ಪಠ್ಯಪುಸ್ತಕ, ಸಮವಸ್ತ್ರ ಸಕಾಲಕ್ಕೆ ತಲಪಲಿ

ಈ ತಿಂಗಳ ಕೊನೆಯಲ್ಲಿ ವಿದ್ಯಾರ್ಥಿಗಳು ಶಾಲೆಗಳಿಗೆ ಮರಳಿ ಹಾಜರಾಗುತ್ತಾರೆ. ಅವರನ್ನು ಸಂತೋಷದಿಂದ ಬರಮಾಡಿಕೊಳ್ಳುವುದು ನಮ್ಮ ಕರ್ತವ್ಯ. ಆದರೆ, ಪ್ರತಿ ವರ್ಷವೂ ಜೂನ್ ಅಂತ್ಯದವರೆಗೂ ಪಠ್ಯಪುಸ್ತಕಗಳು ಹಾಗೂ ಸಮವಸ್ತ್ರ ದೊರೆಯುವುದಿಲ್ಲ. ಕೆಲವೊಂದು ಪುಸ್ತಕಗಳು ಬಂದರೆ, ಇನ್ನುಳಿದ ಪುಸ್ತಕಗಳು ಬಂದಿರುವುದಿಲ್ಲ. ಇದರಿಂದ ಶಿಕ್ಷಕರು ಬೋಧಿಸಲು ತೊಡಕಾಗುತ್ತದೆ; ವಿದ್ಯಾರ್ಥಿ
ಗಳಿಗೂ ತೊಂದರೆಯಾಗುತ್ತದೆ. ಈ ಸಮಸ್ಯೆ ಪ್ರತಿವರ್ಷವೂ ಮುಂದುವರಿಯು
ವುದು ಸಾಮಾನ್ಯ ಎನ್ನುವಂತಾಗಿದೆ. ಪ್ರಸಕ್ತ ಶೈಕ್ಷಣಿಕ ವರ್ಷದಲ್ಲಿಯಾದರೂ ಪಠ್ಯ ಪುಸ್ತಕಗಳು ಹಾಗೂ ಸಮವಸ್ತ್ರ ಸಕಾಲದಲ್ಲಿ ಮಕ್ಕಳ ಕೈ ಸೇರಲಿ.

⇒ಪ್ರೇಮಾನಂದ ಹಿರೇಮಠ, ಜಮಖಂಡಿ

ಗ್ರಾಮೀಣ ಕೃಪಾಂಕ ಮರುಜಾರಿಗೊಳಿಸಿ

ರಾಜ್ಯ ಸರ್ಕಾರವು 56,432 ಸರ್ಕಾರಿ ಹುದ್ದೆಗಳ ಭರ್ತಿಗೆ ಮುಂದಾಗಿದೆ. ಭರ್ತಿಯ ವೇಳೆ ಗ್ರಾಮೀಣ ಹಾಗೂ ನಗರ ಪ್ರದೇಶದ ಅಭ್ಯರ್ಥಿಗಳಿಗೆ ಒಂದೇ ಮಾನದಂಡ ಅನುಸರಿಸಿದರೆ, ಗ್ರಾಮೀಣ ಅಭ್ಯರ್ಥಿಗಳಿಗೆ ತೀರಾ ಅನ್ಯಾಯವಾಗಲಿದೆ. ಏಕೆಂದರೆ, ನಗರಗಳಲ್ಲಿ ಓದಿದವರೊಟ್ಟಿಗೆ ಗ್ರಾಮೀಣ ವಿದ್ಯಾರ್ಥಿಗಳು ಪೈಪೋಟಿ ನಡೆಸುವುದು ಕಷ್ಟಕರ. 1991–92ರಲ್ಲಿ ಅಂದಿನ ಮುಖ್ಯಮಂತ್ರಿ ಎಸ್. ಬಂಗಾರಪ್ಪನವರು
ಶೇ 15ರಷ್ಟು ಗ್ರಾಮೀಣ ಕೃಪಾಂಕ ನೀಡಿದ್ದರು. ಇದರಿಂದ ಲಕ್ಷಾಂತರ ಗ್ರಾಮೀಣ ವಿದ್ಯಾರ್ಥಿಗಳು ಘನತೆಯಿಂದ ಬದುಕು ಕಟ್ಟಿಕೊಳ್ಳಲು ಸಾಧ್ಯವಾಯಿತು. ಅದೇ ಮಾದರಿಯಲ್ಲಿಯೇ ರಾಜ್ಯ ಸರ್ಕಾರವು ನೇರ ನೇಮಕಾತಿಯಲ್ಲಿ ಗ್ರಾಮೀಣ ಕೃಪಾಂಕ ನೀಡುವ ಪದ್ಧತಿಯನ್ನು ಮರುಜಾರಿಗೊಳಿಸಲಿ.

