ಕ್ರಿಕೆಟ್ ಸ್ಟೇಡಿಯಂ: ವನ್ಯಜೀವಿಗಳಿಗೆ ಕುತ್ತು

ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನದ ವ್ಯಾಪ್ತಿಯಲ್ಲಿ ₹900 ಕೋಟಿ ವೆಚ್ಚದ 80
ಸಾವಿರ ಆಸನಗಳ ಸಾಮರ್ಥ್ಯದ ಅಂತರರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣ ನಿರ್ಮಿ
ಸುವ ಪ್ರಸ್ತಾವ ಪರಿಸರ ವಿರೋಧಿಯಾದುದು. ಕಾವೇರಿ ಮತ್ತು ಮಲೆಮಹದೇಶ್ವರ ವನ್ಯಜೀವಿಧಾಮಗಳ ಕೊಂಡಿಯಂತಿರುವ ಈ ಸೂಕ್ಷ್ಮ ಪರಿಸರ ವಲಯದಲ್ಲಿ 100
ಎಕರೆ ಹಸಿರನ್ನು ಬಲಿಗೊಡುವುದು ವನ್ಯಜೀವಿಗಳ ಆವಾಸಸ್ಥಾನವನ್ನು ಸಂಪೂರ್ಣ
ವಾಗಿ ಧ್ವಂಸಗೊಳಿಸಲಿದೆ. 2020ರಲ್ಲಿ ಪರಿಸರ ಸೂಕ್ಷ್ಮ ವಲಯವನ್ನು 270 ಚದರ ಕಿ.ಮೀ.ನಿಂದ 150 ಚದರ ಕಿ.ಮೀ.ಗೆ ಕುಗ್ಗಿಸಿರುವುದು ಈಗಾಗಲೇ ಜೀವವೈವಿಧ್ಯಕ್ಕೆ ಕೊಡಲಿಪೆಟ್ಟು ನೀಡಿದೆ. ಮನರಂಜನೆಗಿಂತ ಪರಿಸರದ ಸಮತೋಲನ ಮುಖ್ಯ. ತೀವ್ರ ನಗರೀಕರಣ ಮತ್ತು ವಾಣಿಜ್ಯೀಕರಣದ ಈ ಹಪಹಪಿಗೆ ನ್ಯಾಯಾಲಯದಲ್ಲೂ ವಿರೋಧ ಇರುವಾಗ, ಸರ್ಕಾರ ತಕ್ಷಣ ಯೋಜನೆಯನ್ನು ಕೈಬಿಡಬೇಕು. ಪ್ರಕೃತಿ
ಯನ್ನು ಸಂರಕ್ಷಿಸುವುದು ಇಂದಿನ ತುರ್ತು. ಅಭಿವೃದ್ಧಿ ಹೆಸರಿನಲ್ಲಿ ಜೀವಸಂಕುಲದ ಮಾರಣಹೋಮ ನಿಲ್ಲಲಿ.

