ಭಾಷಾ ಸೌಹಾರ್ದ ನೆಲೆಗೊಳ್ಳಬೇಕಿದೆ

ಇಲ್ಲಿಯತನಕ ಧರ್ಮ, ಜಾತಿಗಳನ್ನು ಕೋಮುವಾದಕ್ಕೆ ಬಳಸಿಕೊಂಡಿರುವುದರ ಪರಿಣಾಮವಾಗಿ ಬಹಳಷ್ಟು ಸಾವು–ನೋವುಗಳನ್ನು ಕಂಡುಂಡಿದ್ದೇವೆ. ದಕ್ಷಿಣ ಕನ್ನಡದಲ್ಲಿ ನಡೆಯುತ್ತಿರುವ ದುರ್ಘಟನೆಗಳಿಗೂ ಸಾಕ್ಷಿಯಾಗಿದ್ದೇವೆ.

ಈಗ ಭಾಷಾ ಅನನ್ಯತೆಯನ್ನು ಆ ಸಾಲಿಗೆ ಸೇರಿಸುವ ವಾತಾವರಣ ನಿರ್ಮಾಣವಾಗುತ್ತಿದೆಯೇ ಎಂಬ ಪ್ರಶ್ನೆಯು ಆತಂಕಕ್ಕೆ ಕಾರಣವಾಗಿದೆ. ಜವಾಬ್ದಾರಿಯುತ ಸ್ಥಾನದಲ್ಲಿ ಇರುವವರು, ಸೆಲೆಬ್ರಿಟಿ ಎನಿಸಿಕೊಂಡವರು ವಿವೇಚನೆ ಇಲ್ಲದೆ ಸಾರ್ವಜನಿಕವಾಗಿ ಬಿಡುಬೀಸಾಗಿ ನೀಡುತ್ತಿರುವ ಹೇಳಿಕೆಗಳು, ಅವರ ವರ್ತನೆಗಳು ಗಾಯದ ಮೇಲೆ ಬರೆ ಎಳೆಯುವಂತಿವೆ. ಗಾಯಕರೊಬ್ಬರು ಭಾಷೆಯನ್ನು ಭಯೋತ್ಪಾದನಾ ಘಟನೆಗೆ ಹೋಲಿಸಿದ, ಪ್ರಾದೇಶಿಕ ಭಾಷೆಯನ್ನು ಮಾತನಾಡುವ ಕುರಿತ ಬ್ಯಾಂಕ್ ಅಧಿಕಾರಿಯ ವರ್ತನೆ, ತಮಿಳು ಭಾಷೆಯಿಂದ ಕನ್ನಡ ಭಾಷೆಯ ಉಗಮವಾಯಿತು ಎಂಬ ನಟ ಕಮಲ್ ಹಾಸನ್ ಅವರ ವಿವಾದಾತ್ಮಕ ಹೇಳಿಕೆಯಂತಹ ಬೆಳವಣಿಗೆಗಳು ಈ ಆತಂಕವನ್ನು ಇನ್ನಷ್ಟು ಹೆಚ್ಚು ಮಾಡಿವೆ.

ಕನ್ನಡದ ಕವಿರಾಜಮಾರ್ಗಕಾರ ಹೇಳಿದ ‘ಕಸವರಮೆಂಬುದು ನೆರೆ ಸೈರಿಸಲಾರ್ಪೊಡೆ ಪರವಿಚಾರಮುಮಂ ಪರ ಧರ್ಮಮುಮಂ’ (ಮತ್ತೊಬ್ಬರ ವಿಚಾರವನ್ನು, ಧರ್ಮವನ್ನು ಸಹಿಸುವುದೇ ನಿಜವಾದ ಸಂಪತ್ತು) ಎಂಬ
ವ್ಯಾಖ್ಯಾನವನ್ನು ಭಾಷೆಗೂ ಅನ್ವಯಿಸಿಕೊಂಡು ನಾವು ಆಚರಣೆಗೆ ಬದ್ಧರಾಗಬೇಕಾಗಿದೆ. ಆಗ ಭಾಷಾ ಸೌಹಾರ್ದ ನೆಲೆಗೊಳ್ಳುವುದರಲ್ಲಿ ಅನುಮಾನವಿಲ್ಲ.

