ಶಾಲೆಯಲ್ಲಿ ಕನ್ನಡ ಪತ್ರಿಕೆ ಓದು ಕಡ್ಡಾಯ

ಶಾಲೆಗಳಲ್ಲಿ ಪ್ರತಿದಿನ ಹತ್ತು ನಿಮಿಷ ಕನ್ನಡ ದಿನಪತ್ರಿಕೆ ಓದುವುದನ್ನು ಕಡ್ಡಾಯಗೊಳಿಸಿರುವ ಶಾಲಾ ಶಿಕ್ಷಣ ಇಲಾಖೆಯ ನಿರ್ಧಾರ ಒಳ್ಳೆಯದು. ಈಗಾಗಲೇ, ಉತ್ತರಪ್ರದೇಶ ಸರ್ಕಾರ ಇಂಥ ಆದೇಶ ಹೊರಡಿಸಿದೆ. ರಾಜ್ಯದ ಕೆಲವು ಶಾಲೆಗಳಲ್ಲೂ ವಿದ್ಯಾರ್ಥಿಗಳು ಪ್ರಾರ್ಥನೆಗೆ ನಿಂತಾಗ ಪತ್ರಿಕೆಯ ಮುಖ್ಯಾಂಶಗಳನ್ನು ವಿದ್ಯಾರ್ಥಿಯೊಬ್ಬ ಓದುವ ಮತ್ತು ಉಳಿದವರು ಅದನ್ನು ಕೇಳಿಸಿಕೊಳ್ಳುವ ಕ್ರಮ ಹಿಂದಿನಿಂದಲೂ ಜಾರಿಯಲ್ಲಿದೆ. ಶಾಲೆಯ ಗಂಟೆ ಮೊಳಗಿದ ತಕ್ಷಣ ಮಕ್ಕಳೆಲ್ಲ ಪ್ರಾರ್ಥನೆಗೆ ಸೇರುತ್ತಾರೆ. ಆನಂತರ ರಾಷ್ಟ್ರಗೀತೆ, ನಾಡಗೀತೆ, ಸಂವಿಧಾನದ ಪೀಠಿಕೆ ಓದು, ಪತ್ರಿಕೆಗಳ ಓದು, ಮುಖ್ಯೋಪಾಧ್ಯಾಯರು ಆಟ–ಪಾಠ ಕುರಿತು ಮಾತನಾಡ ಬೇಕಾಗುತ್ತದೆ. ಈ ಕ್ರಮ ಎಲ್ಲ ಶಾಲೆಗಳಲ್ಲೂ ಜಾರಿಗೆ ಬರಲಿ.

