ದ್ವೇಷವಲ್ಲ, ದೇಶಕ್ಕೆ ಅಭಿವೃದ್ಧಿ ಬೇಕು

ಲೋಕಸಭೆ, ವಿಧಾನಸಭಾ ಚುನಾವಣೆ ಸಂದರ್ಭಗಳಲ್ಲಿ ಬಿಜೆಪಿಯು ‘ಕಾಂಗ್ರೆಸ್ ಮುಕ್ತ ಭಾರತ’ ತನ್ನ ಗುರಿ ಎಂದು ಘೋಷಿಸುತ್ತದೆ. ಇದೇ ಧಾಟಿಯಲ್ಲಿ ಬಿಜೆಪಿ ಬಗ್ಗೆ ಕಾಂಗ್ರೆಸ್ ಮಾತನಾಡುತ್ತದೆ. ಆದರೆ, ಜನರಿಗೆ ಬೇಕಿರುವುದು ಪಕ್ಷಮುಕ್ತ ಭಾರತವಲ್ಲ; ಬಡತನ, ನಿರುದ್ಯೋಗ ಮುಕ್ತ ಭಾರತ. ಲಕ್ಷಾಂತರ ಜನರು ಇಂದಿಗೂ ಬಡತನ, ನಿರುದ್ಯೋಗ, ಶಿಕ್ಷಣ ಮತ್ತು ಆರೋಗ್ಯ ಸೌಲಭ್ಯಕ್ಕಾಗಿ ಹೋರಾಟ ಮಾಡುತ್ತಿದ್ದಾರೆ. ರಾಜಕೀಯ ಪಕ್ಷಗಳು ಪರಸ್ಪರ ಟೀಕಿಸುವುದಕ್ಕಿಂತ, ಜನರ ಬದುಕು ಸುಧಾರಿಸುವ ಕೆಲಸಕ್ಕೆ ಆದ್ಯತೆ ನೀಡಬೇಕು. ಉತ್ತಮ ಶಿಕ್ಷಣ, ಉದ್ಯೋಗಾವಕಾಶ, ಕೈಗಾರಿಕಾ ಅಭಿವೃದ್ಧಿಯ ಜತೆಗೆ ರೈತರಿಗೆ ಬೆಂಬಲ ನೀಡುವುದೇ ನಿಜವಾದ ಅಭಿವೃದ್ಧಿ. ದೇಶಕ್ಕೆ ಬೇಕಿರುವುದು ದ್ವೇಷದ ರಾಜಕೀಯವಲ್ಲ. ಈ ಸತ್ಯವನ್ನು ಆಳುವ ವರ್ಗವು ಮನಗಾಣುವುದು ಒಳಿತು.

– ಪ್ರದೀಪ ಪಾದಗಟ್ಟಿ, ಬಸವನ ಬಾಗೇವಾಡಿ

ಪ್ರಭಾವಿಗಳ ಪೂರ್ವಗ್ರಹ ಅಪಾಯಕರ

‘ಬಿಹಾರದ ಚುನಾವಣಾ ಸೋಲು ಕಾಂಗ್ರೆಸ್ಗೆ ಮೊದಲೇ ಗೊತ್ತಿದ್ದರಿಂದ, ಮತಗಳ್ಳತನದ ಆರೋಪ ಮಾಡುತ್ತಿದೆ’ ಎಂದು ನಿವೃತ್ತ ನ್ಯಾಯಮೂರ್ತಿ ಸಂತೋಷ್ ಹೆಗ್ಡೆ ಹೇಳಿದ್ದಾರೆ. ರಾಹುಲ್ ಗಾಂಧಿ ಅವರ ಆರೋಪದಲ್ಲಿ ಕೊಂಚವೂ ಹುರುಳಿಲ್ಲವೆಂದು ಹೆಗ್ಡೆಯವರು ಅಷ್ಟೊಂದು ವಿಶ್ವಾಸದಿಂದ ಹೇಳುತ್ತಿರುವುದು ಅಚ್ಚರಿ ಮೂಡಿಸುತ್ತದೆ.

