ಹತ್ತು ವರ್ಷದ ಆರ್ಥಿಕತೆಯ ಲಾಭ ಎಲ್ಲಿದೆ?

ಕೇಂದ್ರ ಸರ್ಕಾರ ನಿತ್ಯವೂ ಒಂದಿಲ್ಲೊಂದು ವಸ್ತುವಿನ ಬೆಲೆ ಏರಿಸುತ್ತಿದೆ. ಇದಕ್ಕೆ ನೀಡುವ ಕಾರಣ, ಗಡಿಯಾಚೆಗಿನ ಕೊಲ್ಲಿ ಯುದ್ಧ. ಎಲ್ಲಿಯೋ ನಡೆಯುವ ಯುದ್ಧದ ಪ್ರಸ್ತಾಪವಿಟ್ಟು ಬೆಲೆಯೇರಿಸಿ ಜನರ ಸಹಕಾರವನ್ನು ಸರ್ಕಾರ ಕೇಳುತ್ತಿದೆ. ಆದರೆ, ಪ್ರಧಾನಿ ನರೇಂದ್ರ ಮೋದಿಯವರು, ಕಳೆದ ಹತ್ತು ವರ್ಷಗಳಲ್ಲಿ ಭಾರತದ ಆರ್ಥಿಕತೆ ಬೆಳವಣಿಗೆಯ ಪ್ರಶ್ನೆ ಬಂದಾಗ ಅದು ಏರುಪೇರಾಗಿದ್ದರೂ ‘ಆರ್ಥಿಕತೆಯ ಸ್ಥಿತಿಗತಿ ಚೆನ್ನಾಗಿದೆ’ ಎಂದೇ ಹೇಳುತ್ತಾ ಬಂದಿದ್ದಾರೆ. ಹಾಗಿದ್ದರೆ ಈ ಹತ್ತು ವರ್ಷಗಳ ಲಾಭವನ್ನು ಈಗ ಬಳಸಲು ಅಡ್ಡಿಯಾದರೂ ಏನು? ಅದು ಏನೇ ಇರಲಿ; ಮೋದಿಯವರ ಅಧಿಕಾರಾವಧಿಯಲ್ಲಿ ಜನರು ಹಲವು ರೀತಿಯ ಆರ್ಥಿಕ ಬಿಕ್ಕಟ್ಟನ್ನು ನೋಡಿದ್ದಾರೆ. ಸರ್ಕಾರ ಜನರ ಮುಂದೆ ಈಗ ಗೋಗರೆಯುವುದರಲ್ಲಿ ಅರ್ಥವಿಲ್ಲ; ಇದು ಆಡಳಿತದ ವೈಫಲ್ಯವಲ್ಲದೆ ಬೇರೇನೂ ಅಲ್ಲ.