-ಸಿ. ಚಿಕ್ಕತಿಮ್ಮಯ್ಯ ಹಂದನಕೆರೆ, ಬೆಂಗಳೂರು

ಸಾಮಾಜಿಕ ಹಿಂಚಲನೆ ಮಾತು ಸರಿಯಲ್ಲ

‘ಮಹಿಳೆಯರು ಪಿತ್ರಾರ್ಜಿತ ಆಸ್ತಿಯಲ್ಲಿ ಪಾಲು ಕೇಳುತ್ತಿದ್ದಾರೆ. ಇದರಿಂದ ಕುಟುಂಬ
ಗಳು ಒಡೆಯುತ್ತಿವೆ; ಜನಹಿತಕ್ಕೆ ವಿರುದ್ಧವಾದ ಕಾಯ್ದೆ ಹಿಂಪಡೆಯಬೇಕು’ ಎಂದು ತರಳಬಾಳು ಮಠದ ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಹೇಳಿದ್ದಾರೆ. ಗಂಡನ ಮನೆಯವರ ದೌರ್ಜನ್ಯ ಹಾಗೂ ವರದಕ್ಷಿಣೆಗಾಗಿ ಸುಟ್ಟು ಕರಕಲಾದ ಹೆಣ್ಣುಮಕ್ಕಳ ಸಂಖ್ಯೆ ಎಷ್ಟೆಂದು ಸ್ವಾಮೀಜಿಯವರಿಗೆ ಅಂದಾಜಿಸಲು ಆಗಿಲ್ಲ ಎನಿಸುತ್ತದೆ. ಹೆಣ್ಣಿನಕೊನೆ ಮೊದಲಿಲ್ಲದ ಸಂಕಟಗಳಿಗೆ ಕಾರಣವಾಗಿರುವ ಮದುವೆಗಳ ಬಗ್ಗೆ ಸ್ವಾಮೀಜಿಯವರು ಸುಧಾರಣೆಯ ಅಭಿಪ್ರಾಯ ನೀಡಿ ಸಮಾಜದ ಮುಂಚಲನೆಗೆ ಸಹಕರಿಸಬೇಕು. ಮಹಿಳೆಯರೂ ಮಾನವರು ಎಂದು ಭಾವಿಸುವ ಯಾರೊಬ್ಬರೂ ಕಾನೂನನ್ನು ಹಿಂಪಡೆಯುವ ಮಾತನಾಡಬಾರದು. ಸಾಮಾಜಿಕ ಹಿಂಚಲನೆ ಬಗ್ಗೆ ಮಾತನಾಡುವಾಗ ಹೆಣ್ಣು–ಗಂಡಿನ ಸ್ಥಾನಮಾನದ ಸ್ಥಿತಿಗತಿ ಬಗ್ಗೆ ಆಲೋಚಿಸಬೇಕಲ್ಲವೆ?

-ಸರೋಜ ಎಂ.ಎಸ್., ಸಾಗರ

ಕಲ್ಯಾಣ ಕರ್ನಾಟಕ: ವಿವೇಕ, ಆತ್ಮಸಿದ್ಧಿ

‘ಕಲಬುರಗಿ ವಿವೇಕಕ್ಕೆ ಎಣೆಯುಂಟೆ?’ ಬರಹ (ಲೇ: ರಘುನಾಥ ಚ.ಹ., ಪ್ರ.ವಾ., ಏ. 25) ಮನಮೀಟುವಂತಿದೆ. ಬರಹದ ಕಟ್ಟಕಡೆಯಲ್ಲಿ, ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳು ಸ್ಪರ್ಧಾತ್ಮಕ ಶಿಕ್ಷಣ ಹಾಗೂ ವ್ಯಾಪಾರ–ವಹಿವಾಟಿನ ಕ್ಷೇತ್ರಗಳಲ್ಲಿ ‘ಜಾಣತನ’ವನ್ನು ತೋರಿದರೂ ಸಾಮಾಜಿಕ ಸಾಮರಸ್ಯದ ನೆಲೆಯಲ್ಲಿ ಆತ್ಮವಿನಾಶ ಮಾಡಿಕೊಂಡಿರುವುದನ್ನು ಗುರ್ತಿಸುತ್ತ, ಅದರ ಎದುರಿಗೆ, ಆ ಅದೇ ಸಾಮರಸ್ಯದ ವಿಷಯದಲ್ಲಿ ಕಲ್ಯಾಣ ಕರ್ನಾಟಕವು ತೋರುವ ವಿವೇಕ ಮತ್ತು ಆತ್ಮಸಿದ್ಧಿಯನ್ನು ಎತ್ತಿಹಿಡಿದಿರುವುದಂತೂ ಮಾರ್ಮಿಕವಾಗಿದೆ; ಹೌದಲ್ಲ... ಎಂದು ನಾವೆಲ್ಲರೂ ನಮ್ಮ ನಾವು ನೋಡಿಕೊಳ್ಳಲು ದೂಡುತ್ತದೆ. ಖರ್ಗೆ ಕುಟುಂಬದವರನ್ನೂ ಕಲಬುರಗಿಯ ಜನರನ್ನೂ ಹಂಗಿಸುತ್ತಿರುವ ಟ್ರೋಲ್ಗಳು, ಹಾಗೂ ಅವರ ಹಿಂದೆಯಿರುವ ‘ಸಂಘ’ದ ಶಕ್ತಿಗಳು, ಬರಹದ ಅದೊಂದು ಮಾತನ್ನಾದರೂ ಮನಸ್ಸಿಗೆ ತಂದುಕೊಂಡು, ದಶಕಗಳ ಹಿಂದೆ ಕರಾವಳಿಯ ಆ ಜಿಲ್ಲೆಗಳಲ್ಲಿಯೂ ಇದ್ದೊಂದು ವಿವೇಕವು ನಾಶವಾದ್ದಕ್ಕೆ ತಾವು ಹೇಗೆ ಕಾರಣಕರ್ತರಾದೆವು ಅನ್ನುವುದು ಕಾಣಬೇಕು, ಆತ್ಮಶುದ್ಧಿ ಮಾಡಿಕೊಳ್ಳಬೇಕು.

