟಿಸಿ ಬಸ್ಗಳು ಮತ್ತು ನಿಗಮದ ಬಸ್ಗಳ ಟಿಕೆಟ್ ದರದಲ್ಲಿ ಯಾವುದೇ ವ್ಯತ್ಯಾಸವಿಲ್ಲ. ಚಿಂತಾಮಣಿ– ಟಿನ್ ಫ್ಯಾಕ್ಟರಿ ನಡುವೆ ಸಂಚರಿಸುವ ಬಿಎಂಟಿಸಿ ಬಸ್ಗಳ ದರದಲ್ಲಿ ಈ ಪರಿಯ ವ್ಯತ್ಯಾಸವೇಕೆ?

⇒ಆನಂದ ಎಂ., ಕೈವಾರ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.