ನೀತಿನಿಯಮ: ಡಿಸಿ, ಎಸ್ಪಿಗೆ ಅಪಥ್ಯವೆ?

ಸರ್ಕಾರಿ ಅಧಿಕಾರಿಗಳು ಕರ್ತವ್ಯ ನಿರ್ವಹಿಸುವಾಗ ನೀತಿಸಂಹಿತೆಯನ್ನು ಕಡ್ಡಾಯ
ವಾಗಿ ಪಾಲಿಸಬೇಕು; ಜೊತೆಗೆ, ಧರ್ಮನಿರಪೇಕ್ಷವಾಗಿ ವರ್ತಿಸಬೇಕು. ಆದರೆ, ಇತ್ತೀಚಿನ ದಿನಗಳಲ್ಲಿ ಕೆಲವು ಅಧಿಕಾರಿಗಳು ಈ ನಿಯಮವನ್ನು ಗಾಳಿಗೆ ತೂರು
ತ್ತಿದ್ದಾರೆ. ಕೆಲವು ತಿಂಗಳ ಹಿಂದೆ ಹಾಸನದ ಹಾಸನಾಂಬ ಜಾತ್ರೆಯಲ್ಲಿ ಅಲ್ಲಿನ
ಜಿಲ್ಲಾಧಿಕಾರಿಯು ಕೊಂಡ ಹಾಯ್ದಿದ್ದು ಸುದ್ದಿಯಾಗಿತ್ತು. ಇತ್ತೀಚೆಗೆ ಮೇಲುಕೋಟೆ
ವೈರಮುಡಿ ಉತ್ಸವದಲ್ಲಿ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅವರು ವೈರಮುಡಿ ಗಂಟನ್ನು ಹೊತ್ತು ನಿಯಮ ಮುರಿದಿದ್ದಾರೆ. ಸರ್ಕಾರದ ಪ್ರತಿನಿಧಿಗಳಾಗಿ ಹೀಗೆ ಮಾಡುವುದು ಸರಿಯಲ್ಲ. ಉತ್ಸವಗಳಲ್ಲಿ ಕಾನೂನು–ಸುವ್ಯವಸ್ಥೆ ಕಾಪಾಡುವುದು ಅಧಿಕಾರಿಗಳ ಹೊಣೆ; ತಾವೇ ಉತ್ಸವದ ಭಾಗ
ಆಗಬಾರದು. ಇತ್ತೀಚೆಗೆ ಅಧಿಕಾರಿಗಳಲ್ಲಿ ಇಂಥ ಚಾಳಿ ಹೆಚ್ಚುತ್ತಿದೆ. ಸರ್ಕಾರ ಇದಕ್ಕೆ ಸ್ಪಷ್ಟ ಮಾರ್ಗಸೂಚಿ ಪ್ರಕಟಿಸಬೇಕಿದೆ.

⇒ಸಂತೋಷ ಕೌಲಗಿ, ಮೇಲುಕೋಟೆ

ಸಾರಿಗೆ ಸಿಬ್ಬಂದಿ ವರ್ಗಾವಣೆ ತ್ವರಿತವಾಗಲಿ

ಆನ್ಲೈನ್ ಮೂಲಕ ರಾಜ್ಯ ರಸ್ತೆ ಸಾರಿಗೆ ನಿಗಮಗಳ ಸಿಬ್ಬಂದಿಯ ವರ್ಗಾವಣೆ ಪ್ರಕ್ರಿಯೆಗೆ ಅರ್ಜಿ ಆಹ್ವಾನಿಸಿರುವುದು ಸ್ವಾಗತಾರ್ಹ. ಮೇ ತಿಂಗಳೊಳಗೆ ಈ ಪ್ರಕ್ರಿಯೆಯು ಪೂರ್ಣಗೊಳ್ಳಬೇಕಿದೆ. ಇದರಿಂದ ವರ್ಗಾವಣೆಗೊಂಡ ಸ್ಥಳದಲ್ಲಿ ಸಿಬ್ಬಂದಿಯು ತಮ್ಮ ಮಕ್ಕಳನ್ನು ಶಾಲೆಗಳಿಗೆ ದಾಖಲಿಸಲು ಅನುಕೂಲವಾಗಲಿದೆ. ಜೊತೆಗೆ, ಬಾಡಿಗೆ ಮನೆಗಳನ್ನು ಹುಡುಕಲು ಸಹಕಾರಿಯಾಗಲಿದೆ. ವಿಳಂಬ ಮಾಡಿದರೆ ಸಂಕಷ್ಟಕ್ಕೆ ಸಿಲುಕಲಿದ್ದಾರೆ. ಸಿಬ್ಬಂದಿಯ ಕುಟುಂಬಸ್ಥರು ಮತ್ತು ಮಕ್ಕಳ ಶೈಕ್ಷಣಿಕ ಹಿತದೃಷ್ಟಿದಿಂದ ತ್ವರಿತವಾಗಿ ಕ್ರಮವಹಿಸಬೇಕಿದೆ.