ರಾಹುಲ್, ಯೋಗೇಂದ್ರ ಯಾದವ್ ಮೊದಲಾದವರು ಕೇಳಿದ ಪ್ರಶ್ನೆಗಳಿಗೆ ಚುನಾವಣಾ ಆಯೋಗದ ಉತ್ತರ ಹೊಣೆಗಾರಿಕೆಯಿಂದ ಕೂಡಿದೆಯೇ? ಅದರ ನಡೆಯ ಬಗ್ಗೆ ಅನುಮಾನ ವ್ಯಕ್ತಪಡಿಸುತ್ತಿರುವವರನ್ನೇ ಗೇಲಿ ಮಾಡುವುದು ಸರಿಯೇ? ಆಯೋಗ ನಡೆಸುತ್ತಿರುವ ‘ಎಸ್ಐಆರ್’ ಬಗ್ಗೆ ಹೆಗ್ಡೆ ಅವರಿಗೆ
ತಕರಾರು ಇರುವುದೇ? ಈ ಸಂಬಂಧ ಎಲ್ಲಿಯಾದರೂ ಹೇಳಿಕೆ ನೀಡಿದ್ದಾರೆಯೇ? ಅವರು ಈ ಬಗ್ಗೆ ಮೌನವಹಿಸಿರುವುದೇಕೆ? ಹೆಗ್ಡೆ ಅವರಂತಹವರು ಪಕ್ಷ ಸಿದ್ಧಾಂತಗಳ ಗೋಜಲಿನಿಂದ ಮಾನಸಿಕ ಅಂತರ ಸಾಧಿಸದೆ, ಒಂದು ಪಕ್ಷದ ವಿರೋಧಿಯಂತೆ ಮಾತಾಡುತ್ತಿರುವುದು ವಿಷಾದನೀಯ. ಪ್ರಭಾವಿ ವ್ಯಕ್ತಿಗಳು ನಿಷ್ಪಕ್ಷಪಾತ ಮನಸ್ಸನ್ನು ಕಳೆದುಕೊಳ್ಳುತ್ತಿರುವಲ್ಲಿ ಭಾರತದ ಸಾಮಾಜಿಕ ಕತ್ತಲೆ ದಟ್ಟೈಸುತ್ತಿದೆ!

– ದೊಡ್ಡಿಶೇಖರ್, ಆನೇಕಲ್

ಸುಧಾರಣೆ ಕಾಣದ ಅನ್ನದಾತನ ಬದುಕು

ರೈತನನ್ನು ‘ಅನ್ನದಾತ’ ಎನ್ನುತ್ತೇವೆ. ಆದರೆ, ಇಡೀ ದೇಶಕ್ಕೆ ಅನ್ನ ನೀಡುವ ರೈತ, ಬೆಂಬಲ ಬೆಲೆ ಆದಿಯಾಗಿ ತನಗೆ ಬೇಕಾದ ಎಲ್ಲಾ ಸೌಕರ್ಯವನ್ನು ಹೋರಾಟದ ಮೂಲಕವೇ ಪಡೆದುಕೊಳ್ಳುವ ದಯನೀಯ ಸ್ಥಿತಿ ತಲೆದೋರಿರುವುದು ದುರದೃಷ್ಟಕರ. ಭಾರತಕ್ಕೆ ಸ್ವಾತಂತ್ರ್ಯ ದೊರೆತು 75 ವರ್ಷ ಕಳೆದರೂ ರೈತನ ಸ್ಥಿತಿ ಇಂದಿಗೂ ಸುಧಾರಿಸದಿರುವುದು ದುರಂತವೇ ಸರಿ.

– ಪ್ರತಿಕ್ ಟೋನಗೆ, ಬೆಳಗಾವಿ

ಕ್ರಿಸ್ಮಸ್ ಆಚರಣೆ: ಮುಂಗಡ ಬೇಡವೆ?

ರಾಜ್ಯ ಸರ್ಕಾರ ತನ್ನ ನೌಕರರಿಗೆ ರಾಷ್ಟ್ರೀಯ ಹಬ್ಬಗಳಾದ ಸ್ವಾತಂತ್ರ್ಯ ದಿನಾಚರಣೆ, ಗಣರಾಜ್ಯೋತ್ಸವ ಹಾಗೂ ಆಯ್ದ ಧಾರ್ಮಿಕ ಹಬ್ಬಗಳ ಆಚರಣೆಯ ಖರ್ಚಿನ ನಿರ್ವಹಣೆಗಾಗಿ, ಮರುಪಾವತಿಯ ನಿಬಂಧನೆಗೆ ಒಳಪಟ್ಟು ಗರಿಷ್ಠ ₹25 ಸಾವಿರ ಮೊತ್ತದ ಹಬ್ಬದ ಮುಂಗಡ ನೀಡುತ್ತಿರುವುದು ಸರಿಯಷ್ಟೇ. ಬಹುತೇಕ ಪ್ರಮುಖ ಹಬ್ಬಗಳನ್ನು ಎಚ್ಆರ್ಎಂಎಸ್ ತಂತ್ರಾಂಶದ ಹಬ್ಬದ ಮುಂಗಡ ವಿಭಾಗದಲ್ಲಿ ಸೇರಿಸಲಾಗಿದೆ.