⇒ಎ.ನಾಗಿಣಿ, ಬೆಂಗಳೂರು

ಇಷ್ಟವಿಲ್ಲದ ಆಚರಣೆ ಕೈಬಿಡಲಿ

‘ಹಿಂದೂ ಆಚರಣೆಗಳಿಗೆ ತಡೆ ಹೇರಬೇಡಿ. ಆಚರಣೆಗಳು ಜನರ ವೈಯಕ್ತಿಕ. ಬಸವತತ್ವ ಪಾಲನೆ ಮಾಡುವುದು ಅಗತ್ಯ’ ಎಂಬ ಅಖಿಲ ಭಾರತ ವೀರಶೈವ ಮಹಾಸಭಾದ ರಾಜ್ಯ ಘಟಕದ ಅಧ್ಯಕ್ಷ ಶಂಕರ್ ಬಿದರಿ ಅವರ ಹೇಳಿಕೆಗೆ ‘ತಾತ್ವಿಕತೆಯ ವೈರುಧ್ಯ ಅರಿಯಬೇಕಿದೆ’ ಎಂದು ಚಂದ್ರಶೇಖರ ತಾಳ್ಯ ಪ್ರತಿಕ್ರಿಯಿಸಿದ್ದಾರೆ (ವಾ.ವಾ., ಮೇ 29). ಬಿದರಿ ಅವರು ಹೇಳಿರುವುದು ಸರಿಯಾಗಿದೆ. ಹಿಂದೂ ಧರ್ಮದಲ್ಲಿನ ಉತ್ತಮ ಅಂಶಗಳನ್ನು ಅಳವಡಿಸಿಕೊಂಡು ಬಸವತತ್ವ ಪಾಲನೆ ಮಾಡುವುದರಲ್ಲಿ ತಪ್ಪೇನಿಲ್ಲ.

12ನೇ ಶತಮಾನದಲ್ಲೇ ಬಸವಣ್ಣನವರು ಅನುಭವ ಮಂಟಪದ ಮೂಲಕ ಸಮಾನತೆ, ಬಸವತತ್ವ ಆಚರಣೆಗಳಿಗೆ ನಾಂದಿ ಹಾಡಿದರು. ಆದರೆ ಅಂದಿನಿಂದ ಇಲ್ಲಿಯವರೆಗೂ ಅವುಗಳ ಆಚರಣೆ ಪೂರ್ಣವಾಗಿ ಕಾರ್ಯರೂಪಕ್ಕೆ ಬಂದಿಲ್ಲ. ಹಿಂದೂ ಧರ್ಮದ ಆಚರಣೆಗಳ ಜೊತೆಗೆ ಅವು ಬೆಸೆದುಕೊಂಡಿವೆ. ಹೀಗಿರುವಾಗ ಅವನ್ನು ವಿರೋಧಿಸುವುದು ಸಲ್ಲ. ಬೇಕಾದರೆ ಹಿಂದೂ ಧರ್ಮದ ಯಾವ ಆಚರಣೆ ಅವರಿಗೆ ಇಷ್ಟವಿಲ್ಲವೋ ಅದನ್ನು ಕೈಬಿಡಬೇಕು. ಬಿದರಿ ಅವರ ಅಭಿಪ್ರಾಯವೂ ಬಹುಶಃ ಇದೇ ಇರಬಹುದು.

⇒ಮುಳ್ಳೂರು ಪ್ರಕಾಶ್, ಮೈಸೂರು

ಇದೆಂಥ ಮೌಲ್ಯಮಾಪನ?