⇒ವಡ್ನಾಳ್ ಅಂಜನ್ಕುಮಾರ್ ಜಿ., ಚನ್ನಗಿರಿ

ಜೀವ ಖಜಾನೆಗಳಿಗೆ ಭೂಗಳ್ಳರಿಂದ ಕನ್ನ

ಬೆಂಗಳೂರಿನ ಬೆಳವಣಿಗೆಯ ಕಾರಣದಿಂದಾಗಿ ಉದ್ಯಾನನಗರಿಯಲ್ಲಿ ಇರುವ ಪಕ್ಷಿಸಂಕುಲ, ಕೆರೆ–ಕಟ್ಟೆ ಹಾಗೂ ಮರ–ಗಿಡಗಳು ವಿನಾಶದ ಅಂಚಿಗೆ ತಲಪಿವೆ. ಸಾವಿರಾರು ಕೆರೆಗಳ ಆಶ್ರಯತಾಣ ಆಗಿದ್ದ ಬೆಂಗಳೂರು ನಗರೀಕರಣದ ನೆಪದಲ್ಲಿ ಸಂಪೂರ್ಣವಾಗಿ ಕಾಂಕ್ರೀಟ್ ಮಯವಾಗಿದೆ. ಪರಿಸರವನ್ನು ಉಳಿಸುವ ಬೆಳೆಸುವ ಜವಾಬ್ದಾರಿ ಸರ್ಕಾರ, ಜನಪ್ರತಿನಿಧಿಗಳು, ಸ್ಥಳೀಯ ಸಂಘ–ಸಂಸ್ಥೆಗಳು ಮತ್ತು ನಾಗರಿಕರ ಆದ್ಯ ಕರ್ತವ್ಯವಾಗಿದೆ. ಇದಕ್ಕೆ ಪೂರಕವಾಗಿ ಹೂಳಿನಿಂದ ತುಂಬಿದ್ದ ನಾಗವಾರ ಕೆರೆಯ ಪುನಶ್ಚೇತನಕ್ಕೆ ಸರ್ಕಾರ ಮುಂದಾಗಿರುವುದು ಶ್ಲಾಘನೀಯ. ಬೆಂಗಳೂರು ಸೇರಿದಂತೆ ರಾಜ್ಯದ ವಿವಿಧೆಡೆ ಭೂಗಳ್ಳರು ಕೆರೆಗಳನ್ನು ಒತ್ತುವರಿ ಮಾಡಿಕೊಂಡಿದ್ದಾರೆ. ಅದನ್ನು ತೆರವುಗೊಳಿಸಿ ಪುನಶ್ಚೇತನಕ್ಕೆ ಒತ್ತು ನೀಡಬೇಕಿದೆ.