⇒ವಿಜಯಕುಮಾರ್ ಎಚ್.ಕೆ., ರಾಯಚೂರು

ಅಮೆರಿಕ ಉಪಾಧ್ಯಕ್ಷರ ಗೊಂದಲದ ಸ್ಥಿತಿ

‘ಇರಾನಿಯನ್ನರು ಏನು ಸಾಧಿಸಲು ಹೊರಟಿದ್ದಾರೆ ಎನ್ನುವುದನ್ನು ಅರಿಯುವುದೇ
ಕಷ್ಟವಾಗುತ್ತಿದೆ’ ಎಂದು ಅಮೆರಿಕದ ಉಪಾಧ್ಯಕ್ಷ ಜೆ.ಡಿ. ವ್ಯಾನ್ಸ್ ಅವರು ಹೇಳಿ
ದ್ದಾರೆ. ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರಿಗೂ ಈ ಮಾತು ಸರಿಹೊಂದುತ್ತದೆ.ಯುದ್ಧದ ಸಂದರ್ಭದಲ್ಲಿ ಅಮೆರಿಕ–ಇರಾನ್ ಒಪ್ಪಂದಕ್ಕಾಗಿ ಪ್ರಯತ್ನಿಸುತ್ತಿರುವ ವ್ಯಾನ್ಸ್ ಅವರ ಮನಃಸ್ಥಿತಿಯು ಈ ರೀತಿ ಗೊಂದಲಮಯವಾಗಿಬಿಟ್ಟಿದೆ. ಶ್ವೇತಭವನ
ದೊಳಗೆ ಅವರ ಪರಿಸ್ಥಿತಿ ಹೀಗಾದರೆ, ಅವರ ಸ್ವಂತ ಭವನದಲ್ಲಿ, ಅಂದರೆ ಮನೆ
ಯಲ್ಲಿಯಾದರೂ ಅವರಿಗೆ ನೆಮ್ಮದಿ ದೊರಕುತ್ತಿರಬಹುದು. ಏಕೆಂದರೆ ಅವರ ಪತ್ನಿ
ಭಾರತೀಯಳು. ಭಾರತೀಯ ಸ್ತ್ರೀಯರು ಶಾಂತಿ, ಸಹನೆ, ಸರಳತೆ, ನಿರಾಳತೆಗೆ ಹೆಸರಾದವರು ತಾನೆ?

⇒ಎಚ್. ಆನಂದರಾಮ ಶಾಸ್ತ್ರೀ, ಬೆಂಗಳೂರು

ದುಬಾರಿ ಶುಲ್ಕ ಬರೆ: ಪೋಷಕರು ಹೈರಾಣು

ಪ್ರಸ್ತುತ ರಾಜ್ಯದ ಶಾಲಾಕಾಲೇಜುಗಳಲ್ಲಿ ಪ್ರವೇಶಾತಿ ನಡೆಯುತ್ತಿದೆ. ಆದರೆ, ಅನೇಕ
ಶಾಲಾಕಾಲೇಜುಗಳಲ್ಲಿನ ದುಬಾರಿ ಶುಲ್ಕ ಭರಿಸಲಾಗದೆ ಪೋಷಕರು ಪರಿತಪಿಸು
ವಂತಾಗಿದೆ. ಅದರಲ್ಲೂ ಎರಡು, ಮೂರು ಮಕ್ಕಳಿರುವ ಪೋಷಕರ ಪಾಡು ಹೇಳ
ತೀರದು. ಬಹಳಷ್ಟು ಪ್ರತಿಷ್ಠಿತ ಶಿಕ್ಷಣ ಸಂಸ್ಥೆಗಳು ರಾಜಕಾರಣಿಗಳ ಒಡೆತನದಲ್ಲಿಯೇ ಇವೆ. ಅವರು ಪ್ರತಿನಿಧಿಸುವ ಜಾತಿಯ ಮಠಗಳ ಉಸ್ತುವಾರಿಯಲ್ಲಿಯೂ ಇವೆ. ಸರ್ಕಾರ ಸಭೆ ಕರೆದು ಏಕರೂಪದ ಶುಲ್ಕ ನಿಗದಿಗೆ ಕ್ರಮವಹಿಸಬೇಕಿದೆ.

⇒ಪ್ರೊ. ಟಿ. ನಾರಾಯಣಪ್ಪ, ಬೆಂಗಳೂರು

ನಂಜನಗೂಡಿಗೆ ‘ಗೌರಿ’ ಮರಳಿ ಬರುವಳೆ?