⇒ಎಸ್.ಎಂ. ಚಂದ್ರಮೌಳಿ ಸ್ವಾಮಿ, ಬೆಂಗಳೂರು
ಸಭೆಗೆ ಗೈರು: ಜವಾಬ್ದಾರಿ ಮರೆತ ಪ್ರಧಾನಿ

ಕೊಲ್ಲಿ ಯುದ್ಧದ ಬಿಕ್ಕಟ್ಟಿನ ಬಗ್ಗೆ ಚರ್ಚಿಸಲು ಕೇಂದ್ರ ಸರ್ಕಾರವೇ ಕರೆದಿದ್ದ ಸರ್ವಪಕ್ಷಗಳ ಸಭೆಗೆ ಪ್ರಧಾನಿ ನರೇಂದ್ರ ಮೋದಿ ಗೈರುಹಾಜರಾಗಿದ್ದಾರೆ. ಅವರು ದೆಹಲಿಯಲ್ಲಿದ್ದರೂ ಸಭೆಗೆ ಗೈರುಹಾಜರಾಗಿರುವುದು ಉತ್ತಮ ಸಂಪ್ರದಾಯವಲ್ಲ. ಹಿಂದೆಯೂ ಮಹತ್ವದ ವಿಷಯ ಕುರಿತಂತೆ ನಡೆದ ಸರ್ವಪಕ್ಷಗಳ ಸಭೆಗೆ ಅವರು ಗೈರುಹಾಜರಾಗಿರುವ ನಿದರ್ಶನವಿದೆ. ಪ್ರಜಾಪ್ರಭುತ್ವದ ಯಶಸ್ಸಿಗೆ ಆಡಳಿತ ಮತ್ತು ವಿಪಕ್ಷಗಳೆರಡೂ ವಿಶ್ವಾಸದಿಂದ ಸಾಗಬೇಕಿದೆ. ಮೋದಿಯವರು ವಿದೇಶಗಳಿಗೆ ತೆರಳಿದಾಗ ಅಲ್ಲಿನ ನಾಯಕರನ್ನು ಆಲಿಂಗಿಸಿ ಫೋಟೊ ತೆಗೆಸಿಕೊಳ್ಳುತ್ತಾರೆ. ಆದರೆ, ದೇಶದಲ್ಲಿನ ವಿಪಕ್ಷದ ನಾಯಕರ ಬಗ್ಗೆ ಅಲಕ್ಷ್ಯವೇಕೆ? ವಿಪಕ್ಷಗಳ ನಾಯಕರೊಂದಿಗೆ ಮುಕ್ತವಾಗಿ ಚರ್ಚಿಸುವುದು ಪ್ರಧಾನಿಯ ಹೊಣೆಯಲ್ಲವೆ? ದಶಕದಿಂದ ಕೇಂದ್ರದ ನೀತಿನಿರೂಪಣೆಯಲ್ಲಿ ‘ಮುಕ್ತಚರ್ಚೆ’ಯ ವಾತಾವರಣವೇ ಇಲ್ಲದಂತಾಗಿದೆ.