ಈ ದಿನಗಳಲ್ಲಿ ಪರೀಕ್ಷೆಯಲ್ಲಿ ತೇರ್ಗಡೆಯಾದರೂ ತಮಗೆ ನೀಡಿದ ಅಂಕಗಳು ನಿರೀಕ್ಷೆಗಿಂತ ಕಡಿಮೆ ಇವೆ ಎಂದು ಪರೀಕ್ಷೆ ಬರೆದ ವಿದ್ಯಾರ್ಥಿಗಳು ಮರುಮೌಲ್ಯಮಾಪನಕ್ಕೆ ಅರ್ಜಿ ಹಾಕುವುದು ಹೆಚ್ಚಾಗಿದೆ. ಆಗ ಕೆಲವರು ಹಿಂದಿಗಿಂತ ಹೆಚ್ಚಿನ ಅಂಕಗಳನ್ನು ಪಡೆದಿರುವುದನ್ನೂ ಪತ್ರಿಕೆಯಲ್ಲಿ ಓದುತ್ತಿದ್ದೇವೆ. ಇದನ್ನು ನೋಡಿದರೆ, ಮೌಲ್ಯಮಾಪನ ಮಾಡುವವರು ವಿದ್ಯಾರ್ಥಿಗಳ ಉತ್ತರಪತ್ರಿಕೆಗಳನ್ನು ಸರಿಯಾಗಿ ಗಮನಿಸದೇ ಅಂಕಗಳನ್ನು ನೀಡಿ ತಪ್ಪು ಮಾಡುತ್ತಿದ್ದಾರೆ ಎನಿಸುವುದು ಸಹಜ. ಹಾಗಿದ್ದರೆ, ಸರಿಯಾಗಿ ಕಾರ್ಯ ನಿರ್ವಹಿಸದವರಿಗೆ ಶಿಕ್ಷೆ ನೀಡುವ ಅಥವಾ ದಂಡ ವಿಧಿಸುವ ಬಗ್ಗೆ ಗಂಭೀರವಾಗಿ ಯೋಚಿಸಬೇಕಿದೆ.

ರಘುನಾಥ ರಾವ್ ತಾಪ್ಸೆ, ದಾವಣಗೆರೆ

ವರ್ಗಾವಣೆ ಗೊಂದಲ: ಭ್ರಷ್ಟಾಚಾರಕ್ಕೆ ಮೂಲ

ಸರ್ಕಾರಿ ಅಧಿಕಾರಿಗಳು ಮತ್ತು ನೌಕರರ ವರ್ಗಾವಣೆ ಸಮಯದಲ್ಲಿ ಹುದ್ದೆಗಳ ಖಾಲಿ ಸ್ಥಾನ ಇದ್ದಾಗ್ಯೂ
ಸ್ಥಳ ನಿಯುಕ್ತಿಗೊಳಿಸದೆ, ಕಡ್ಡಾಯ ಕಾಯುವಿಕೆಯಲ್ಲಿ ಇರಿಸಿ ಅವರಿಂದ ಕೆಲಸವನ್ನು ಪಡೆಯದೇ ವೇತನ
ನೀಡುವುದು ಸರ್ಕಾರಕ್ಕೆ ಆಗುವ ರಾಜಸ್ವ ನಷ್ಟವೇ ಸರಿ. ಅಲ್ಲದೆ ಉದ್ದೇಶಪೂರ್ವಕವಾಗಿ ಈ ರೀತಿ ಮಾಡುವುದು ಅಧಿಕಾರಿಗಳ ನೈತಿಕ ಸ್ಥೈರ್ಯ ಕುಸಿಯುವಂತೆ ಮಾಡುವುದಲ್ಲದೆ ಭ್ರಷ್ಟಾಚಾರಕ್ಕೆ ಎಡೆ ಮಾಡಿಕೊಟ್ಟಂತಾಗುತ್ತದೆ. ಅದರಲ್ಲೂ ಈ ರೀತಿಯ ಪ್ರಕರಣಗಳು ಸಾಮಾನ್ಯವಾಗಿ ಆಯಕಟ್ಟಿನ ಹುದ್ದೆಗಳನ್ನು ಹೊಂದಿರುವ ಇಲಾಖೆಗಳಲ್ಲಿ ನಡೆಯುತ್ತವೆ ಎಂಬುದಕ್ಕೆ ಉದಾಹರಣೆ, ಹಲವಾರು ತಿಂಗಳುಗಳಿಂದ ಹುದ್ದೆ ನಿರೀಕ್ಷೆಯಲ್ಲಿದ್ದ ಮುಖ್ಯ ಎಂಜಿನಿಯರುಗಳಿಗೆ ಸ್ಥಳ ನಿಯುಕ್ತಿಗೊಳಿಸಿರುವ ಬಗೆಗಿನ ‘ವರ್ಗ: ಸಿ.ಎಂ ಅಸ್ತು– ಡಿಸಿಎಂ ಮುನಿಸು ಎಂಬ ಶೀರ್ಷಿಕೆಯ ವರದಿ (ಪ್ರ.ವಾ., ಮೇ 29).