ಆಯಾ ಹಬ್ಬಗಳ ಸಂದರ್ಭದಲ್ಲಿ ಮುಂಗಡ ಪಡೆಯಲು ಅವಕಾಶ ಕಲ್ಪಿಸಲಾಗಿದೆ. ಆದರೆ, ಸದರಿ ಹಬ್ಬಗಳ ಪಟ್ಟಿಯಲ್ಲಿ ಕ್ರಿಸ್ಮಸ್ ಹಬ್ಬವನ್ನು ಸೇರಿಸಿಲ್ಲ. ಹಾಗಾಗಿ, ಕ್ರಿಶ್ಚಿಯನ್ ಸಮುದಾಯದ ನೌಕರರು ಮುಂಗಡ ಪಡೆಯುವ ಅವಕಾಶದಿಂದ ವಂಚಿತರಾಗಿದ್ದಾರೆ. ಸರ್ಕಾರವು ಕ್ರಿಸ್ಮಸ್ಗೂ ಮುಂಗಡ ನೀಡಬೇಕಿದೆ.

– ಇಸ್ಮಾಯಿಲ್ ಎ., ಮಂಗಳೂರು

ಮೆಕ್ಕೆಜೋಳ ಬೆಳೆದ ರೈತರ ಪರದಾಟ

ಹೊಲಗಳಲ್ಲಿ ಹುಲುಸಾಗಿ ಬೆಳೆದಿರುವ ಮೆಕ್ಕೆಜೋಳ ಕಟಾವಿಗೆ ಸಜ್ಜಾಗಿದೆ. ಆದರೆ, ಮಾರುಕಟ್ಟೆಯಲ್ಲಿ ಸೂಕ್ತ ಬೆಲೆ ದೊರೆಯುತ್ತಿಲ್ಲ. ಇದರಿಂದ ರೈತರು ಕಟಾವು ಮಾಡದೆ ಹಾಗೆಯೇ ಬಿಟ್ಟಿದ್ದಾರೆ. ಕೇಂದ್ರ ಸರ್ಕಾರವು ಪ್ರತಿ ಕ್ವಿಂಟಲ್ ಮೆಕ್ಕೆಜೋಳಕ್ಕೆ ₹2,400 ಬೆಂಬಲ ಬೆಲೆ ಘೋಷಿಸಿದೆ. ಆದರೆ, ಇನ್ನೂ ಖರೀದಿ ಕೇಂದ್ರಗಳನ್ನು ತೆರೆದಿಲ್ಲ. ಈ ನಡುವೆಯೇ ಮುಕ್ತ ಮಾರುಕಟ್ಟೆಯಲ್ಲಿ ಮೆಕ್ಕೆಜೋಳದ ಬೆಲೆ ಕುಸಿದಿದೆ. ಹಾಗಾಗಿ, ಖರೀದಿದಾರರು ಮುಂದೆ ಬರುತ್ತಿಲ್ಲ. ಲಕ್ಷಾಂತರ ರೂಪಾಯಿ ಖರ್ಚು ಮಾಡಿರುವ ರೈತರಿಗೆ ದಿಕ್ಕು ತೋಚದಂತಾಗಿದೆ. ರಾಜ್ಯ ಸರ್ಕಾರವು ಬೆಂಬಲ ಬೆಲೆಯ ಜೊತೆಗೆ ಪ್ರೋತ್ಸಾಹಧನ ಘೋಷಿಸುವ ಮೂಲಕ ಖರೀದಿ ಆರಂಭಿಸಬೇಕಿದೆ.

– ಸಂತೋಷ ಬ. ಬಾಗೇವಾಡಿ, ತಡಲಗಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.