ತಿರುತಿರುಗಿ ನೆನಪಾಗುವ ಒಂದು ಪ್ರಸಂಗ: ನಲವತ್ತು ವರ್ಷಗಳ ಹಿಂದೆ ಕಲಬುರಗಿಯ ಬಂದೇ
ನವಾಜ್ ದರ್ಗಾಕ್ಕೆ ಹೋಗಿ ಅಲ್ಲಿಯ ಮೌಲಾನಾ ಅವರೊಡನೆ ನೆಲದ ಮೇಲೆ ಕೂತು ಮಾತನಾಡುತ್ತ ಹಲವು ಗಂಟೆಗಳ ಕಾಲ ಕಳೆದೆ. ವಿಶಾಲವಾದ ಆ ದರ್ಗಾದಲ್ಲಿ ಆಗ ಎಲ್ಲೆಲ್ಲೂ ಮರಗಳು, ನೆರಳು, ತಂಪು. ಬಿಸಿಲನಾಡಿನಲ್ಲಿದ್ದೇನೆ ಎಂದನ್ನಿಸಲೇ ಇಲ್ಲ. ಆ ಪರಿಸರ ಎಷ್ಟು ತಂಪಾಗಿತ್ತೋ ಮೌಲಾನಾ ಅವರ ಮಾತು ಕೂಡ ಅಷ್ಟೇ ತಂಪು, ಅಷ್ಟೇ ಆಪ್ಯಾಯಮಾನವಾಗಿತ್ತು.

-ರಘುನಂದನ, ಬೆಂಗಳೂರು

ಪರ್ಯಾಯ ಬೆಳೆ: ತಂಬಾಕು ರೈತರ ಸಂಕಟ

ಬೆಲೆ ಕುಸಿತದಿಂದ ತಂಬಾಕು ಬೆಳೆಗಾರರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಮತ್ತೊಂದೆಡೆ ತಂಬಾಕು ಮಂಡಳಿಯು ಮುಂದಿನ ವರ್ಷದಿಂದ ತಂಬಾಕು ಉತ್ಪಾದನೆಯನ್ನು ಕಡಿತಗೊಳಿಸಿ ಆದೇಶಿಸಿದೆ. ಪರ್ಯಾಯ ಬೆಳೆ ಬೆಳೆಯುವಂತೆ ಎಲ್ಲರೂ ರೈತರನ್ನು ಮನವೊಲಿಸುತ್ತಿದ್ದಾರೆ. ಆದರೆ, ಯಾರೊಬ್ಬರೂ ಸೂಕ್ತ ಪರ್ಯಾಯ ಬೆಳೆಯ ಬಗ್ಗೆ ಮಾರ್ಗದರ್ಶನ ನೀಡಲು ಪ್ರಾಮಾಣಿಕ ಪ್ರಯತ್ನ ಮಾಡುತ್ತಿಲ್ಲ. ಮೈಸೂರು ಮತ್ತು ಹಾಸನ ಜಿಲ್ಲೆಗಳಲ್ಲಿ ತಂಬಾಕು ಹೆಚ್ಚಾಗಿ ಬೆಳೆಯಲಾಗುತ್ತದೆ. ತಂಬಾಕಿಗೆ ಪರ್ಯಾಯವಾಗಿ ಈ ತಾಲ್ಲೂಕುಗಳಲ್ಲಿ ರೇಷ್ಮೆ ಕೃಷಿಯನ್ನು ಉತ್ತೇಜಿಸಬಹುದಾಗಿದೆ.

