ಶಬರಿಮಲೆ ದೇಗುಲಕ್ಕೆ ಮಹಿಳೆಯರ ಪ್ರವೇಶ ಕುರಿತಂತೆ ಸುಪ್ರೀಂ ಕೋರ್ಟ್‌ನ ಸಾಂವಿಧಾನಿಕ ಪೀಠದ ಮುಂದೆ ವಿಚಾರಣೆ ನಡೆಯುತ್ತಿದೆ. ‘ಯಾವುದೇ ದೇವಸ್ಥಾನದಲ್ಲಿ ಪಾಲಿಸಿಕೊಂಡು ಬರುತ್ತಿರುವ ಧರ್ಮದ ಆಚರಣೆಗಳ ಸ್ವರೂಪವು ಧರ್ಮದ ಅವಿಭಾಜ್ಯ ಅಂಗ; ಅವು ಧಾರ್ಮಿಕ ಆಚರಣೆಯೇ ಆಗಿರುತ್ತವೆ. ಅಂತಹ ಆಚರಣೆಗಳ ಮುಂದುವರಿಕೆ ಅತ್ಯಗತ್ಯ’ವೆಂದು ದೇಗುಲದ ಪರ ವಕೀಲರು ಸಮರ್ಥಿಸಿಕೊಂಡಿದ್ದಾರೆ. ಹಾಗಿದ್ದರೆ ಈ ಹಿಂದೆ ದೇವಸ್ಥಾನಗಳಲ್ಲಿ ಪಾಲಿಸಿಕೊಂಡು ಬರುತ್ತಿದ್ದ ದೇವದಾಸಿ ಪದ್ಧತಿ, ಬೆತ್ತಲೆ ಸೇವೆ, ಮಡೆಸ್ನಾನ, ಮತ್ತು ಸಿಡಿ ಆಚರಣೆಯಂತಹ ಅನಿಷ್ಟ ಪದ್ಧತಿಗಳನ್ನು ಧರ್ಮದ ಸ್ವರೂಪ ಎನ್ನಲು ಸಾಧ್ಯವೇ? ಅವುಗಳನ್ನು ಧರ್ಮದ ಅವಿಭಾಜ್ಯ ಅಂಗವೆಂದು ಪರಿಭಾವಿಸಬಹುದೇ? ಸಾಮಾಜಿಕ ಸಮಾನತೆಯಿಂದ ಮಹಿಳೆಯರನ್ನು ಪ್ರತ್ಯೇಕಿಸಲು ಸಾಧ್ಯವಿಲ್ಲ.