⇒ನಾಗಾರ್ಜುನ ಹೊಸಮನಿ, ಕಲಬುರಗಿ

ಹೆಸರು ಮಾರ್ಪಾಡು: ತರ್ಕವಿಲ್ಲದ ನಿಲುವು

ತುಮಕೂರು ಜಿಲ್ಲೆಯ ಹೆಸರನ್ನು ಬದಲಾಯಿಸಿ, ‘ಬೆಂಗಳೂರು ಉತ್ತರ’ ಎಂದು ಹೆಸರಿಸಲು ಜಿಲ್ಲಾ ಉಸ್ತುವಾರಿ ಸಚಿವ ಜಿ. ಪರಮೇಶ್ವರ ಅವರು ಮತ್ತೊಮ್ಮೆ ಪ್ರಸ್ತಾಪಿಸಿರುವುದು ವಿವೇಚನಾರಹಿತ ನಿಲುವಾಗಿದೆ. ಇದಕ್ಕೆ ಜಿಲ್ಲೆಯ ನಾಗರಿಕರ ವಿರೋಧವಿದೆ. ಜಿಲ್ಲೆಯು ಅಭಿವೃದ್ಧಿ ಹೊಂದಲು ಹೆಸರು ಬದಲಾಗಬೇಕಾಗಿಲ್ಲ; ರಾಜಕೀಯ ಇಚ್ಛಾಶಕ್ತಿ ಹಾಗೂ ಪ್ರಾಮಾಣಿಕ ಕಳಕಳಿ ಇದ್ದರೆ ಸಾಕು. ಬೇಕಾದಷ್ಟು ಅಭಿವೃದ್ಧಿ ಯೋಜನೆಗಳ ಅನುಷ್ಠಾನಕ್ಕೆ ನೀರೆರೆದು ಪೋಷಿಸಬಹುದು. ಅಧಿಕಾರದ ಬಲದಿಂದ ಈ ಹೊತ್ತಿನ ಲಾಭಕ್ಕಾಗಿ ಹೆಸರು ಬದಲಿಸುವುದರಿಂದ ತುಮಕೂರು ಜಿಲ್ಲೆಗಿರುವ ಪಾರಂಪರಿಕ ಹಿನ್ನೆಲೆ, ಇತಿಹಾಸಕ್ಕೆ ಪರಮ ಅನ್ಯಾಯ ಮಾಡಿದಂತಾಗುತ್ತದೆ. ದುಡುಕಿನ ನಿರ್ಧಾರ ಕೈಗೊಂಡರೆ ಭವಿಷ್ಯದಲ್ಲಿ ರಾಜಕೀಯ ಹಿನ್ನಡೆಗೂ ಕಾರಣವಾದೀತು.

⇒ಆರ್.ಎಸ್. ಅಯ್ಯರ್, ತುಮಕೂರು

ವ್ಯಗ್ರ ಬೀದಿನಾಯಿಗಳ ಉಪಟಳ ನಿಲ್ಲಲಿ

ವ್ಯಗ್ರ ನಾಯಿಗಳನ್ನು ಕೊಲ್ಲಲು ಸುಪ್ರೀಂ ಕೋರ್ಟ್ ಆದೇಶಿಸಿದೆ. ಬೀದಿನಾಯಿಗಳ ಉಪಟಳದಿಂದ ಬೇಸತ್ತಿರುವ ಜನರ ಪಾಲಿಗೆ ಈ ತೀರ್ಪು ಆಶಾಕಿರಣ. ರಾಜ್ಯದ ಎಲ್ಲ ನಗರ, ಪಟ್ಟಣ ಪ್ರದೇಶಗಳಲ್ಲಿ ನಾಯಿಗಳ ಹಾವಳಿ ಇದೆ. ಇವುಗಳ ದಾಳಿ
ಯಿಂದ ಹಲವು ಜನರು ಪ್ರಾಣ ಕಳೆದುಕೊಂಡಿದ್ದಾರೆ. ಅಪಾಯವನ್ನು ಉಂಟು ಮಾಡುವ ನಾಯಿಗಳ ನಿಯಂತ್ರಣಕ್ಕೆ ಸರ್ಕಾರ ಸರಿಯಾದ ವ್ಯವಸ್ಥೆ ರೂಪಿಸಿಲ್ಲ. ಹಾವಳಿ ನಿಯಂತ್ರಣಕ್ಕೆ ಸಂಬಂಧಿಸಿದಂತೆ ಸ್ಪಷ್ಟ ನಿಯಮಾವಳಿ ರೂಪಿಸಬೇಕಿದೆ.

