ಗ್ಯಾರಂಟಿ: ಬಿಜೆಪಿ ‘ಯೂ-ಟರ್ನ್’ ಪ್ರಸಂಗ

ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರ ಗ್ಯಾರಂಟಿ ಯೋಜನೆ ಘೋಷಿಸಿದಾಗ ‘ರಾಜ್ಯ ದಿವಾಳಿಯಾಗುತ್ತದೆ’ ಎಂದು ಪ್ರಧಾನಿ ನರೇಂದ್ರ ಮೋದಿ ಟೀಕಿಸಿದ್ದರು. ಪಶ್ಚಿಮ ಬಂಗಾಳದಲ್ಲಿ ಅಧಿಕಾರಕ್ಕೇರಿರುವ ಬಿಜೆಪಿ, ಮಹಿಳೆಯರಿಗೆ ಮಾಸಿಕ ₹3 ಸಾವಿರ ಹಾಗೂ ಉಚಿತ ಬಸ್ ಪ್ರಯಾಣ ಸೌಲಭ್ಯವನ್ನು ಜೂನ್ 1ರಿಂದ ಜಾರಿಗೆ ತರುತ್ತಿದೆ. ಇದು ಕರ್ನಾಟಕದ ಗ್ಯಾರಂಟಿಗಳಿಗಿಂತಲೂ ದುಬಾರಿ. ಟೀಕಿಸಿದ್ದ ಪಕ್ಷವೇ ಈಗ ಗ್ಯಾರಂಟಿಗಳಿಗೆ ಜೋತು ಬಿದ್ದಿದೆ ಎಂದರೆ ಈ ಯೋಜನೆಗಳು ಜನರ ಪಾಲಿಗೆ ಎಷ್ಟು ಉಪಯುಕ್ತ ಎಂಬುದು ಸಾಬೀತಾಗಿದೆ. ಗ್ಯಾರಂಟಿ ಬರೀ ಮತಬೇಟೆಯಲ್ಲ; ಬಡಜನರ ಬದುಕಿಗೆ ನಿಜವಾದ ಆಧಾರ ಎನ್ನುವುದು ಕಮಲ ಪಾಳಯದ
‘ಯೂ–ಟರ್ನ್’ನಿಂದ ಸ್ಪಷ್ಟವಾಗಿದೆ.