-ನಟರಾಜ ಎಂ. ಜವನಿಕುಪ್ಪೆ, ಪಿರಿಯಾಪಟ್ಟಣ

ಎಸ್ಎಸ್ಎಲ್ಸಿ: ಹಗ್ಗಜಗ್ಗಾಟ ಏಕೆ?

ದ್ವಿತೀಯ ಪಿಯುಸಿ ಮತ್ತು ಎಸ್ಎಸ್ಎಲ್ಸಿ ಪರೀಕ್ಷೆಯ ಫಲಿತಾಂಶದಲ್ಲಿ ಕಲಬುರಗಿ ಜಿಲ್ಲೆ ಕೊನೆಯ ಸ್ಥಾನದಲ್ಲಿದೆ. ಇದು ರಾಜಕೀಯ ನಾಯಕರ ವಾಗ್ಯುದ್ಧಕ್ಕೆ ಕಾರಣವಾಗಿದೆ. ಬಿಜೆಪಿ ನಾಯಕರು ಸಚಿವ ಪ್ರಿಯಾಂಕ್ ಖರ್ಗೆ ಅವರನ್ನು ಟೀಕಿಸುವ ಭರದಲ್ಲಿ ಕಲಬುರಗಿ ಭಾಗದ ಮಕ್ಕಳ ಬೌದ್ಧಿಕ ಸಾಮರ್ಥ್ಯವನ್ನು ಅಲ್ಲಗಳೆಯುತ್ತಿದ್ದಾರೆ. ಬಿಜೆಪಿ ಸರ್ಕಾರವಿದ್ದಾಗಲೂ ಕಲಬುರಗಿ ಕೊನೆಯ ಸ್ಥಾನಕ್ಕೆ ಸೀಮಿತವಾಗಿತ್ತು. ಆಗ ಕಲಬುರಗಿ ಜಿಲ್ಲೆಯ ಉಸ್ತುವಾರಿ ಹೊತ್ತವರು ಗೋವಿಂದ ಕಾರಜೋಳ ಹಾಗೂ ಮುರುಗೇಶ್ ನಿರಾಣಿ. ಅವರಿದ್ದಾಗಲೂ ಏನು ಬದಲಾವಣೆ ತಾರದವರು ಈಗ ರಾಜಕೀಯಕ್ಕೆ ಇದನ್ನು ಬಳಸಿಕೊಳ್ಳುತ್ತಿರುವುದು ನಾಚಿಕೆಗೇಡಿನ ಸಂಗತಿ.

-ನಾಗಾರ್ಜುನ ಹೊಸಮನಿ, ಕಲಬುರಗಿ

ಬಗೆ ಬಗೆ ಧಗೆ

ಧಗೆ, ಒಬ್ಬೊಬ್ಬರಿಗೆ

ಒಂದೊಂದು ಬಗೆ

ಅಲ್ಲಿ, ಪಂಚ ರಾಜ್ಯಗಳ

ಫಲಿತಾಂಶದ ಧಗೆ

ಇಲ್ಲಿ, ಆಡುತ್ತಿದೆ

ಕುರ್ಚಿಯ ಹೊಗೆ

ನಮ್ಮನಿಮ್ಮೂರುಗಳಲ್ಲಿ

ಜನ-ಜಾನುವಾರುಗಳಿಗೆ

ಮಳೆಯಿಲ್ಲದೆ, ನೀರಿಲ್ಲದೆ

ಸುಡು ಬಿಸಿಲಿನ ಬೇಗೆ!

-ಮ.ಗು. ಬಸವಣ್ಣ, ಮೈಸೂರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.