ನಂಜನಗೂಡಿನ ಶ್ರೀಕಂಠೇಶ್ವರ ದೇವಸ್ಥಾನದ ಪಟ್ಟದ ಆನೆ ‘ಗೌರಿ’ ಕಾಲಿನ ಗಾಯ ಹಾಗೂ ಅನಾರೋಗ್ಯದಿಂದ ಬಳಲುತ್ತಿತ್ತು. ಆ ಕಾರಣ 2017–2018ರಲ್ಲಿ ಬೆಂಗಳೂರಿನ ವನ್ಯಜೀವಿ ಸಂರಕ್ಷಣೆ ಮತ್ತು ಪುನರ್ವಸತಿ ಕೇಂದ್ರಕ್ಕೆ ಉತ್ತಮ ಹಾರೈಕೆ ಮತ್ತು ಹೆಚ್ಚಿನ ಚಿಕಿತ್ಸೆಗಾಗಿ ಅದನ್ನು ವರ್ಗಾಯಿಸಿದ್ದು ಸರಿಯಷ್ಟೇ. ಆದರೆ,
‘ಗೌರಿ’ಯನ್ನು ಇನ್ನೂ ವಾಪಸ್ ಕರೆತಂದಿಲ್ಲ. ಇದಕ್ಕೆ ಸೂಕ್ತ ಕಾರಣವೂ ತಿಳಿಯು
ತ್ತಿಲ್ಲ. ಸದ್ಯ ಆನೆ ಗುಣಮುಖವಾಗಿದ್ದು, ಚೆನ್ನಾಗಿದೆ ಎನ್ನುವ ಮಾಹಿತಿ ಇದೆ. ದೇವ
ಸ್ಥಾನದಲ್ಲಿ ನಿರಂತರವಾಗಿ ನಡೆಯುವ ಸಾಂಪ್ರದಾಯಿಕ ಕೈಂಕರ್ಯಗಳು, ಅಭಿಷೇಕ
ಕ್ಕಾಗಿ ಕಪಿಲಾ ನದಿಯಿಂದ ನೀರು ತರುವುದು; ಉತ್ಸವ, ಮೆರವಣಿಗೆಗಳಲ್ಲಿ ಬಳಕೆ
ಯಾಗುತ್ತಿತ್ತು. ‘ಗೌರಿ’ಯ ದರ್ಶನಕ್ಕೆ ಆಗಾಗ ಬರುತ್ತಿದ್ದ ಶಾಲಾ ಮಕ್ಕಳು, ಭಕ್ತರು ಈಗ ಅದನ್ನು ನೋಡಲಾಗದೆ ನಿರಾಸೆಯಿಂದ ತೆರಳುತ್ತಿದ್ದಾರೆ. ನಂಜನಗೂಡಿನ ಆಕರ್ಷಣೆಯಾಗಿದ್ದ ಅದನ್ನು ಆದ್ಯತೆಯ ಮೇರೆಗೆ ವಾಪಸ್ ಕರೆ ತರಬೇಕಿದೆ.

⇒ಅನಿಲ್ ಕುಮಾರ್, ನಂಜನಗೂಡು

ಸಾರ್ವಜನಿಕರ ತೆರಿಗೆ ಹಣ ಸದ್ಬಳಕೆ ಆಗಲಿ

ಇತ್ತೀಚಿನ ದಿನಗಳಲ್ಲಿ ರಾಜಕೀಯ ಪಕ್ಷಗಳು ಸ್ಪರ್ಧೆಗೆ ಬಿದ್ದಂತೆ ಜನರಿಗೆ ಉಚಿತ ಯೋಜನೆಗಳನ್ನು ಘೋಷಿಸುತ್ತಿವೆ. ವೋಟ್ ಬ್ಯಾಂಕ್ ರಾಜಕೀಯಕ್ಕಾಗಿ ತೆರಿಗೆ
ದಾರರ ಹಣವನ್ನು ಮನಸೋಇಚ್ಛೆ ವೆಚ್ಚ ಮಾಡುತ್ತಿರುವುದು ನೋವಿನ ಸಂಗತಿ. ತೆರಿಗೆ ಹಣದ ಸಿಂಹಪಾಲು ಶಿಕ್ಷಣ, ಆಸ್ಪತ್ರೆ ಸೇರಿದಂತೆ ಅಗತ್ಯ ಮೂಲಸೌಕರ್ಯ ಕಲ್ಪಿಸಲು ಬಳಕೆಯಾಗಬೇಕು. ಉಚಿತ ಯೋಜನೆ ಜಾರಿಗೊಳಿಸಿದರೂ ನೈಜ ಫಲಾನುಭವಿಗಳಿಗೆ ಸೌಲಭ್ಯ ತಲಪಿಸುವಂತಾಗಬೇಕು. ತೆರಿಗೆ ಹಣವನ್ನು ಯಾವ ಅಭಿವೃದ್ಧಿ ಕೆಲಸಗಳಿಗೆ ವಿನಿಯೋಗಿಸಬೇಕು ಎಂಬುದನ್ನು ತೆರಿಗೆದಾರರೇ ತೀರ್ಮಾನಿಸುವ ವ್ಯವಸ್ಥೆ ಜಾರಿಗೆ ಬರಬೇಕಿದೆ. ಇಂದಿನ ಕೃತಕ ಬುದ್ಧಿಮತ್ತೆ ಯುಗದಲ್ಲಿ ಇದನ್ನು ಅಳವಡಿಸುವುದು ಕಷ್ಟವೇನಲ್ಲ.