⇒ರಮೇಶ್ ಪಾಟೀಲ್, ಡೋಣಮರಡಿ

ಮನೆಯಿಂದ ಕೆಲಸ: ಆಡಿಟ್ ನಡೆಯಲಿ

ದೆಹಲಿ ಮುಖ್ಯಮಂತ್ರಿ ರೇಖಾ ಗುಪ್ತ ಅವರು ಸರ್ಕಾರಿ ನೌಕರರಿಗೆ ವಾರದಲ್ಲಿ ಎರಡು ದಿನ ಮನೆಯಿಂದ ಕೆಲಸ ಮಾಡಬೇಕೆಂದು ಆದೇಶಿಸಿದ್ದಾರೆ. ಉತ್ತರ
ಪ್ರದೇಶದಲ್ಲಿಯೂ ಇಂತಹದ್ದೇ ಆದೇಶ ಹೊರಬಿದ್ದಿದೆ. ಇಂಧನ ಉಳಿಸುವ ಉದ್ದೇಶ ಇದರ ಹಿಂದಿದೆ. ಈ ನಿರ್ಧಾರವು ಒಂದರ್ಥದಲ್ಲಿ ಬೆಟ್ಟ ಅಗೆದು ಇಲಿ
ಹಿಡಿದಂತಿದೆ. ಏಕೆಂದರೆ, ಸರ್ಕಾರಿ ಇಲಾಖೆಗಳಲ್ಲಿ ಕೆಲವು ಹುದ್ದೆಗಳಲ್ಲಿ ಇರುವ
ವರು ಹಾಗೂ ಅಂತರ್ಜಾಲ, ಗಣಕಯಂತ್ರ ಬಳಸಿ ಕೆಲಸ ಮಾಡುವವರಿಗಷ್ಟೇ ಮನೆ
ಯಿಂದ ಕೆಲಸ ಮಾಡುವ ಅವಕಾಶ ಇರುತ್ತದೆ. ಉಳಿದ ನೌಕರರಿಗೆ ಇಂತಹ ಅವಕಾಶವಿರುವುದಿಲ್ಲ. ಐಟಿ ಕ್ಷೇತ್ರಕ್ಕಷ್ಟೇ ಮನೆಯಿಂದ ಕೆಲಸ ನಿಯಮ ಹೆಚ್ಚು
ಅನ್ವಯಿಸುತ್ತದೆ. ಎಷ್ಟೋ ಸಂದರ್ಭಗಳಲ್ಲಿ ಸರ್ಕಾರಿ ಅಧಿಕಾರಿಗಳು ಕೆಲಸದ ಸ್ಥಳ
ದಲ್ಲಿ ಹಾಜರಿರಬೇಕಾಗುತ್ತದೆ. ಕೋವಿಡ್ ಲಾಕ್ಡೌನ್ ವೇಳೆ ಸರ್ಕಾರಿ ನೌಕರರಿಗೆ ಮನೆಯಿಂದ ಕೆಲಸ ಮಾಡುವ ಅವಕಾಶ ಕಲ್ಪಿಸಲಾಗಿತ್ತು. ಇದರಿಂದ ಎಷ್ಟು ಪ್ರಯೋಜನವಾಗಿದೆ ಎಂಬ ಬಗ್ಗೆ ಆಡಿಟ್ ಮಾಡಿಸಿದರೆ ಸತ್ಯ ತಿಳಿಯಲಿದೆ.

⇒ಜಗದೀಶ್ ಎಚ್.ಬಿ., ಹುಬ್ಬಳ್ಳಿ

ಬಸಾಪುರ ಕೆರೆಯ ಅಕರಾಳ ವಿಕರಾಳ ಸ್ಥಿತಿ

ಕೊಪ್ಪಳ ತಾಲ್ಲೂಕಿನ ಬಸಾಪುರ ಗ್ರಾಮದ 44.35 ಎಕರೆ ವಿಸ್ತೀರ್ಣದ ಕೆರೆಯನ್ನು ಅಧಿಕಾರಿಗಳ ನೆರವಿನಿಂದ ಕಂಪನಿಯೊಂದು ತನ್ನ ಖಾಸಗಿ ಆಸ್ತಿಯಾಗಿಸಿಕೊಂಡಿದೆ.
ಸುತ್ತುಗೋಡೆ ನಿರ್ಮಿಸಿ ಅದು ಸಾರ್ವಜನಿಕರಿಗೆ ಮತ್ತು ಜಾನುವಾರುಗಳಿಗೆ ನೀರು
ದೊರೆಯದಂತೆ ಮಾಡಿದೆ. ಕೆರೆಯ ಸ್ವರೂಪವೂ ಬದಲಾಗಿದೆ. ಅದರ ಅರ್ಧ
ಭಾಗವನ್ನು ಮುಚ್ಚಿ ಉಳಿದ ಭಾಗದಲ್ಲಿ 60 ಅಡಿಗಳಷ್ಟು ಆಳ ತೋಡಿ ಕೊಳ ನಿರ್ಮಿಸಲಾಗಿದೆ. ಇದು 2011ರ ಜನವರಿ 28ರಂದು ಸುಪ್ರೀಂ ಕೋರ್ಟ್ನ ನ್ಯಾಯಮೂರ್ತಿ ಮಾರ್ಕಂಡೇಯ ಕಾಟ್ಜು ನೇತೃತ್ವದ ನ್ಯಾಯಪೀಠ ನೀಡಿರುವ ಆದೇಶಕ್ಕೆ ವಿರುದ್ಧವಾದುದು. ಜಿಲ್ಲಾಡಳಿತ ಮತ್ತು ಪರಿಸರ ಇಲಾಖೆಯು ಹೊಣೆಗಾರಿಕೆ ಅರಿತು ಕೆರೆಯನ್ನು ಸಾರ್ವಜನಿಕ ಬಳಕೆಗೆ ಮುಕ್ತಗೊಳಿಸಬೇಕಿದೆ.