ಸಾಮಾನ್ಯವಾಗಿ ಸರ್ಕಾರದಲ್ಲಿ ಮುಖ್ಯಮಂತ್ರಿಯ ತೀರ್ಮಾನವೇ ಅಂತಿಮ. ‘ನನ್ನ ಪೂರ್ವಾನುಮತಿ ಪಡೆಯದೆ ಯಾವ ವಿಚಾರಗಳ ಬಗ್ಗೆಯೂ ಆದೇಶ ಹೊರಡಿಸಬಾರದು’ ಎಂದು ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ಸೂಚನೆ ನೀಡುವ ಅಧಿಕಾರ ಮುಖ್ಯಮಂತ್ರಿಗೆ ಇರುತ್ತದೆ. ಆದರೆ ಇದಕ್ಕೆ ತದ್ವಿರುದ್ಧವಾಗಿ
ಮುಖ್ಯಮಂತ್ರಿಯವರ ಅಧಿಕಾರವನ್ನೇ ಪ್ರಶ್ನಿಸುವಂತೆ ಇಲಾಖೆಯ ಮಂತ್ರಿಯೊಬ್ಬರು ಮುಖ್ಯ ಕಾರ್ಯದರ್ಶಿಗೆ ಸೂಚನೆ ನೀಡುವುದು ಅಚ್ಚರಿಯ ಸಂಗತಿಯೇ ಸರಿ. ಇದರಿಂದ ಸರ್ಕಾರದಲ್ಲಿ ಮುಖ್ಯಮಂತ್ರಿಯವರು ಸಂಪೂರ್ಣ ಅಧಿಕಾರವನ್ನುಹೊಂದಿಲ್ಲದಿರುವುದು ಕಂಡುಬರುತ್ತದೆ. ಅದನ್ನು ಹೊರತುಪಡಿಸಿ ಹೇಳುವುದಾದರೆ, ಸ್ಥಳ ನಿಯುಕ್ತಿಗೊಳಿಸದೆ ನೌಕರರು, ಅಧಿಕಾರಿಗಳನ್ನು ಕಡ್ಡಾಯ ಕಾಯುವಿಕೆಯಲ್ಲಿ ಇರಿಸಿ ವೇತನ ನೀಡುವುದು ಜನರ ತೆರಿಗೆಯ ದುರುಪಯೋಗ ವಷ್ಟೇ ಅಲ್ಲ, ಸರ್ಕಾರಿ ಕೆಲಸದಲ್ಲಿ ವಿಳಂಬಕ್ಕೆ ಕಾರಣವಾಗುತ್ತದೆ. ಅಸಾಧಾರಣ ಪ್ರಕರಣಗಳನ್ನು ಹೊರತುಪಡಿಸಿ ಈ ರೀತಿಯ ಘಟನೆಗಳು ಆಗಬಾರದು. ನಿರ್ಲಕ್ಷ್ಯ ಅಥವಾ ದುರುದ್ದೇಶದಿಂದ ಆದಲ್ಲಿ ಸಂಬಂಧಿಸಿದವರಿಂದ ನಷ್ಟ
ವಸೂಲು ಮಾಡಬೇಕು.

⇒ಕೆ.ಎಂ.ನಾಗರಾಜು, ಮೈಸೂರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.