⇒ಬಸಪ್ಪ ಎಸ್. ಮುಳ್ಳೂರ, ಹಲಗತ್ತಿ

ದುಬಾರೆ ಪ್ರಕರಣ: ವ್ಯವಸ್ಥೆಗೊಂದು ಪಾಠ

ದುಬಾರೆ ಪ್ರವಾಸಿ ತಾಣದಲ್ಲಿ ಆನೆಗಳ ಕಾಳಗದಿಂದ ಪ್ರವಾಸಿ ಮಹಿಳೆಯೊಬ್ಬರು ಪ್ರಾಣ ಕಳೆದುಕೊಂಡಿರುವುದು ಶೋಚನೀಯ ಸಂಗತಿ. ಆನೆಗಳಿಗೆ ಸ್ನಾನ ಮಾಡಿ
ಸುವ ಸ್ಥಳದಲ್ಲಿ ಅರಣ್ಯ ಇಲಾಖೆಯು ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಬೇಕಿತ್ತು. ಈಗ ಕೆಟ್ಟಮೇಲೆ ಬುದ್ಧಿ ಬಂತು ಎಂಬಂತೆ ಅನಾಹುತ ಘಟಿಸಿದ ಮೇಲೆ ನಿಯಮ
ಗಳನ್ನು ಜಾರಿಗೊಳಿಸಿದರೆ ಹೋದ ಪ್ರಾಣ ಮತ್ತೆ ಬರುತ್ತದೆಯೆ? ಪ್ರಾಣಿಗಳಿಗೂ ಸ್ವಚ್ಛಂದ ಬದುಕಿದೆ. ಅದನ್ನು ನಾವು ಗೌರವಿಸಬೇಕಿದೆ. ಗಿಜಿಗಿಡುವ ಜನಸಂದಣಿ
ಯಿಂದ ಅವುಗಳ ಏಕಾಗ್ರತೆ ತಪ್ಪಿ ಅನಾಹುತಗಳಿಗೆ ದಾರಿ ಮಾಡಿಕೊಡುತ್ತದೆ. ಇದನ್ನು ನಾವು ಅರಿಯಬೇಕು. ಈ ಪ್ರಕರಣವು ಪ್ರವಾಸಿಗರಿಗೆ ಪಾಠವಾಗಿದೆ.

⇒ಬೆಂ.ಮು. ಮಾರುತಿ, ಬೆಂಗಳೂರು

ಮೈಸೂರು ರಾಜರ ಕೊಡುಗೆ ಮರೆಯದಿರಿ

ಚಿತ್ರದುರ್ಗ ಜಿಲ್ಲೆಯ ನೀರಿನ ಕೊರತೆಯ ಪರಿಹಾರಕ್ಕಾಗಿ ಅಂದಿನ ರೀಜೆಂಟರಾದ ರಾಜಮಾತೆ ಕೆಂಪನಂಜಮ್ಮಣ್ಣಿಯವರು ಹಿರಿಯೂರು ತಾಲ್ಲೂಕಿನ ಮಾರಿಕಣಿವೆ ಬಳಿ ವೇದಾವತಿ ನದಿಗೆ ದೇಶದಲ್ಲೇ ಪ್ರಥಮ ಮಾನವ ನಿರ್ಮಿತ ಜಲಾಶಯ ನಿರ್ಮಿಸಿದರು. ಚಳ್ಳಕೆರೆ ತಾಲ್ಲೂಕಿನ ಮೀರಾಸಾಬಿಹಳ್ಳಿ ಬಳಿ 1907ರಲ್ಲಿ ಮತ್ತೊಂದು ಬೃಹತ್ ಕೆರೆ ಕಟ್ಟಿಸಿದರು. 1897–1907ರ ಅವಧಿಯಲ್ಲಿ ನೀರಿನ ಬವಣೆ ನೀಗಿಸಲು ಕೆಂಪನಂಜಮ್ಮಣ್ಣಿ, ಯುವರಾಜ ನಾಲ್ವಡಿ ಕೃಷ್ಣರಾಜ ಒಡೆಯರ್, ದಿವಾನರಾಗಿದ್ದ ಶೇಷಾದ್ರಿ ಅಯ್ಯರ್ ಹಾಗೂ ಮುಖ್ಯ ಎಂಜಿನಿಯರ್ ಅವರು ನೀಡಿದ ಕೊಡುಗೆ ಸ್ಮರಣೀಯವಾದುದು. ಪ್ರಸ್ತುತ ಭದ್ರಾ ಮೇಲ್ದಂಡೆ ಯೋಜನೆಯ ಕಾಮಗಾರಿಗಳು ಪ್ರಗತಿಯಲ್ಲಿವೆ. ಇದು ಮುಗಿಯುವ ಮುನ್ನವೇ ರಾಜಕೀಯ ಲಾಭ
ಕ್ಕಾಗಿ ಯೋಜನೆಗೆ ಹಲವರ ಹೆಸರಿಡುವಂತೆ ಸಭೆಗಳಲ್ಲಿ ಪ್ರಸ್ತಾಪಿಸುವುದು ಸರಿ
ಯಲ್ಲ. ಮೈಸೂರು ಅರಸರು ಮತ್ತು ಅಧಿಕಾರಿಗಳ ಹೆಸರನ್ನು ಯೋಜನೆಯ ಮುಖ್ಯ ಕಾಲುವೆ, ಪ್ರಮುಖ ಶಾಖಾ ಕಾಲುವೆಗಳಿಗೆ ನಾಮಕರಣ ಮಾಡುವುದು ಸೂಕ್ತ.