⇒ಪಟ್ಟಡಿ ಎ. ಬಸವರಾಜ್, ಬೆಂಗಳೂರು

ಕೌಶಲ ಆಧಾರಿತ ಕೋರ್ಸ್ಗಳು ಹೆಚ್ಚಲಿ

ಜಗತ್ತು ತಂತ್ರಜ್ಞಾನದಲ್ಲಿ ಮುಂದುವರಿದಂತೆಲ್ಲ ಅಂಕಗಳು ಮೌಲ್ಯ ಕಳೆದುಕೊಳ್ಳು
ತ್ತಿವೆ. ವಿದ್ಯಾರ್ಥಿಗಳ ಕೌಶಲಗಳಿಗಷ್ಟೆ ಬೆಲೆ ಸಿಗುವಂತಾಗುತ್ತಿದೆ. ಇದು ಒಳ್ಳೆಯ ಬೆಳವಣಿಗೆಯೇ ಸರಿ. ಆದರೆ, ಇದಕ್ಕೆ ತಕ್ಕಂತೆ ಸರ್ಕಾರಿ ಕಾಲೇಜುಗಳಲ್ಲಿ ಕೌಶಲ ಆಧಾರಿತ ಕೋರ್ಸ್ಗಳೂ ಹೆಚ್ಚಬೇಕಲ್ಲವೆ? ಪಿಯುಸಿ ಮತ್ತು ಪದವಿ ಹಂತದಲ್ಲಿಯೇ ಕೃತಕ ಬುದ್ಧಿಮತ್ತೆ, ಡಿಜಿಟಲ್ ಮೀಡಿಯಾದಂತಹ ಕೋರ್ಸ್ಗಳ ಪರಿಚಯಕ್ಕೆ ಉನ್ನತ ಶಿಕ್ಷಣ ಇಲಾಖೆಯು ಒತ್ತು ನೀಡಬೇಕಿದೆ. ಅದರಲ್ಲೂ ಬಿಎ ಪದವಿ ಓದುವ ವಿದ್ಯಾರ್ಥಿಗಳಿಗೆ ಕೌಶಲ ಆಧಾರಿತ ಕೋರ್ಸ್ಗಳ ಅಗತ್ಯ ಹೆಚ್ಚಿದೆ. ಏಕೆಂದರೆ, ಕೌಶಲದ ಅಭಾವದಿಂದಾಗಿ ಹಲವಾರು ಕಾಲೇಜುಗಳಲ್ಲಿ ತಾಂತ್ರಿಕ ಜ್ಞಾನಕ್ಕಿಂತ ಸೈದ್ಧಾಂತಿಕ ಜ್ಞಾನಕ್ಕೆ ಹೆಚ್ಚು ಒತ್ತು ನೀಡಲಾಗುತ್ತಿದೆ. ಇಂದಿನ ಸ್ಪರ್ಧಾತ್ಮಕ ಜಗತ್ತು ತಾಂತ್ರಿಕ ಜ್ಞಾನದ ಕೌಶಲವನ್ನು ಹೆಚ್ಚಾಗಿ ಬೇಡುತ್ತದೆ.

⇒ಗಾನವಿ ಎಚ್.ಆರ್., ತಿಪಟೂರು

ಮೆಡಿಕಲ್ ಕಾಲೇಜು ಹೊಸಪೇಟೆಗೇಕಿಲ್ಲ?

ರಾಜ್ಯ ಸರ್ಕಾರವು ರಾಮನಗರ, ಕನಕಪುರ ಮತ್ತು ಬಾಗಲಕೋಟೆಯಲ್ಲಿ ಹೊಸ
ದಾಗಿ ಮೂರು ಸರ್ಕಾರಿ ವೈದ್ಯಕೀಯ ಕಾಲೇಜುಗಳ ಆರಂಭಕ್ಕೆ ಅನುಮತಿ ಕೋರಿ ರಾಷ್ಟ್ರೀಯ ವೈದ್ಯಕೀಯ ಆಯೋಗಕ್ಕೆ ಪ್ರಸ್ತಾವ ಸಲ್ಲಿಸಿರುವುದು ಸರಿಯಷ್ಟೆ. ಆದರೆ, ಹೊಸ ಜಿಲ್ಲೆ ರಚನೆಯಾಗಿ ಐದು ವರ್ಷಗಳಾದರೂ ವೈದ್ಯಕೀಯ ಮೂಲಸೌಲಭ್ಯ
ಗಳಿಂದ ವಂಚಿತವಾಗಿರುವ ವಿಜಯನಗರವನ್ನು (ಹೊಸಪೇಟೆ) ಕಡೆಗಣಿಸಿ
ರುವುದು ಸರಿಯಲ್ಲ. ಈ ಭಾಗದಲ್ಲಿ ಹೆಚ್ಚಾಗಿ ಗಣಿಗಾರಿಕೆ, ಕೈಗಾರಿಕೆ, ಕೃಷಿ ಸಂಬಂಧಿತ ವೃತ್ತಿಯಿಂದಾಗಿ ಅಪಘಾತಗಳ ಪ್ರಮಾಣ ಹೆಚ್ಚಿದೆ. ಹೊಸಪೇಟೆಯಲ್ಲಿ ಸುಸಜ್ಜಿತ ಸರ್ಕಾರಿ ಆಸ್ಪತ್ರೆಯ ಕೊರತೆಯಿದೆ. ಸಕಾಲದಲ್ಲಿ ಚಿಕಿತ್ಸೆ ದೊರೆಯದೆ ಜನರ ಸಾವಿನ ಪ್ರಮಾಣ ಅಧಿಕವಾಗತೊಡಗಿದೆ. ಈ ಜಿಲ್ಲೆಗೆ ಜಿಲ್ಲಾ ಖನಿಜ ನಿಧಿ ಮತ್ತು ಕರ್ನಾಟಕ ಗಣಿ ಪ್ರದೇಶ ಪುನಶ್ಚೇತನ ನಿಗಮದ ವಿಶೇಷ ಅನುದಾನ ದೊರೆಯುತ್ತದೆ. ಆ ಹಣ ಬಳಸಿಕೊಂಡು ವೈದ್ಯಕೀಯ ಕಾಲೇಜನ್ನು ಸ್ಥಾಪಿಸಬೇಕಿದೆ.