⇒ಟಿ.ಆರ್. ಚಂದ್ರಶೇಖರ, ಹೊಸಪೇಟೆ

ಜನಸಂಖ್ಯೆ ಹೆಚ್ಚಿಸಲು ಹತ್ತಾರು ಕಸರತ್ತು

ಆಂಧ್ರಪ್ರದೇಶ ಸರ್ಕಾರವು ಮೂರು ಮತ್ತು ನಾಲ್ಕನೇ ಮಗು ಪಡೆಯುವವರಿಗೆ ವಿಶೇಷ ಪ್ರೋತ್ಸಾಹಧನ ನೀಡುವುದಾಗಿ ಘೋಷಿಸಿದೆ. ಸರ್ಕಾರದ ಈ ನೀತಿಗೆ ಆತಂಕ ಪಡಬೇಕೋ ಅಥವಾ ಅಚ್ಚರಿಪಡಬೇಕೋ ಅರ್ಥವಾಗದು. ಕೆಲವು ರಾಜಕೀಯ ಧುರೀಣರು, ಧಾರ್ಮಿಕ ಮುಖಂಡರು ಕೂಡ ಜನನ ಪ್ರಮಾಣ ಹೆಚ್ಚಿ
ಸಲು ಆಗಾಗ ತುತ್ತೂರಿ ಊದುತ್ತಾರೆ. ಜಗತ್ತಿನಲ್ಲಿಯೇ ಅತಿಹೆಚ್ಚು ಜನಸಂಖ್ಯೆ ಹೊಂದಿರುವ ಭಾರತದಲ್ಲಿ ಲಭ್ಯವಿರುವ ಮಾನವ ಸಂಪನ್ಮೂಲದ ಸಮರ್ಪಕ ಬಳಕೆಯಾಗುತ್ತಿಲ್ಲ. ಇದರ ಬಗ್ಗೆ ಯಾರೊಬ್ಬರಿಗೂ ಲಕ್ಷ್ಯ ಇದ್ದಂತಿಲ್ಲ. ಜನಸಂಖ್ಯಾ ಹೆಚ್ಚಳದಿಂದ ಇನ್ನೂ ತೀವ್ರವಾಗಬಹುದಾದ ಬಡತನ, ನಿರುದ್ಯೋಗದ ಬಗ್ಗೆ ಕಿಂಚಿತ್ತೂ ಅರಿವು ಇಲ್ಲ. ಇಂತಹ ಸಂದರ್ಭದಲ್ಲಿ ಜನಸಂಖ್ಯೆ ಹೆಚ್ಚಿಸಲು ಪ್ರೋತ್ಸಾಹ ನೀಡುವುದು ಯಾವ ರೀತಿಯಲ್ಲಿ ಸಮರ್ಥನೀಯ?