⇒ಅನಿಲ್ ಕುಮಾರ್, ಶಿವಮೊಗ್ಗ

ಋತುಚಕ್ರದ ರಜೆ: ಮುಜುಗರ ಆಗದಿರಲಿ

ದಶಕಗಳ ಹೋರಾಟದ ಫಲದಿಂದ ಶಿಕ್ಷಣ ಹಾಗೂ ಔದ್ಯೋಗಿಕ ಸ್ಥಳಗಳಲ್ಲಿ ಮಹಿಳೆಯರು ಹೆಚ್ಚಾಗಿ ತೊಡಗಿಸಿಕೊಂಡಿದ್ದಾರೆ. ದಕ್ಷತೆಯಿಂದ ಕೆಲಸ ಮಾಡಿ ಉತ್ಪಾದಕತೆಯಲ್ಲಿ ದೇಶಕ್ಕೆ ಗಮನಾರ್ಹ ಕೊಡುಗೆ ನೀಡಿದ್ದಾರೆ. ಸಾಮಾಜಿಕ, ಧಾರ್ಮಿಕ, ಲಿಂಗಭೇದದಿಂದ ಮಹಿಳಾ ಆತ್ಮಶಕ್ತಿಗೆ ಅವಕಾಶಗಳು ಕಡಿಮೆ. ಈಗ ಋತುಚಕ್ರ ರಜೆಯ ವಿಷಯ ತೆಗೆದು ಮತ್ತೆ ಮಹಿಳಾ ಶಕ್ತಿಯನ್ನು ಕುಗ್ಗಿಸುವುದು ಬೇಡ. ಋತುಚಕ್ರದ ಬಗ್ಗೆ ಮುಕ್ತವಾಗಿ ಮಾತನಾಡಿ ರಜೆ ಪಡೆಯಲು ಮುಜುಗರ ಉಂಟಾಗಲಿದೆ. ಸರ್ಕಾರದ ನೀತಿಯಿಂದಾಗಿ ಕೆಲವು ಸಂಸ್ಥೆಗಳು ಮಹಿಳೆಯರ ನೇಮಕಾತಿಗೆ ಹಿಂಜರಿಯಬಹುದು; ಕೆಲವು ಸಂಸ್ಥೆಗಳಿಗೆ ಈ ರಜೆಯು ಆರ್ಥಿಕ ಹೊರೆ ಎನಿಸಬಹುದು. ಸರ್ಕಾರಗಳಿಗೆ ತಾವು ಮಾಡುವ ಎಲ್ಲ ಕಾರ್ಯಕ್ರಮಗಳು ಕಲ್ಯಾಣಕ್ರಮವಾಗಿ ಕಾಣುತ್ತವೆ. ಮಹಿಳೆಯರ ಆತ್ಮವಿಶ್ವಾಸ ಕುಗ್ಗಿಸುವ ಇಂಥ ಆದೇಶವನ್ನು ನ್ಯಾಯಾಲಯವು ನ್ಯಾಯಸಮ್ಮತವಾಗಿ ಬಗೆಹರಿಸುವುದು ಹಿತಕಾರಿ.