⇒ವೈ. ಯಮುನೇಶ್, ಹೊಸಪೇಟೆ

ಧಾರವಾಡವನ್ನು ಕಾಡುತ್ತಿದೆ ತಬ್ಬಲಿತನ

ಅಭಿವೃದ್ಧಿಯಲ್ಲಿ ಹಿನ್ನಡೆ ಅನುಭವಿಸುತ್ತಿರುವ ಧಾರವಾಡ ನಗರ ಈಗಲೂ ಹೋಬಳಿ ಕೇಂದ್ರದಂತೆ ಕಾಣುತ್ತಿದೆ. ಅವಳಿ ನಗರಗಳ ಕ್ರೋಡೀಕೃತ ಸಂಪನ್ಮೂಲವು ಸೂಕ್ತ ಹಂಚಿಕೆ ಕಾಣದೆ, ಮಲತಾಯಿ ಧೋರಣೆಗೆ ಈಡಾಗಿ
ನಲುಗುತ್ತಿರುವ ಧಾರವಾಡದ ಅಭಿವೃದ್ಧಿ ಅಗತ್ಯವಾಗಿದೆ. ವಿಶಿಷ್ಟ ಸಾಂಸ್ಕೃತಿಕ, ಪಾರಂಪರಿಕ, ಸಾಹಿತ್ಯ, ಕಲೆ, ಸಂಗೀತ, ನೃತ್ಯ, ರಂಗಭೂಮಿ, ನಾಡು–ನುಡಿ ಹೋರಾಟ ಇತ್ಯಾದಿಯಲ್ಲಿ ತನ್ನದೇ ಆದ ಛಾಪು ಹೊಂದಿರುವ ಧಾರವಾಡ ಇಂದು ಒಳರಾಜಕೀಯ, ಸಣ್ಣತನದಿಂದ ತನ್ನ ಅಸ್ಮಿತೆ ಕಳೆದು
ಕೊಂಡಿರುವಂತೆ ಭಾಸವಾಗುತ್ತಿದೆ. ಸಾಂಕೇತಿಕವಾಗಿ ‘ಧಾರವಾಡ ಮಹಾ
ನಗರ ಪಾಲಿಕೆ’ ಎಂಬ ಫಲಕವನ್ನು ಹು.ಧಾ.ಮ.ಪಾ. ಆಡಳಿತ ಕಚೇರಿ ಮೇಲೆ ಅಳವಡಿಸಿ ಪ್ರತಿರೋಧ ವ್ಯಕ್ತಪಡಿಸಲಾಗಿದೆ. ಸಾಂವಿಧಾನಿಕ ಹುದ್ದೆಯ ಅಲಂಕೃತ ಮಹೋದಯರು ಸೂಕ್ತ ನಿರ್ಧಾರ ಕೈಗೊಳ್ಳಲು ಬಿನ್ನಹ.

ರಾಮಚಂದ್ರ ಎಸ್. ಕುಲಕರ್ಣಿ, ಧಾರವಾಡ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.