⇒ಶ್ರೀಕಾಂತ ಬನ್ನಿಗೋಳ್ಕರ, ಮುದಗಲ್ಲ

ಚಿನ್ನ: ಸುಂಕ ಕಡಿತ ವರ್ಷಕ್ಕೆ ಸೀಮಿತವೆ?

ಪ್ರಧಾನಿ ನರೇಂದ್ರ ಮೋದಿಯವರು ಚಿನ್ನ ಖರೀದಿಯನ್ನು ಒಂದು ವರ್ಷದ
ಮಟ್ಟಿಗೆ ಮುಂದೂಡುವಂತೆ ಮನವಿ ಮಾಡಿದ್ದಾರೆ. ಈ ಮನವಿ ಬಳಿಕ ಕೇಂದ್ರ ಸರ್ಕಾರ ಚಿನ್ನದ ಮೇಲಿನ ಮೂಲ ಆಮದು ಸುಂಕವನ್ನು ಹೆಚ್ಚಿಸಿದೆ. ಇದರಿಂದ ಮಾರುಕಟ್ಟೆಯಲ್ಲಿ ಚಿನ್ನದ ಧಾರಣೆ ಕೂಡ ಏರಿಕೆಯ ಹಾದಿ ಹಿಡಿದಿದೆ. ಸಂಕಷ್ಟದಲ್ಲಿ ಇಂಧನದ ಬೆಲೆ ಏರಿಕೆ ಅನಿವಾರ್ಯ. ಆದರೆ, ಚಿನ್ನದ ಮೇಲಿನ ಆಮದು ಸುಂಕ ಏರಿಕೆಯು ಸಮಂಜಸವಲ್ಲ. ಮದುವೆ ಮುಂತಾದ ಅನಿವಾರ್ಯ ಕಾರ್ಯಗಳಿಗೆ ಖರೀದಿ ಮಾಡಲು ಆಗದಂತೆ ಸುಂಕ ಏರಿಸಿದ್ದು ಸಮರ್ಥನೀಯವಲ್ಲ. ನಾಗರಿಕರು ಖರೀದಿ ಕಡಿಮೆ ಮಾಡಿದರೂ ಸರ್ಕಾರದ ವರಮಾನ ಮಾತ್ರ ಕಡಿಮೆ ಆಗಬಾರದು ಎಂಬ ಧೋರಣೆ ಇದರ ಹಿಂದಿದೆ. ಒಂದು ವರ್ಷದ ನಂತರ ಏರಿಸಿರುವ ಸುಂಕವನ್ನು ಕಡಿಮೆ ಮಾಡುವ ಬಗ್ಗೆ ಪ್ರಧಾನಿಯವರು ಆಶ್ವಾಸನೆ ನೀಡುವರೆ?

ಕೆ.ಎಂ. ನಾಗರಾಜು, ಮೈಸೂರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.