⇒ಎಂ.ಜಿ. ರಂಗಸ್ವಾಮಿ, ಹಿರಿಯೂರು

ಗ್ಯಾರಂಟಿ: ಹುಲಿಯ ಮೇಲಿನ ಸವಾರಿ'

ಇತ್ತೀಚೆಗೆ ನಡೆದ ಹಲವು ರಾಜ್ಯಗಳ ಚುನಾವಣೆಗಳಲ್ಲಿ ಗೆಲುವು ಸಾಧಿಸಿದ ಪಕ್ಷಗಳು ಆಶ್ವಾಸನೆ ಕೊಟ್ಟಂತೆ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ, ತಿಂಗಳಿಗಿಷ್ಟು ಹಣ, ಉಚಿತ ವಿದ್ಯುತ್ ಇತ್ಯಾದಿ ಜಾರಿಗೊಳಿಸಿವೆ. ಉಚಿತ ಭಾಗ್ಯಗಳಿಂದ ಕರ್ನಾಟಕ ಸೇರಿದಂತೆ ಆರ್ಥಿಕವಾಗಿ ಸೊರಗುತ್ತಿರುವ ರಾಜ್ಯಗಳಿಂದ ಈ ರಾಜ್ಯಗಳು ಪಾಠ ಕಲಿಯಬೇಕಿತ್ತು. ಅವು ಇನ್ನೂ ಹೆಚ್ಚು ಮಾಡುತ್ತಾ ಸಾಗಿವೆ. ಇದರಿಂದ ಅಭಿವೃದ್ಧಿ ಕಾರ್ಯಗಳಿಗೆ ಆರ್ಥಿಕ ಸಂಪನ್ಮೂಲದ ಕ್ರೋಡೀಕರಣಕ್ಕೆ ತೊಡಕಾಗಲಿದೆ. ಸರ್ಕಾರಗಳು ಖಜಾನೆ ತುಂಬಿಸಿಕೊಳ್ಳಲು ಎಲ್ಲೆಲ್ಲಿ ಸಾಧ್ಯವೋ ಅಲ್ಲೆಲ್ಲಾ ದರ ಹೆಚ್ಚಿಸುತ್ತಿವೆ. ಇದರಿಂದ ನಲುಗುವವರು ಜನರೇ ಹೊರತು ರಾಜಕಾರಣಿಗಳಲ್ಲ. ಗ್ಯಾರಂಟಿಗಳ ಅನುಷ್ಠಾನವು ಹುಲಿಯ ಮೇಲಿನ ಸವಾರಿ ಇದ್ದಂತೆ; ಇವು ಹೆಳವನಿಗೆ ಊರುಗೋಲಿನಂತೆ ಇರಬೇಕೇ ಹೊರತು ಎಲ್ಲರಿಗೂ ಅಲ್ಲ.

ಪತ್ತಂಗಿ ಎಸ್. ಮುರಳಿ, ಬೆಂಗಳೂರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.