⇒ಶಿವರಾಜು ಎ.ಆರ್., ಜಟ್ಟಿಅಗ್ರಹಾರ

ಈಶಾನ್ಯ ಭಾಗಕ್ಕೆ ಡೆಮು ರೈಲು ಮರೀಚಿಕೆ

ಇಡೀ ದೇಶವೇ ಈಗ ಬುಲೆಟ್ ರೈಲಿನ ಬಗ್ಗೆ ಮಾತಾಡುತ್ತಿದೆ. ಆದರೆ, ಕರ್ನಾಟಕದ ಈಶಾನ್ಯ ಭಾಗದ ಜನರು ಡೆಮು ರೈಲಿಗಾಗಿ ಪರದಾಡುತ್ತಿದ್ದಾರೆ. ಕಲ್ಯಾಣ ಕರ್ನಾಟಕದ ಬೀದರ್ ಮತ್ತು ರಾಯಚೂರು, ಸಿಕಂದರಾಬಾದ್ನ ದಕ್ಷಿಣ ಮಧ್ಯ ರೈಲ್ವೆ ವಲಯದ ವ್ಯಾಪ್ತಿಗೆ ಒಳಪಟ್ಟಿವೆ. ಈ ವಲಯ ಬೀದರ್–ಕಲಬುರಗಿ ನಡುವೆ ಎರಡು ದಿಕ್ಕಿನಿಂದ ಡೆಮು ರೈಲಿನ ಸೇವೆ ನೀಡುತ್ತಿದೆ. ಆದರೆ, ರಾಯಚೂರು–ಕಲಬುರಗಿ ನಡುವೆ ಡೆಮು ರೈಲು ಓಡಿಸಲು ಜಿಪುಣತನ ತೋರಿದೆ. ಕಲಬುರಗಿ ಮತ್ತು ರಾಯಚೂರಿನ ಸಂಸದರು ಈ ಬಗ್ಗೆ ಗಮನಹರಿಸಲಿ.

⇒ವೆಂಕಟೇಶ್ ಮುದಗಲ್, ಕಲಬುರಗಿ

ಪರ್ಯಾಯ ಗೊಬ್ಬರ ಕೃಷಿಗೆ ಆಧಾರ

ಮುಂಗಾರು ಆರಂಭವಾಗುವ ಮುನ್ನವೇ ರಾಜ್ಯದಲ್ಲಿ ರಸಗೊಬ್ಬರದ ಅಭಾವ ತಲೆದೋರಿದೆ. ಕೊಲ್ಲಿ ಯುದ್ಧವೇ ಇದಕ್ಕೆ ಕಾರಣ. ಕೃಷಿ ಚಟುವಟಿಕೆಗಳಿಗೆ ನ್ಯಾನೊ ಯೂರಿಯಾ, ಡಿಎಪಿ ಪರ್ಯಾಯವಲ್ಲ; ರಸಗೊಬ್ಬರದ ಕೊರತೆ ನೀಗಿಸಲು ಹಸಿರೆಲೆ ಮತ್ತು ಜೈವಿಕ ಗೊಬ್ಬರದ ಬಳಕೆಗೆ ರೈತರು ಒತ್ತು ನೀಡಬೇಕಿದೆ. ಮಣ್ಣು ಪರೀಕ್ಷೆ ಆಧಾರದ ಮೇಲೆ ರಸಗೊಬ್ಬರ ಬಳಸಬೇಕಿದೆ. ರಸಗೊಬ್ಬರವನ್ನು ಸಾವಯವ ಗೊಬ್ಬರದ ಜೊತೆಗೆ ಬೆರೆಸಿ ಬಳಸಬಹುದು. ಪ್ರಸ್ತುತ ಸುರಿಯುತ್ತಿರುವ ಮಳೆಯ ಪ್ರಯೋಜನ ಪಡೆದು ಸೆಣಬು, ಹುರುಳಿ, ಅಲಸಂದೆ ಬಿತ್ತಿ 45 ದಿನಗಳ ನಂತರ ಭೂಮಿಗೆ ಸೇರಿಸಬೇಕು. ಗ್ಲಿರಿಸಿಡಿಯಾ, ಹೊಂಗೆ, ಬೇವು ಇತರೆ ಮರಗಳ ಸೊಪ್ಪು ಬಳಸಿ ಭೂಮಿಗೆ ಸೇರಿಸಿದರೆ ಶೇ 50ರಷ್ಟು ರಸಗೊಬ್ಬರವನ್ನು ಉಳಿಸಬಹುದು.

ಎಚ್.ಆರ್. ಪ್ರಕಾಶ್, ಮಂಡ್ಯ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.