⇒ಚಿಕ್ಕಜೋಗಿಹಳ್ಳಿ ನಂದಕುಮಾರಿ, ಹೊನ್ನಾಳಿ

ಹಿಂದಿ ಹೊರಕ್ಕೆ: ಗ್ರಾಮೀಣರಿಗೆ ಸಿಕ್ಕ ಜಯ

ಎಸ್ಎಸ್ಎಲ್ಸಿ ಪರೀಕ್ಷೆ ಬರೆಯುವ ವಿದ್ಯಾರ್ಥಿಗಳು ಹಿಂದಿಯಲ್ಲಿ ಪಡೆಯುವ ಅಂಕ ಪರಿಗಣಿಸದೆ ಗ್ರೇಡ್ ನೀಡುವ ಕ್ರಮವು ಗ್ರಾಮೀಣ ವಿದ್ಯಾರ್ಥಿಗಳಿಗೆ ಸಂದ
ಜಯ. ಭಾಷೆಯನ್ನು ಓದುವುದು, ಬರೆಯುವುದು, ಕಲಿಯುವುದು ತಪ್ಪಲ್ಲ. ಆದರೆ, ಆ ಕಲಿಯುವಿಕೆಯೇ ಭವಿಷ್ಯಕ್ಕೆ ಅಡ್ಡಿಯಾಗಬಾರದು. ಗ್ರಾಮೀಣ ಪ್ರದೇಶದ ಸರ್ಕಾರಿ ಪ್ರೌಢಶಾಲೆಗಳಲ್ಲಿ ಹಿಂದಿ ಕಲಿಸುವ ಶಿಕ್ಷಕರಿಲ್ಲ; ಹೇಳಿಕೊಡುವವರು ಇಲ್ಲ. ನಾವು ಎಸ್ಎಸ್ಎಲ್ಸಿ ಓದುವಾಗ 50 ಅಂಕಕ್ಕೆ ಹಿಂದಿ ಪರೀಕ್ಷೆ ಬರೆಯಬೇಕಿತ್ತು. ಎಷ್ಟು ಕಷ್ಟವಿತ್ತೆಂದರೆ ಹೇಳಲು ಅಸಾಧ್ಯ. ಈಗ 100 ಅಂಕಗಳಿವೆ. ತಮ್ಮದಲ್ಲದ
ಹಿಂದಿ ಭಾಷೆ ಕಲಿತು ನೂರು ಅಂಕಗಳಿಗೆ ಬರೆಯುವುದಾದರೂ ಹೇಗೆ? ಮನೆಯಲ್ಲಿ, ಶಾಲೆಯಲ್ಲಿ ಕನ್ನಡ ಹೇಳಿ ಕೊಡುವವರಿದ್ದರೂ ನಪಾಸಾಗುವವರ ಸಂಖ್ಯೆ ಈಗಲೂ ಕಡಿಮೆಯಾಗಿಲ್ಲ. ಹೀಗಿರುವಾಗ ಹಿಂದಿ ವಿಷಯದಲ್ಲಿ ಪಾಸಾಗುವುದನ್ನು ಕಡ್ಡಾಯಗೊಳಿಸಿ ಲಕ್ಷಾಂತರ ವಿದ್ಯಾರ್ಥಿಗಳ ಭವಿಷ್ಯದೊಂದಿಗೆ ಚೆಲ್ಲಾಟ ಆಡುತ್ತಿದ್ದುದು ಈಗ ತಪ್ಪಿದೆ.

→⇒ಬಲ್ಲೇನಹಳ್ಳಿ ಮಂಜುನಾಥ್, ಕೆ.ಆರ್. ಪೇಟೆ

ಐಪಿಎಲ್ ಟಿಕೆಟ್ ಬೇಡಿಕೆ ಹಾಸ್ಯಾಸ್ಪದ

ಶಾಸಕರಿಗೆ ಸಾಂವಿಧಾನಿಕವಾಗಿ ಹಲವಾರು ಸವಲತ್ತುಗಳನ್ನು ಕಲ್ಪಿಸಲಾಗಿದೆ. ಪ್ರತಿ ತಿಂಗಳು ಸಂಬಳ, ಮನೆ ಬಾಡಿಗೆ, ವಾಹನ ಭತ್ಯೆ ಸೇರಿದಂತೆ ಲಕ್ಷಾಂತರ ರೂಪಾಯಿಯು ಅವರ ಕಿಸೆ ಸೇರುತ್ತದೆ. ಮೈಸೂರು ದಸರಾ ಹಾಗೂ ಸರ್ಕಾರದಿಂದ ನಡೆಸುವ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಅವರಿಗೆ ಉಚಿತ ಪಾಸು ನೀಡಲಾಗುತ್ತದೆ. ಹೀಗಿದ್ದರೂ ಐಪಿಎಲ್ ಕ್ರಿಕೆಟ್ ಪಂದ್ಯಗಳ ವೀಕ್ಷಣೆಗೆ ಉಚಿತವಾಗಿ ಟಿಕೆಟ್ ಕೇಳುವುದು ಹಾಸ್ಯಾಸ್ಪದ.

ಚಿದಾನಂದ, ದಾವಣಗೆರೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.